ಭಾರತೀಯ ತಿಂಡಿ ಎಂದರೆ ಎಲ್ಲರಿಗೂ ಇಷ್ಟವೇ. ಅದರಲ್ಲೂ ವಿದೇಶಗಳಲ್ಲಿ ವಾಸಿಸುವ ಭಾರತೀಯರಿಗೆ ತಮ್ಮ ನೆಲದ ಆಹಾರ ಸಿಕ್ಕರಂತು ಖುಷಿಯೋ ಖುಷಿ. ಅಮೆರಿಕಾದಲ್ಲಿ ಇಂಡಿಯನ್ ಕ್ರೆಪ್ ಕಂ ಹೆಸರಿನ ಹೊಟೇಲ್ ಒಂದಿದೆ. ಆ ಹೊಟೇಲ್ ನಲ್ಲಿ ಇಡ್ಲಿ ಮತ್ತು ದೋಸೆಯನ್ನು ಪೂರೈಸಲಾಗುತ್ತಿದೆ. ಆದರೆ ಒಂದು ದೋಸೆಯ ಬೆಲೆ ಕೇಳಿ ಅಲ್ಲಿನ ಜನ ಬೆಚ್ಚಿ ಬಿದ್ದಿದ್ದಾರೆ.
ಮೆನುವಿನಲ್ಲಿರುವ ರೆಸ್ಟೋರೆಂಟ್‌ನಲ್ಲಿ ಕ್ಲಾಸಿಕ್ ಸೌತ್ ಇಂಡಿಯನ್ ದೋಸೆಗೆ ‘ನೇಕೆಡ್ ಕ್ರೆಪ್’ ಎಂದು ಹೆಸರಿಸಲಾಗಿದೆ, ಸಾಂಬಾರ್ ವಡಾಕ್ಕೆ ‘ಡಂಕ್ಡ್ ಡೋನಟ್ ಡಿಲೈಟ್’ ಎಂದು ಹೆಸರಿಸಲಾಗಿದೆ, ಮಸಾಲಾ ದೋಸೆಗೆ ‘ಸ್ಮ್ಯಾಶ್ಡ್ ಕ್ರೆಪ್’ ಎಂದು ಹೆಸರಿಸಲಾಗಿದೆ. ಜನಪ್ರಿಯ ಭಾರತೀಯ ಉಪಹಾರ ಇಡ್ಲಿಗೆ ‘ಡಂಕ್ಡ್ ರೈಸ್ ಕೇಕ್ ಡಿಲೈಟ್’ ಎಂದು ಹೆಸರಿಸಲಾಗಿದೆ.
“ಸ್ಮಾಶ್ಡ್ ಆಲೂಗೆಡ್ಡೆ ಕ್ರೇಪ್” ಅನ್ನು ವಿಪರೀತವಾಗಿ ಹೆಚ್ಚಿನ ಬೆಲೆಯಲ್ಲಿ ಮಾರಾಟ ಮಾಡಲಾಗುತ್ತದೆ ಅದು $18.69 ಅಂದರೆ ₹1,494, ಆದರೆ ‘ನೇಕೆಡ್ ಕ್ರೇಪ್’ ಬೆಲೆ $17.59 ಅಂದರೆ ಸುಮಾರು ₹1,406. “ಡಂಕ್ಡ್ ಡೋನಟ್ ಡಿಲೈಟ್” ಬೆಲೆ $16.49 ಆಗಿದ್ದು ಅದು ₹1,318 ಆಗಿದ್ದರೆ “ಡಂಕ್ಡ್ ರೈಸ್ ಕೇಕ್ ಡಿಲೈಟ್” ಅನ್ನು $15.39 ಅಂದರೆ ₹1,230. ಇನಿಕಾ ಎಂಬ ಟ್ವಿಟರ್ ಬಳಕೆದಾರರಿಂದ ಜುಲೈ 17 ರಂದು ಚಿತ್ರವನ್ನು ಹಂಚಿಕೊಂಡಿದ್ದಾರೆ.