ಲಖನೌ: ಮುಂದಿನ ವರ್ಷ ನಡೆಯಲಿರುವ ವಿಧಾನಸಭಾ ಚುನಾವಣೆಗೂ ಮುನ್ನ ಉತ್ತರ ಪ್ರದೇಶದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಹಲವು ಯೋಜನೆಗಳಿಗೆ ಚಾಲನೆ ನೀಡಿದ್ದಾರೆ.
ಇದರ ಭಾಗವಾಗಿ 36,230 ಕೋಟಿ ರೂ.ಗಳ ಗಂಗಾ ಎಕ್ಸ್ ಪ್ರೆಸ್ ವೇ ಯೋಜನೆಗೆ ಪ್ರಧಾನಿ ಶನಿವಾರ ಶಂಕುಸ್ಥಾಪನೆ ನೆರವೇರಿಸಿದರು.ಈ ವೇಳೆ ಮೋದಿಯವರು ತಮ್ಮದೇ ಶೈಲಿಯಲ್ಲಿ ಭಾಷಣ ಮಾಡಿ, ತಮ್ಮ ಛಾಪು ಮೂಡಿಸಿದರು. ಈ ಬಾರಿ ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರ ಆಡಳಿತ ವೈಖರಿಯ ಬಗ್ಗೆ ಹೊಗಳಿಕೆಯ ಸುರಿಮಳೆಗೈದರು. ಮತ್ತು ಪ್ರತಿಪಕ್ಷಗಳನ್ನು ತಮ್ಮದೇ ಆದ ಧಾಟಿಯಲ್ಲಿ ತರಾಟೆಗೆ ತೆಗೆದುಕೊಂಡರು.
ರಾಜ್ಯದಲ್ಲಿ ಅಕ್ರಮ ಕಟ್ಟಡಗಳನ್ನು ಬುಲ್ಡೋಜರ್ ಒಂದು ನೆಲಸಮ ಮಾಡುತ್ತಿದೆ. ಇದರಿಂದಾಗಿ ಆ ಮಾಫಿಯಾವನ್ನು ನಂಬಿದವರಿಗೆ ತೊಂದರೆಯಾಗುತ್ತಿದೆ. ಆದರೆ ಜನರು ಮಾತ್ರ ಜನರು ಸಂತಸಗೊಂಡಿದ್ದಾರೆ. ಅದಕ್ಕೇ ಜನರು ಯುಪಿ + ಯೋಗಿ = ಉಪಯೋಗಿ (ಬಹಳ ಉಪಯುಕ್ತ) ಎಂದು ಹೇಳುತ್ತಿದ್ದಾರೆ ಎಂದು ಹಾಸ್ಯ ಚಟಾಕಿ ಹಾರಿಸಿ ಎಲ್ಲರ ಮನಗೆದ್ದರು.
ಇತ್ತೀಚೆಗೆ ನಡೆದ ಐಟಿ ದಾಳಿಯ ಬಗ್ಗೆ ಉತ್ತರ ಪ್ರದೇಶದ ಮಾಜಿ ಮುಖ್ಯಮಂತ್ರಿ ಅಖಿಲೇಶ್ ಯಾದವ್ ಟೀಕಿಸಿದ್ದರು. ಈ ಕುರಿತು ಪ್ರತಿಕ್ರಿಯಿಸಿದ ಮೋದಿ, ಈ ಹಿಂದೆ ಅಭಿವೃದ್ಧಿ ಮತ್ತು ಯೋಜನೆಗಳ ಹೆಸರಿನಲ್ಲಿ ಸಾರ್ವಜನಿಕರ ಹಣವನ್ನು ಹೇಗೆ ದುರ್ಬಳಕೆ ಮಾಡಿಕೊಳ್ಳಲಾಗಿದೆ ಎಂಬುದು ನಮಗೆಲ್ಲರಿಗೂ ತಿಳಿದಿದೆ. ಅವೆಲ್ಲವೂ ಕಾಗದದಲ್ಲಿ ಮಾತ್ರ ಕಾಣಿಸುತ್ತಿದ್ದವು. ಮತ್ತು ಅವರ ಜೇಬುಗಳು ಮಾತ್ರ ತುಂಬುತ್ತಿದ್ದವು. ಆದರೆ ಈಗ ಅಭಿವೃದ್ಧಿ ಕಾರ್ಯಗಳಿಗೆ ಮಾತ್ರ ಜನರ ಹಣ ಬಳಕೆಯಾಗುತ್ತಿದೆ ಎಂದರು.