ಬೆಂಗಳೂರು: ಇಂದು ಎರಡನೇ ದಿನದ ಕಲಾಪ ಆರಂಭವಾಗಿದೆ. ಆದರೆ ಕಾಂಗ್ರೆಸ್ ಗ್ಯಾರಂಟಿಗಳ ವಿಚಾರಕ್ಕೆ ಗದ್ದಲ ಶುರುವಾಗಿದ್ದು, ಕಲಾಪ ಮುಂದೂಡಿಕೆಯಾಗಿದೆ. ಸರ್ಕಾರದ ನಿಲುವಳಿ ಸೂಚನೆ ಕುರಿತಂತೆ ಬಿಜೆಪಿ ಪ್ರಸ್ತಾಪಿಸಿದ ಬೆನ್ನಲ್ಲೇ ಕಾಂಗ್ರೆಸ್ಸಿಗರು ವಿರೋಧ ವ್ಯಕ್ತಪಡಿಸಿದ್ದಾರೆ.
ಬಿಜೆಪಿ ನಾಯಕ ಕೋಟಾ ಶ್ರೀನಿವಾಸ ಪೂಜಾರಿ ನಿಲುವಳಿ ಮಂಡನೆ ಮಾಡಲು ಮುಂದಾಗಿದ್ದಾರೆ. ಇದೆ ವೇಳೆ ಪ್ರಶ್ನೋತ್ತರ ಕಲಾಪ ಮುಗಿದ ಮೇಲೆ ನಿಲುವಳಿ ಮಂಡಿಸಿ ಎಂದು ಸಭಾಪತಿ ಪ್ರಾಣೇಶ್ ತಿಳಿಸಿದರು. ನಿಮಗೆ ನಿಯಮಾವಳಿಗಳು ಗೊತ್ತಿದೆ ಅಲ್ವಾ. ನೀವು ಕೊಟ್ಟ ಮೇಲೆ ನಿಲುವಳಿ ಸೂಚನೆಯನ್ನ ಪರಿಶೀಲನೆ ಮಾಡಿ. ಯಾವ ರೀತಿ ಅವಕಾಶ ನೀಡಬೇಕು ಎಂಬುದನ್ನು ತೀರ್ಮಾನ ಮಾಡ್ತೀವಿ ಎಂದು ಎಂ ಕೆ ಪ್ರಾಣೇಶ್ ಹೇಳಿದ್ದಾರೆ.
ಕಾಂಗ್ರೆಸ್ ಸದಸ್ಯರಿಂದ ಬಿಜೆಪಿ ವಿರುದ್ಧ ವಿರೋಧ ವ್ಯಕ್ತವಾಗಿದೆ. ಪರಿಷತ್ ಕಲಾಪದಲ್ಲಿ ಗದ್ದಲ, ಮಾತಿನ ಚಕಮಕಿ ನಡೆದಿದೆ. ಸದನದ ಗದ್ದಲದ ನಡುವೆ ಸಭಾಪತಿಗಳು ಪರಿಷತ್ ಕಲಾಪವನ್ನು ಮಧ್ಯಾಹ್ನಕ್ಕೆ ಮುಂದೂಡಲಾಗಿದೆ.