ಡೆಹ್ರಾಡೂನ್: ಅರಣ್ಯ ಸಚಿವ ಹರಕ್ ಸಿಂಗ್ ರಾವತ್ ಅವರನ್ನ ಬಿಜೆಪಿ ಸರ್ಕಾರ ಸಂಪುಟದಿಂದ ವಜಾಗೊಳಿಸಿದೆ. ಜೊತೆಗೆ ಆರು ವರ್ಷಗಳ ಕಾಲ ಬಿಜೆಪಿತನ್ನ ಪ್ರಾಥಮಿಕ ಸದಸ್ಯತ್ವದಿಂದ ತೆಗೆದು ಹಾಕಲಾಗಿದೆ. ಹೀಗಾಗಿ ರಾವತ್ ಬಿಜೆಪಿ ವಿರುದ್ದ ಕೆಂಡಾಮಂಡಲಾರಾಗಿದ್ದಾರೆ.
ಉತ್ತರಾಖಂಡ್ ವಿಧಾನಸಭಾ ಚುನಾವಣೆಗೂ ಮುನ್ನವೇ ಇಂತದ್ದೊಂದು ಬೆಳವಣಿಗೆ ನಡೆದಿದೆ. ಈ ಸಂಬಂಧ ಸುದ್ದಿಗೋಷ್ಟಿ ನಡೆಸಿ ಮಾತನಾಡಿದ ರಾವತ್, ಇದೀಗ ಕಾಂಗ್ರೆಸ್ ಪರ ಕೆಲಸ ಮಾಡಲಿದ್ದು, ಮುಂದಿನ ಬಾರಿ ಕಾಂಗ್ರೆಸ್ ಪಕ್ಷ ಸರ್ಕಾರ ರಚಿಸಲಿದೆ ಎಂದಿದ್ದಾರೆ.
Union Minister Pralhad Joshi called me to meet in Delhi, due to traffic there was a bit of delay. I wanted to meet him & Home Minister Amit Shah, but as soon as I reached Delhi, I saw on social media that they (BJP) expelled me: Expelled Uttarakhand BJP Minister Harak Singh Rawat pic.twitter.com/yhxfe2TF6F
— ANI (@ANI) January 17, 2022
ಜನಸಾಮಾನ್ಯರ ಕಷ್ಟ ಬಿಜೆಪಿಗೆ ಅರ್ಥವಾಗುವುದಿಲ್ಲ. ನಾನು ಇನ್ಮುಂದೆ ಕಾಂಗ್ರೆಸ್ ಗಾಗಿ ಕೆಲಸ ಮಾಡಲಿದ್ದೇನೆ. ಕಾಂಗ್ರೆಸ್ ಪಕ್ಷ ಸರ್ಕಾರ ರಚಿಸಲಿದೆ. ನನಗೆ ಆ ಪಕ್ಷದ ಬಗ್ಗೆ ಚೆನ್ನಾಗಿ ಗೊತ್ತು. ಮುಂದೆಯೂ ಜನ ಕಲ್ಯಾಣಕ್ಕಾಗಿಯೇ ಕೆಲಸ ಮಾಡ್ತೇನೆ ಎಂದು ಬಿಜೆಪಿ ಬಿಟ್ಟ ಬಳಿಕ ರಾವತ್ ಕಣ್ಣೀರು ಹಾಕಿದ್ದಾರೆ.