ಚಿತ್ರದುರ್ಗದ ಶ್ರೀ ರಾಘವೇಂದ್ರ ಸ್ವಾಮಿಗಳ ಮಠದಲ್ಲಿ ಅದ್ದೂರಿಯಾಗಿ ನೆರವೇರಿದ ಉತ್ತರಾರಾಧನಾ ಮಹಾರಥೋತ್ಸವ : ವಿಡಿಯೋ ನೋಡಿ

1 Min Read

 

ಸುದ್ದಿಒನ್, ಚಿತ್ರದುರ್ಗ, ಸೆ.01 : ಶ್ರೀ ಗುರುರಾಘವೇಂದ್ರ ಸ್ವಾಮಿಗಳ 352 ನೇ ಆರಾಧನಾ ಮಹೋತ್ಸವದ ಉತ್ತರಾರಾಧನೆ ಪ್ರಯುಕ್ತ (ಶ್ರಾವಣಮಾಸ ಕೃಷ್ಣಪಕ್ಷ ತೃತೀಯಾ) ನಗರದ ನಂಜನಗೂಡು ಶ್ರೀ ರಾಘವೇಂದ್ರ ಸ್ವಾಮಿಗಳ ಶಾಖಾ ಮಠದಲ್ಲಿ ವಿಜೃಂಭಣೆಯಿಂದ ನೆರವೇರಿತು.

ಬೆಳಗ್ಗೆ ನಿರ್ಮಾಲ್ಯ, ಅಷ್ಟೋತ್ತರ ಸಹಿತ ವಿಶೇಷ ಫಲ ಪಂಚಾಮೃತ ಅಭಿಷೇಕ, ಶ್ರೀ ಗುರುರಾಯರ ವೃಂದಾವನಕ್ಕೆ ವಿಶೇಷ ಫಲ ಅಲಂಕಾರ, ನಗರದ ಪ್ರಮುಖ ರಾಜಬೀದಿಗಳಲ್ಲಿ ಮಹಾ ರಥೋತ್ಸವ, ಉತ್ಸವರಾಯರ ಪಾದಪೂಜೆ, ಕನಕಾಭಿಷೇಕ, ಮಧ್ಯಾಹ್ನ ನೈವೇದ್ಯ, ಅಲಂಕಾರ ಪಂಕ್ತಿ, ಹಸ್ತೋದಕ, ಮಹಾ ಮಂಗಳಾರತಿ, ತೀರ್ಥ ಪ್ರಸಾದಗಳು ನೆರವೇರಿದವು. ಸಾವಿರಾರು ಮಂದಿ ಭಕ್ತಾದಿಗಳು ಅನ್ನದಾನ ಮಹಾಪ್ರಸಾದ ಸ್ವೀಕರಿಸಿದರು.

ಈ ದಿನದ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಸಂಜೆ ಶ್ರೀ ಸಪ್ತಗಿರಿ ಭಜನಾಮಂಡಳಿಯವರಿಂದ ಭಜನೆ, ನಂತರ ಫಲ್ಗುಣಿ ಕಲಾತಂಡ ಹರಿಹರ ಅವರಿಂದ ನೃತ್ಯ ಕಾರ್ಯಕ್ರಮ, ತದನಂತರ ಕುಮಾರಿ ಸ್ತುತಿ ಆರ್ ರಾವ್ ಅವರಿಂದ ದಾಸವಾಣಿ ಕಾರ್ಯಕ್ರಮ ನಡೆಯಿತು.

ತದನಂತರದಲ್ಲಿ ರಜತ ರಥೋತ್ಸವ, ಸ್ವಸ್ತಿವಾಚನ, ಅಷ್ಟಾವಧಾನ, ಮಹಾಮಂಗಳಾರತಿಯ ಕಾರ್ಯಕ್ರಮಗಳಲ್ಲಿ ಭಕ್ತಾದಿಗಳು ಪಾಲ್ಗೊಂಡು ಪುನೀತರಾದರು.

ಮೂರೂ ದಿನ ಆರಾಧನಾ ಕಾರ್ಯಕ್ರಮಗಳಲ್ಲಿ ಪಾಲ್ಗೊಂಡು ಯಶಸ್ವಿಗೊಳಿಸಿದ ಸಕಲ ಸದ್ಭಾಕ್ತಾದಿಗಳಿಗೆ ಶ್ರೀಮಠದ ಪರವಾಗಿ ವ್ಯವಸ್ಥಾಪಕರಾದ ಪ್ರಾಣೇಶ್ ಕೊಪ್ಪರ್ ಅವರು ಹಾಗೂ ಗೌರವ ವಿಚಾರಣಕರ್ತರಾದ ಗೋವಿಂದಮೂರ್ತಿ ಅವರು ಸದ್ಭಕ್ತರಿಗೆ ಧನ್ಯವಾದಗಳನ್ನು ಅರ್ಪಿಸಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *