ನವದೆಹಲಿ; ಇಂದು ಕೇಂದ್ರ ಲೋಕಸೇವಾ ಆಯೋಗದ ಟಾಪರ್ ಪಟ್ಟಿ ಬಿಡುಗಡೆಯಾಗಿದೆ. ಈ ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಶಕ್ತಿ ದುಬೆ ಟಾಪರ್ ಆಗಿದ್ದಾರೆ. ಹರ್ಷಿತಾ ಗೋಯೆಲ್ ದ್ವಿತೀಯ ಸ್ಥಾನ ಪಡೆದಿದ್ದಾರೆ. ಅಂತಿಮ ಫಲಿತಾಂಶ ಪ್ರಕಟವಾಗಿದ್ದು, ಅದರಲ್ಲಿ 1,009 ಅಭ್ಯರ್ಥಿಗಳು ಈ ಬಾರಿ ಲೋಕಸೇವಾ ಆಯೋಗಕ್ಕೆ ಆಯ್ಕೆಯಾಗಿದ್ದಾರೆ.
ಶಕ್ತಿ ದುಬೇ ಮೂಲತಃ ಪ್ರಯಾಗ್ ರಾಜ್ ನವರಾಗಿದ್ದಾರೆ. UPSC ಪರೀಕ್ಷೆ ಹಾಗೂ ಸಂದರ್ಶನದಲ್ಲಿ ಆಯ್ಕೆಯಾದ ಈ 1,009 ಮಂದಿಯೂ ಭಾರತೀಯ ಆಡಳಿತ ಸೇವೆ, ಭಾರತೀಯ ವಿದೇಶಾಂಗ ಸೇವೆ, ಭಾರತೀಯ ಪೊಲೀಸ್ ಸೇವೆ ಮತ್ತು ಇತರ ಕೇಂದ್ರ ಸೇವೆಗಳಲ್ಲಿ ಸೇಚೆ ಸಲ್ಲಿಸಲಿದ್ದಾರೆ.
ಶಕ್ತಿ ದುಬೆ, ಹರ್ಷಿತಾ ಗೋಯೆಲ್, ಡೊಂಗ್ರೆ ಅರ್ಚಿತ್ ಪರಾಗ್, ಶಾ ಮಾರ್ಗಿ ಚಿರಾಗ್, ಆಕಾಶ್ ಗರ್ಗ್, ಕೋಮಲ್ ಪುನಿಯಾ, ಆಯುಷಿ ಬನ್ಸಾಲ್, ರಾಜ್ ಕೃಷ್ಣ ಝಾ, ಆದಿತ್ಯ ವಿಕ್ರಂ ಅಗರ್ವಾಲ್, ಮಾಯಾಂಕ್ ತ್ರಿಪಾಠಿ ಇವರು ಟಾಪ್ 10ರಲ್ಲಿ ಇರುವವರು. ಈ ಫಲಿತಾಂಶವನ್ನು upsc.gov.in ಗೆ ಭೇಟಿನೀಡುವ ಮೂಲಕ ಫಲಿತಾಂಶವನ್ನು ಪರಿಶೀಲನೆ ಮಾಡಬಹುದಾಗಿದೆ.
ಯುಪಿಎಸ್ಸಿ ಒಟ್ಟು 1,009 ಅಭ್ಯರ್ಥಿಗಳ ಪಟ್ಟಿಯನ್ನು ಬಿಡುಗಡೆ ಮಾಡಿದೆ. ಇದರಲ್ಲಿ ಸಾಮಾನ್ಯ ವರ್ಗದಿಂದ 335 ಅಭ್ಯರ್ಥಿಗಳಿದ್ದಾರೆ. ಆರ್ಥಿಕವಾಗಿ ದುರ್ಬಲ ವರ್ಗದಿಂದ 109 ಅಭ್ಯರ್ಥಿಗಳು ಮತ್ತು OBC ವರ್ಗದಿಂದ 318 ಅಭ್ಯರ್ಥಿಗಳು ಇದ್ದಾರೆ. ಹತ್ತು ಮಂದಿ ಟಾಪರ್ ಸ್ಥಾನದಲ್ಲಿದ್ದು, ಭಾರತೀಯ ಸೇವೆಗಳಲ್ಲಿ ಕೆಲಸ ನಿರ್ವಹಿಸಲಿದ್ದಾರೆ. ಇಂದು ಪಾಸಾಗಿರುವ ಎಲ್ಲರಿಗೂ ಅಭಿನಂದನೆಗಳ ಮಹಾಪೂರವೇ ಹರಿದು ಬರುತ್ತಿದೆ. ದೊಡ್ಡ ದೊಡ್ಡ ಕನಸು ಕಂಡು ಪರೀಕ್ಷೆ ಬರೆದಿದ್ದವರ ಕನಸು ಈಡೇರುವ ಕಾಲವೂ ಬಂದಿದೆ.

