ಮಂಗಳೂರು: ಸಿ ಎಂ ಇಬ್ರಾಹಿಂಗೆ ಕಾಂಗ್ರೆಸ್ ನಾಯಕರ ನಡೆ ಬೇಸರ ತರಿಸಿದ್ದು, ಕಾಂಗ್ರೆಸ್ ಬಿಡುವ ತೀರ್ಮಾನ ಮಾಡಿದ್ದಾರೆ. ಅವರು ಕಾಂಗ್ರೆಸ್ ಬಿಟ್ಟರೆ ಕಾಂಗ್ರೆಸ್ ಗೆ ಡ್ಯಾಮೇಜ್ ಆಗುತ್ತೆ ಅನ್ನೋದು ಅವರ ಗಮನಕ್ಕೂ ಬಂದಿದೆ. ಚುನಾವಣೆ ಕೂಡ ಹತ್ತಿರದಲ್ಲೇ ಇದೆ. ಹೀಗಾಗಿ ಹೆಚ್ಚು ರಿಸ್ಕ್ ತೆಗೆದುಕೊಳ್ಳಲು ಸಮಯವಿಲ್ಲ. ಅದರಂತೆ ಈಗ ಡ್ಯಾಮೇಜ್ ಕಂಟ್ರೋಲ್ ಗೆ ಕೈ ಹಾಕಿರುವ ಕಾಂಗ್ರೆಸ್ ಯು ಟಿ ಖಾದರ್ ಗೆ ಉನ್ನತ ಹುದ್ದೆ ನೀಡಿದೆ.
ವಿಧಾನಸಭೆಯ ಉಪನಾಯಕನ ಸ್ಥಾನಕ್ಕೆ ಕರಾವಳಿ ಭಾಗದ ಪ್ರಭಾವಿ ಶಾಸಕ ಯು ಟಿ ಖಾದರ್ ಅವರನ್ನ ಆಯ್ಕೆ ಮಾಡಿ ಎಐಸಿಸಿ ಆದೇಶ ಹೊರಡಿಸಿದೆ. ಈ ಮೂಲಕ ಮುಸ್ಲಿಂ ಸಮುದಾಯಕ್ಕೆ ಮಣೆ ಹಾಕಿದೆ. ಯು ಟಿ ಖಾದರ್ ಸದ್ಯ ಕಾಂಗ್ರೆಸ್ ನಲ್ಲಿ ಕರಾವಳಿ ಭಾಗದಲ್ಲಿ ಸ್ಟ್ರಾಂಗ್ ಆಗಿ ಗುರತಿಸಿಕೊಂಡಿದ್ದಾರೆ.
2013 ರಲ್ಲಿ ಸಿದ್ದರಾಮಯ್ಯ ಸರ್ಕಾರದಲ್ಲಿ ಸಚಿವರಾಗಿಯೂ ಕಾರ್ಯ ನಿರ್ವಹಿಸಿದ್ದವರು. ಅಷ್ಟೇ ಅಲ್ಲ ಕಾಂಗ್ರೆಸ್ ಮತ್ತು ಜೆಡಿಎಸ್ ಸಮ್ಮಿಶ್ರ ಸರ್ಕಾರದಲ್ಲೂ ಸಚಿವರಾಗಿ ಕಾರ್ಯ ನಿರ್ವಹಿಸಿದ್ದವರು. ಇದೀಗ ಸಿದ್ದರಾಮಯ್ಯ ಅವರು ತಮ್ಮ ಆಪ್ತರಿಗೆ ಆ ಸ್ಥಾನ ಕೊಡಿಸುವಲ್ಲಿ ಮತ್ತೆ ತಾನು ಹೈಕಮಾಂಡ್ ನಲ್ಲಿ ಪ್ರಭಾವಿ ಅನ್ನೋದನ್ನ ಪ್ರೂವ್ ಮಾಡಿದ್ದಾರೆ.