ಉತ್ತರಪ್ರದೇಶ ಚುನಾವಣೆ ದಿನಾಂಕ ಘೋಷಣೆಯಾಗಿದ್ದೇ ತಡ ಪಕ್ಷಗಳು ನಾ ಮುಂದು ತಾ ಮುಂದು ಅಂತ ಪ್ರಚಾರಕ್ಕೆ ನಿಂತು ಬಿಟ್ಟಿವೆ. ಎಸ್ಪಿ, ಬಿಎಸ್ಪಿ, ಕಾಂಗ್ರೆಸ್ ಸೇರಿದಂತೆ ಸಣ್ಣ ಪುಟ್ಟ ಪಕ್ಷಗಳಿಗೂ ಇರುವ ಗುರಿ ಒಂದೇ ಅದು ಬಿಜೆಪಿ ಪಕ್ಷವನ್ನ ಸೋಲಿಸಬೇಕು ಎಂಬುದು. ಆ ಉದ್ದೇಶದ ಹಾದಿಯಲ್ಲೇ ಇದೀಗ ಪಕ್ಷಗಳು ಸಾಗುತ್ತಿವೆ.
ಈಗಾಗಲೇಅಖಿಲೇಶ್ ಯಾದವ್ ಕೂಡ ಬಿಜೆಪಿಯಲ್ಲಿರುವ ದೊಡ್ಡ ದೊಡ್ಡವರನ್ನೇ ತಮ್ಮ ಪಕ್ಷಕ್ಕೆ ಸೇರ್ಪಡೆ ಮಾಡಿಕೊಂಡಿದ್ದಾರೆ.ಇನ್ನು ಪ್ರಿಯಾಂಕಾ ಗಾಂಧಿ ಮಹಿಖೆಯರಿಗೆ ಅವಕಾಶ ನೀಡುತ್ತಿದ್ದಾರೆ. ಸಂತ್ರಸ್ತರನ್ನ ಸೆಳೆಯುತ್ತಿದ್ದಾರೆ. ಇದೀಗ ಎಲ್ಲಾ ಪಕ್ಷಗಳು ಸಮುದಾಯಗಳನ್ನ ಟಾರ್ಗೆಟ್ ಮಾಡಲು ಶುರು ಮಾಡಿದ್ದಾರೆ.
ಮತ್ತೊಂದು ವಿಚಾರವೆಂದ್ರೆ ಯಾವುದೇ ಚುನಾವಣೆ ಬಂದ್ರು ಅದು ಮೊದಲು ವಿಚಾರ ಮಾಡೋದು ಜಾತಿಯಾಧಾರಿತ. ಯಾವ ಸಮುದಾಯದವರು ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ ಎಂಬುದು. ಉತ್ತರಪ್ರದೇಶದಲ್ಲಿ ದಲಿತರು ಶೇಕಡ 22 ರಷ್ಟಿದ್ದರೆ, ಶೇಕಡಾ 19ರಷ್ಟು ಮುಸ್ಲಿಂ ಮತದಾರರಿದ್ದಾರೆ. ಜಾಟ್ ಮತಗಳು ಶೇಕಡ 20 ರಷ್ಟಿದೆ. ಈ ಮೂರು ಸಮುದಾಯದವರು ಒಂದಾದ್ರೆ ಲಾಭ ಜಾಸ್ತಿ. ಹೀಗಾಗಿ ಎಲ್ಲಾ ಪಕ್ಷಗಳು ಈ ಮೂರು ಸಮುದಾಯದಲ್ಲಿ ಒಂದು ಸಮುದಾಯದವರನ್ನಾದರೂ ಸೆಳೆಯುವ ಫ್ಲ್ಯಾನ್ ಮಾಡಿಕೊಳ್ಳುತ್ತಿದ್ದಾರೆ.