ವಿಶೇಷ ಲೇಖನ :
ಜೆ. ಪರಶುರಾಮ
ನಿವೃತ್ತ ಹಿರಿಯ ಭೂವಿಜ್ಞಾನಿ
ಗೌರವಾಧ್ಯಕ್ಷರು, ವಿ.ಕೆ.ಎಸ್., ಚಿತ್ರದುರ್ಗ
ಸದಸ್ಯರು, ಬೆಂಗಳೂರು ಸೌತ್ ಸೆಂಟರ್ (ಒ.)
ಮೊಬೈಲ್ ಸಂಖ್ಯೆ : 94483 38821
ನಮ್ಮ ರಾಜ್ಯದಲ್ಲಿ ಅಂತರ್ಜಲ(ಜೀವಜಲ) ಬೇಡಿಕೆ ಹೆಚ್ಚಾಗಿದೆ. ಭೂತಾಯಿಯ ಒಡಲನ್ನು ಬಗೆದು ಅಂತರ್ಜಲವನ್ನು ಬರಿದು ಮಾಡುವ ಕೆಲಸವನ್ನು ಮಿತಿಗೊಳಿಸುವುದು ಪ್ರತಿಯೊಬ್ಬರ ಹೊಣೆಯಾಗಿದೆ ಎಂದು ನಿವೃತ್ತ ಹಿರಿಯ ಭೂವಿಜ್ಞಾನಿ ಜೆ. ಪರುಶುರಾಮ ಮನವಿ ಮಾಡಿದ್ದಾರೆ.
ಪತ್ರಿಕಾ ಪ್ರಕಟಣೆ ಮೂಲಕ ಸಾರ್ವಜನಿಕರ ಹಿತಾಸಕ್ತಿಗಾಗಿ ಈ ಮನವಿ ಮಾಡಿದ್ದಾರೆ. ನಿಸರ್ಗದ ಜಲಚಕ್ರದಲ್ಲಿ ಶೇ 97ರಷ್ಟು ಸಮುದ್ರಗಳಲ್ಲಿ ಸಂಗ್ರಹಗೊಂಡಿರುವುದು ಉಪ್ಪು ನೀರು. ಶುದ್ಧಜಲ ನೀರು ಕೇವಲ ಪ್ರತಿಶತ ಮೂರು ಶುದ್ಧ ಜಲಮೂಲವನ್ನು ಪ್ರಮುಖವಾಗಿ ಮೇಲ್ಮೈಜಲ ಹಾಗೂ ಅಂತರ್ಜಲ ಎಂದು ಕರೆಯುತ್ತಾರೆ. ನದಿ, ಕೆರೆ-ಕುಂಟೆ, ಸರೋವರ ಮತ್ತು ಮಂಜುಗಡ್ಡೆಯ ರೂಪದಲ್ಲಿ ಸಂಗ್ರಹವಾಗಿರುವುದು. ಮೇಲ್ಮೈಜಲ ನೀರು ಭೂಮಿಯಲ್ಲಿ ಇಂಗಿ ಶೇಖರಣೆಗೊಂಡಿರುವುದು. ಭೂಜಲ ಅಥವಾ ಅಂತರ್ಜಲ, ಜಲ ಸಮೃದ್ಧಿಯಿಂದ ಕೂಡಿ ಬಾವಿಗಳಿಗೆ ಮತ್ತು ತಗ್ಗು ಪ್ರದೇಶಗಳಲ್ಲಿ ಸಾಕಷ್ಟು ಪ್ರಮಾಣದಲ್ಲಿ ನೀರನ್ನು ಕೊಡುವ ಭೂಪದರವನ್ನು ‘ಜಲಧರ’ ಎಂದು ಕರೆಯಲಾಗಿದೆ.
ಅಂತರ್ಜಲವು ಜಲ ಚಕ್ರದ ಒಂದು ಭಾಗವಾಗಿದ್ದು, ಮಳೆಯು ಅಂತರ್ಜಲ ಉತ್ಪತ್ತಿಗೆ ಮುಖ್ಯಕಾರಣವಾಗಿದೆ. ಮಳೆಯ ನೀರು ಭೂಮಿಯಲ್ಲಿ ಒಳಸೇರಿ ಅಂತರ್ವಾಹಿನಿಯಾಗಿ ಅಲೆದಳೆದು ಅಂತಿಮವಾಗಿ ಸಮುದ್ರವನ್ನು ಸೇರುತ್ತದೆ. ನಿಂತಲ್ಲಿ ನಿಲ್ಲಲೊಲ್ಲದ ಸದಾ ಸಂಚಲನಶೀಲ ಸಂಪನ್ಮೂಲ, ಈ ಅಲೆದಾಟದಲ್ಲಿ ಮನುಷ್ಯ ನಾದಿಯಾಗಿ ಸಕಲ ಜೀವ ಜಂತುಗಳಿಗೆ ಜೀವಾಧಾರವಾಗಿದೆ.
ಭೂಮಿಯು ಸುಮಾರು 450 ಕೋಟಿ ವರ್ಷಗಳ ಹಿಂದೆ ಉಗಮಗೊಂಡಿದೆ ಎಂದು ವಿಜ್ಞಾನಿಗಳ ಅಂಬೋಣ. ಭೂಮಿಯ ಮೇಲೆ ನೀರಿನಲ್ಲಿ ಜೀವದ ಉಗಮವು ಸುಮಾರು 350 ಕೋಟಿ ವರ್ಷಗಳಿಗೂ ಮೊದಲು ಎಂಬುವುದು ವಿಜ್ಞಾನಿಗಳ ಅನಿಸಿಕೆ. ಇವೆರಡರ ನಡುವಿನ ಅವಧಿಯಲ್ಲಿ ನೀರು ಜನನವಾಗಿದೆಯೆಂದು ಉಹಿಸಲಾಗಿದೆ. ನೀರು ನಿಸರ್ಗದ ಅತ್ಯಮೂಲ್ಯವಾದ ಕೊಡಿಗೆ ಹಾಗೂ ಪಂಚಭೂತಗಳಲ್ಲಿ ಒಂದು. ಸರ್ವಜೀವರಾಶಿಯು ಅಸ್ತಿತ್ವಕ್ಕೆ ನೀರೇ ಕಾರಣ ಮತ್ತು ಜಲವಿಲ್ಲದೆ ಜೀವನವಿಲ್ಲ.
ಭೂವಿಜ್ಞಾನಿಗಳಿಗೆ ಭೂಗರ್ಭದಲ್ಲಿರುವ ಖನಿಜಸಂಪತ್ತನ್ನು ಶೋಧಿಸುವ ಕಾರ್ಯವಾದರೆ ಭೂಜಲಶಾಸ್ತ್ರಜ್ಞರಿಗೆ ಅಂತರ್ಜಲ ಸಂಶೋಧನೆ ಕಾರ್ಯವಾಗಿದೆ. ನೀರು ಜೈವಿಕತೆಯ ಪ್ರತೀಕ, ಒಂದು ಪ್ರದೇಶದಲ್ಲಿ ಜೀವ ವೈವಿದ್ಯೆ ಕಂಡುಬಂದರೆ ಅಲ್ಲಿ ನೀರು ಸಮೃದ್ಧಿಯ ಲಕ್ಷಣಗಳು ಸೂಚಿಸುತ್ತದೆ. ಮಂಗಳ ಗ್ರಹದ ಸಂಶೋದನೆಯಲ್ಲಿ ಇದನ್ನು ಕಾಣಬಹುದು. ಈ ಗ್ರಹದಲ್ಲಿ ನೀರಿನ ಸುಳುವಿಗಾಗಿ ಕಳೆದ ಹಲವಾರು ದಶಕಗಳಿಂದ ಸಂಶೋಧನೆ ಮುಂದುವರಿದಿದೆ. ಇತ್ತೀಚಿಗೆ ನೀರಿನ ಸುಳಿವು ಗೋಚರವಾಗಿರುವುದರಿಂದ ಜೀವಿಗಳು ಬದಕಿರಬಹುದೆಂದು ಆಶಾಭಾವನೆಯಲ್ಲಿ ಸಂಶೋಧನೆಗಳು ಮುಂದುವರಿದಿದೆ. ಒಂದು ಜೀವಿಗೇ ನೀರೇ ಆಧಾರವಾದಂತೆ ಒಂದು ದೇಶದ ಪ್ರಗತಿಯು ಜಲಸಂಪನ್ಮೂಲಗಳ ಲಭ್ಯತೆಯ ಸ್ಥಿತಿಗತಿಯನ್ನು ಅವಲಂಬಿಸಿರುತ್ತವೆ.
ಇಂದಿನ ಸಂಶೋಧನಗಳನ್ನು ವಿಶ್ಲೇಷಿಸಿದಾಗ ಅಧಿಕ ಪ್ರಮಾಣದಲ್ಲಿ ಅಂತರ್ಜಲದ ಬಳಕೆ ಮಾಡುತ್ತಿರುವ ದೇಶಗಳಲ್ಲಿ ಭಾರತ ದೇಶವು ಒಂದು ಎಂಬುದಾಗಿ USGS ತಜ್ಞರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಮೇಲಿನ ಎಲ್ಲಾ ಅಂಶಗಳನ್ನು ಗಮನಿಸಿ ಅಂತರ್ಜಲದ ಬಳಕೆಯನ್ನು ಮಿತಿಗೊಳಿಸುವುದು ನಮ್ಮ ಜಿಲ್ಲೆಗೂ ಅನಿವಾರ್ಯ ಎಂದು ಅಭಿಪ್ರಾಯ ಪಟ್ಟಿದ್ದಾರೆ.
ವಿಶೇಷ ಲೇಖನ :
ಜೆ. ಪರಶುರಾಮ
ನಿವೃತ್ತ ಹಿರಿಯ ಭೂವಿಜ್ಞಾನಿ
ಗೌರವಾಧ್ಯಕ್ಷರು, ವಿ.ಕೆ.ಎಸ್., ಚಿತ್ರದುರ್ಗ
ಸದಸ್ಯರು, ಬೆಂಗಳೂರು ಸೌತ್ ಸೆಂಟರ್ (ಒ.)
ಮೊಬೈಲ್ ಸಂಖ್ಯೆ : 94483 38821






