ಸುದ್ದಿಒನ್, ಚಿತ್ರದುರ್ಗ, ಮಾರ್ಚ್. 03 : ನಗರಸಭೆ ಸಭಾಂಗಣದಲ್ಲಿ ಸೋಮವಾರ ಆಯೋಜಿಸಿದ್ದ ವಿಶೇಷ ಸಾಮಾನ್ಯ ಸಭೆಯಲ್ಲಿ ಜಕಾತಿ ಸದ್ದು ಮಾಡಿತು. ಅಧ್ಯಕ್ಷೆ, ಪೌರಾಯುಕ್ತರ ವಿರುದ್ಧವೇ ಉಪಾಧ್ಯಕ್ಷೆ ಶ್ರೀದೇವಿ ಚಕ್ರವರ್ತಿ ತಿರುಗಿಬಿದ್ದರು.

ಜಕಾತಿ ವಸೂಲಿ ಮಾಡದಂತೆ ಜಿಲ್ಲಾಧಿಕಾರಿ ಆದೇಶಿಸಿರುವ ಆದೇಶ ಉಲ್ಲಂಘನೆ ಆರೋಪ ಸಂಬಂಧ ತೀವ್ರ ಮಾತಿನ ಚಕಮಕಿ ನಡೆಯಿತು. ಬೀದಿಬದಿ ವ್ಯಾಪಾರಿಗಳ ಪರ ಧ್ವನಿಯೆತ್ತಿದ ಶ್ರೀದೇವಿ, ಜಕಾತಿ ವಸೂಲು ಮಾಡದಂತೆ ಆಗ್ರಹಿಸಿದರು. ಸತತ 9 ತಿಂಗಳಿಂದ ಜಕಾತಿ ವಸೂಲಿ ಮೂಲಕ ಬೀದಿಬದಿ ವ್ಯಾಪಾರಿಗಳು ಹೈರಾಣಾಗಿದ್ದಾರೆ. ಅವರ ಬದುಕು ಮುಖ್ಯ. ಟೆಂಡರ್ ಅವಧಿ ಮುಗಿದಿದ್ದರೂ ಗುತ್ತಿಗೆದಾರರು ವಸೂಲಿಗಾಗಿ ದೌರ್ಜನ್ಯ ಮಾಡುತ್ತಿದ್ದಾರೆ. ಇದಕ್ಕೆ ಕಡಿವಾಣ ಹಾಕಬೇಕೆಂದು ಒತ್ತಾಯಿಸಿದರು.


