ಚಿತ್ರದುರ್ಗದಲ್ಲಿ ನಾಳೆ ಅರ್ಬನ್ ಇಂಡಿಯಾ ವಸ್ತು ಪ್ರದರ್ಶನ ಮತ್ತು ಮಾರಾಟ ಮೇಳ : ಸಿಲ್ಕ್ಸ್ ಸೀರೆಗಳು, ಬೆಳ್ಳಿ ಹಾಗೂ ವಿವಿಧ ಹರಳುಗಳ ಆಭರಣಗಳು ಸೇರಿದಂತೆ ಏನೆಲ್ಲಾ ಇರುತ್ತೆ ? ಇಲ್ಲಿದೆ ಸಂಪೂರ್ಣ ಮಾಹಿತಿ…!

1 Min Read

 

 

ಸುದ್ದಿಒನ್, ಚಿತ್ರದುರ್ಗ, ಅಕ್ಟೋಬರ್.10 : ದಸರಾ ದೀಪಾವಳಿ ಹಬ್ಬದ ಪ್ರಯುಕ್ತ ನಗರದ ಉಮಾಪತಿ ಚೌಲ್ಟ್ರಿ ಸಭಾಂಗಣದಲ್ಲಿ ನಾಳೆ (ಅಕ್ಟೋಬರ್.11 ರಂದು) ಅರ್ಬನ್ ಇಂಡಿಯಾ ವಸ್ತು ಪ್ರದರ್ಶನ ಮತ್ತು ಮಾರಾಟ ಮೇಳ ನಡೆಯಲಿದೆ.

ವಿವಿಧ ರಾಜ್ಯಗಳ ಸೀರೆಗಳು, ಕರಕುಶಲ ಹಾಗೂ ಅಲಂಕಾರಿಕ ವಸ್ತುಗಳು, ಗ್ರಾಮೋದ್ಯೋಗ ಉತ್ಪನ್ನಗಳ ಪ್ರದರ್ಶನ ಹಾಗೂ
ಪ್ರಸಿದ್ಧ ಬ್ರಾಂಡ್‌ಗಳ ವಸ್ತುಗಳು ಇಲ್ಲಿ ದೊರೆಯಲಿವೆ. ವಾರಣಾಸಿಯಲ್ಲಿ ಕೈಮಗ್ಗದಿಂದ ನೇಯ್ದು ತರಲಾದ ಬನಾರಸ್ ಸಿಲ್ಕ್ಸ್ ಹಾಗೂ ಕಾಟನ್ ಸೀರೆಗಳು, ಫ್ಯಾಷನ್ ಡಿಸೈನ್‌ರ ಫ್ಯಾನ್ಸಿ ಸೀರೆ ರೂ. 1,100 ರಿಂದ 28 ಸಾವಿರ ರೂ.ವರೆಗಿನ ಉತ್ಪನ್ನಗಳು ಇಲ್ಲಿ ಲಭ್ಯವಿರುತ್ತದೆ.  ಹಾಗೂ ಸಿಲ್ಕ್ಸ್ ಸೀರೆಗಳು, ಬೆಳ್ಳಿ ಹಾಗೂ ವಿವಿಧ ಹರಳುಗಳಿಂದ ಸಿದ್ಧಗೊಂಡ ಆಭರಣಗಳು, ಬೆಂಗಳೂರಿನ ಸಂಚಯ ಡಿಸೈನರ್ ಕುರ್ತೀಸ್, ಕೊಯಮತ್ತೂರು ಡ್ರೀಮ್ ಸ್ಟುಡಿಯೋ ಸಿದ್ಧಪಡಿಸಿದ ಸೂಪರ್ ಸೈಜ್ ಬೆಡ್‌ಶಿಟ್‌ಗಳು,ಡಿಸೈನರ್ ಕೈಚೀಲಗಳು, ಸೌಂದರ್ಯ ವರ್ಧಕ ಸಾಧನೆಗಳು, ಬ್ರಾಂಡೆಡ್ ಮಕ್ಕಳ ಉಡುಪುಗಳು ಸಹ ಇಲ್ಲಿ ದೊರೆಯುತ್ತವೆ.

ಕೇವಲ ಒಂದು ದಿನದ ವಸ್ತು ಪ್ರದರ್ಶನ ಮತ್ತು ಮಾರಾಟ ಮೇಳವಾಗಿರುವುದರಿಂದ ಈ ಸುವರ್ಣ ಅವಕಾಶವನ್ನು ಚಿತ್ರದುರ್ಗದ ಜನತೆ ಸದುಪಯೋಗ ಪಡಿಸಿಕೊಳ್ಳಲು ಸಂಸ್ಥೆ ಪ್ರಕಟಣೆಯಲ್ಲಿ ತಿಳಿಸಿದೆ.

Share This Article
Leave a Comment

Leave a Reply

Your email address will not be published. Required fields are marked *