ನಟಿ ವೈಷ್ಣವಿ ವೈಯಕ್ತಿಕ ವಿಚಾರದಲ್ಲಿ ಸಡನ್ ಆಗಿ ಬಿರುಗಾಳಿ ಎದ್ದಿತ್ತು. ಹೆಣ್ಣು ನೋಡುವ ಶಾಸ್ತ್ರವಾದ ಮೇಲೆ ನಟ ವಿದ್ಯಾಭರಣ್ ಕ್ಯಾರೆಕ್ಟರ್ ಬಗೆಗಿನ ಆಡಿಯೋ ಒಂದು ವೈರಲ್ ಆಗಿತ್ತು. ಇದಾದ ಮೇಲೆ ನಟಿ ವೈಷಗಣವಿ ಇದನ್ನು ಇಲ್ಲಿಗೆ ಬಿಟ್ಟು ಬಿಡೋಣಾ ಎಂದಿದ್ದರು. ಮಗಳು ಇನ್ನೆಲ್ಲಿ ಇದೇ ದುಃಖದಲ್ಲಿ ಕೂತು ಬಿಡುತ್ತಾಳೋ ಎಂದು ಪೋಷಕರಿಗೆ ಚಿಂತೆಯಾಗಿತ್ತು. ಇದೀಗ ಆ ಚಿಂತೆಯನ್ನು ಮರೆಸುವಂತೆ ಆಕ್ಟೀವ್ ಆಗಿದ್ದಾರೆ ನಟಿ ವೈಷ್ಣವಿ.
ವೈಷ್ಣವಿ ವೈಯಕ್ತಿಕ ಜಂಜಾಟ ಮರೆತು ಟ್ಯಾಟೂ ಹಾಕಿಸಿಕೊಂಡಿದ್ದಾರೆ. ಆ ಟ್ಯಾಟೂ ಬಗೆಗಿನ ವಿಡಿಯೋವೊಂದನ್ನು ಇನ್ಸ್ಟಾಗ್ರಾಮ್ ನಲ್ಲಿ ಹಂಚಿಕೊಂಡಿದ್ದಾರೆ. ದಿ ರೇಸಿಂಗ್ ವುಮೆನ್ ಸಿಂಬಲ್ ಟ್ಯಾಟೂ ಹಾಕಿಸಿಕೊಂಡು ಖುಷಿ ಪಟ್ಟಿದ್ದಾರೆ.
ವೈಷ್ಣವಿ ಬಗ್ಗೆ ಅವರ ತಾಯಿ ತುಂಬಾ ಆತಂಕಗೊಂಡಿದ್ದರು. ಮಗಳು ಈ ವಿಚಾರ ಬಂದ ಮೇಲೆ ಸಾಕಷ್ಟು ಡಲ್ ಆಗಿದ್ದನ್ನು ಕಂಡು ಬೇಸರ ಮಾಡಿಕೊಂಡಿದ್ದರು. ಈ ಬಗ್ಗೆ ಸುದ್ದಿಗೋಷ್ಟಿ ನಡೆಸಿದ್ದ ಬಾನು ರವಿಕುಮಾರ್, ವೈಷ್ಣವಿ ಆ ಘಟನೆಯಾದ ಮೇಲೆ ರೂಮಿಂದ ಹೊರ ಬಂದಿಲ್ಲ. ನಾನೇನು ಮಾಡಿದ್ದೀನಿ ನನಗೆ ಹೀಗೆ ಆಗುತ್ತೆ ಮಮ್ಮಿ ಅಂತ ಬೇಸರ ಮಾಡಿಕೊಂಡಿದ್ದಾಳೆ ಎಂದಿದ್ದರು. ಇದೀಗ ಧೈರ್ಯ ತಂದುಕೊಂಡಿರುವ ವೈಷ್ಣವಿ ಖುಷಿಯ ಜೀವನಕ್ಕೆ ಮರಳಲು ಯತ್ನಿಸಿದ್ದಾರೆ.