ನವದೆಹಲಿ: ಸದ್ಯ ಆಷಾಢದ ಮಾಸದ ಎರಡನೇ ವಾರ ಆರಂಭವಾಗಿದೆ. ಈ ಆಷಾಢ ಮುಗಿಯುವ ತನಕ ಶುಭ ಕಾರ್ಯಗಳು ಅಷ್ಟಾಗಿ ನಡೆಯುವುದಿಲ್ಲ. ಹೀಗಾಗಿ ಚಿನ್ನ ಬೆಳ್ಳಿ ಕೊಳ್ಳುವವರು ಈ ತಿಂಗಳ ಮೊರೆ ಹೋಗುತ್ತಾರೆ. ಹಾಗಾದ್ರೆ ಇಂದಿನ ಚಿನ್ನ ಬೆಳ್ಳಿಯ ಬೆಲೆ ಎಷ್ಟಿದೆ ಎಂಬ ಮಾಹಿತಿ ಇಲ್ಲಿದೆ.
ಭಾರತೀಯ ಮಾರುಕಟ್ಟೆಯಲ್ಲಿ 10 ಗ್ರಾಂ 24 ಕ್ಯಾರೆಟ್ ಚಿನ್ನದ ಬೆಲೆಯು ಪ್ರಸ್ತುತ 51,110 ರೂಪಾಯಿ ಇದೆ. ಇನ್ನು ಒಂದು ಕಿಲೋ ಬೆಳ್ಳಿಯ ಬೆಲೆ 57,000 ರೂ.ಗಳಾಗಿದ್ದು, ನಿನ್ನೆಯ ಖರೀದಿ ಬೆಲೆಯಂತೆಯೇ ಇದೆ. ಯಾವುದೇ ವ್ಯತ್ಯಾಸವಾಗಿಲ್ಲ.
ಉತ್ಪಾದನಾ ಶುಲ್ಕಗಳು, ರಾಜ್ಯ ತೆರಿಗೆಗಳು ಮತ್ತು ಅಬಕಾರಿ ಸುಂಕ ಸೇರಿದಂತೆ ವಿವಿಧ ಅಂಶಗಳು ದೈನಂದಿನ ಆಧಾರದ ಮೇಲೆ ಚಿನ್ನದ ಬೆಲೆಯ ಮೇಲೆ ಪ್ರಭಾವ ಬೀರುತ್ತವೆ. ದೇಶದ ವಿವಿಧ ನಗರಗಳಿಂದ ಶನಿವಾರದ ಚಿನ್ನದ ಬೆಲೆಗಳು ಇಲ್ಲಿವೆ
ಗುಡ್ ರಿಟರ್ನ್ಸ್ ವೆಬ್‌ಸೈಟ್ ಪ್ರಕಾರ, 10 ಗ್ರಾಂ 22-ಕ್ಯಾರೆಟ್ ಚಿನ್ನವನ್ನು 46,850 ರೂ.ಗೆ ನವದೆಹಲಿ, ಮುಂಬೈ ಮತ್ತು ಕೋಲ್ಕತ್ತಾದಲ್ಲಿ ಮಾರಾಟ ಮಾಡಲಾಗುತ್ತಿದೆ. ಅದೇ ಪ್ರಮಾಣದ ಹೆಚ್ಚು ಬೇಡಿಕೆಯಿರುವ ಲೋಹವನ್ನು ಚೆನ್ನೈನಲ್ಲಿ 46,760 ರೂ.ಗೆ ಮಾರಾಟ ಮಾಡಲಾಗುತ್ತಿದೆ.
ಪ್ರಸ್ತುತ ಬೆಲೆಗಳ ಪ್ರಕಾರ 10 ಗ್ರಾಂ 24 ಕ್ಯಾರೆಟ್ ಚಿನ್ನದ ಬೆಲೆ ಮುಂಬೈನಲ್ಲಿ 51,110 ರೂ., ನವದೆಹಲಿಯಲ್ಲಿ 51,110 ರೂ. ಮತ್ತು ಕೋಲ್ಕತ್ತಾದಲ್ಲಿ 51,110 ರೂ. ಚೆನ್ನೈನಲ್ಲಿ, ಅದೇ ಪ್ರಮಾಣದ 24-ಕ್ಯಾರೆಟ್ ಶುದ್ಧತೆಯನ್ನು ಖರೀದಿಸಿ 51,010 ರೂ.ಗೆ ಮಾರಾಟ ಮಾಡಲಾಗುತ್ತದೆ.
10 ಗ್ರಾಂ 22-ಕ್ಯಾರೆಟ್ ಚಿನ್ನವು ಕೇರಳ ಮತ್ತು ಹೈದರಾಬಾದ್‌ನಲ್ಲಿ 46,850 ರೂ.ಗೆ ಮಾರಾಟಕ್ಕೆ ಲಭ್ಯವಿದ್ದು, ಅದೇ ಪ್ರಮಾಣದ ಬೆಂಗಳೂರು, ಮಂಗಳೂರು ಮತ್ತು ಮೈಸೂರಿನಲ್ಲಿ 46,880 ರೂ. ಭುವನೇಶ್ವರದಲ್ಲಿ ಇದೇ ಮೊತ್ತದ ಬೆಲೆ 46,850 ರೂ. ಆಗಿದೆ.