ಯಾದಗಿರಿ: ಕೊರೊನಾದಿಂದ ಮುಕ್ತಿ ಪಡೆಯೋಕೆ ಎರಡು ಡೋಸ್ ವ್ಯಾಕ್ಸಿನ್ ಹಾಕಿಸಿಕೊಳ್ಳೋದು ಒಂದೇ ಮಾರ್ಗ ಎನ್ನಲಾಗ್ತಾ ಇದೆ. ಆದ್ರೆ ಇಷ್ಟು ದಿನಗಳೆ ಕಳೆದ್ರು ಲಸಿಕೆ ಹಾಕಿಸಿಕೊಳ್ಳೋಕೆ ಜನ ಮಾತ್ರ ಒಲ್ಲೆ ಎನ್ನುತ್ತಿದ್ದಾರೆ. ಅದರಲ್ಲೂ ಗ್ರಾಮೀಣ ಭಾಗದಲ್ಲಂತೂ ಲಸಿಕೆ ಬಗ್ಗೆ ಇರುವ ತಪ್ಪು ಕಲ್ಪನೆ ಇನ್ನು ದೂರವಾಗಿಲ್ಲ.
ಯಾದಗಿರಿ ಜಿಲ್ಲೆಯ ಸುರಪುರ ತಾಲೂಕಿನ ಮಲ್ಲಿಬಾವಿಯಲ್ಲಿ ಅಧಿಕಾರಿಗಳು ಲಸಿಕೆ ಹಾಕೋಕೆ ಇನ್ನಿಲ್ಲದ ಕಸರತ್ತು ನಡೆಸುತ್ತಿದ್ದಾರೆ. ಲಸಿಕೆ ಹಾಕಿಸಿಕೊಳ್ಳಿ ಅಂದ್ರೆ ಜನ ಮಾರು ದೂರ ಓಡ್ತಾ ಇದ್ದಾರೆ.
ಲಸಿಕೆ ಹಾಕುವ ಸಿಬ್ಬಂದಿ ಮನೆ ಮನೆಗೆ ತೆರಳಿ ಜಾಗೃತಿ ಮೂಡಿಸುತ್ತಿದ್ದಾರೆ. ಆದ್ರೆ ಜನ ಮಾತ್ರ ಒಪ್ತಾ ಇಲ್ಲ. ಹೀಗೆ ಸಾಯ್ತೀನೆ ವಿನಃ ಲಸಿಕೆ ತಗೋಳಲ್ಲ ಅನ್ನೋ ಗೋಳು ಒಬ್ಬನಾದಾದ್ರೆ, ಮಹಿಳೆಯೊಬ್ಬರು ಲಸಿಕೆ ಹಾಕಲು ಅಧಿಕಾರಿಗಳು ಬಂದ ಕೂಡಲೇ ಬಾಗಿಲು ಹಾಕಿಕೊಂಡಿದ್ದಾಳೆ. ವ್ಯಾಕ್ಸಿನ್ ಹಾಕಿಸಿಕೊಳ್ಳಮ್ಮ ಅಂದ್ರೆ ನನ್ನ ಗಂಡ ಬರೋವರೆಗೂ ಬಾಗಿಲು ತೆಗೆಯಲ್ಲ ಎಂದಿದ್ದಾಳೆ.
ಹೀಗೆ ಯಾದಗಿರಿ ಜಿಲ್ಲೆಯ ಗ್ರಾಮಸ್ಥರು ಲಸಿಕೆ ಹಾಕಿಸಿಕೊಳ್ಳಲು ನಾನಾ ಕಾರಣ ಹೇಳಿ.. ನಾನಾ ರೀತಿ ನಾಟಕವಾಡಿದ್ದಾರೆ. ಲಸಿಕೆ ನೀಡಲು ಹೋದ ಸಿಬ್ಬಂದಿ ಗ್ರಾಮಸ್ಥರಿಂದ ಹೈರಾಣಾಗಿ ವಾಪಸ್ಸಾಗಿದ್ದಾರೆ. ಎಷ್ಟೇ ಜಾಗೃತಿ ಮೂಡಿಸಿದ್ರು ಸಹ ಲಸಿಕೆ ಬಗ್ಗೆ ಇರುವ ತಪ್ಪು ಕಲ್ಪನೆ ಮಾತ್ರ ಜನರಿಂದ ದೂರ ಆಗ್ತಾ ಇಲ್ಲ.