ಎಲ್ಲವೂ ಡಿಜಿಟಲ್ ಆದ್ಮೇಲೆ ಹ್ಯಾಕರ್ಸ್ ಗಳ ಹಾದಿ ಸುಲಭವಾಗಿದೆ. ಜಸ್ಟ್ ಒಂದು ಲಿಂಕ್ ಕಳ್ಸಿ ಹ್ಯಾಕ್ ಮಾಡಿ ಬಿಡ್ತಾರೆ. ಎಷ್ಟೇ ಅಲರ್ಟ್ ಆಗಿದ್ದರು, ಹ್ಯಾಕರ್ಸ್ ಗಳ ದಾಳಿಗೆ ಕೆಲವೊಮ್ಮೆ ಯಾಮಾರಿ ಬಿಡುತ್ತೇವೆ. ಅದಕ್ಕೆ ಅಪ್ಪಟ ಉದಾಹರಣೆ ಎಂದರೆ ನಟ ಉಪೇಂದ್ರ ಹಾಗೂ ಪ್ರಿಯಾಂಕ ಉಪೇಂದ್ರ.
ನನ್ನ ಪ್ರಿಯಾಂಕ ಉಪೇಂದ್ರ ಮೊಬೈಲ್ ಹ್ಯಾಕ್ ಆಗಿದೆ. ದುಡ್ಡು ಕೇಳಿದ್ರೆ ಕಳುಹಿಸಬೇಡಿ ಎಂದು ಎಲ್ಲರಿಗೂ ಮನವಿ ಮಾಡಿದ್ದಾರೆ. ಯಾಕಂದ್ರೆ ಹ್ಯಾಕರ್ಸ್ ಗಳು ಸೋಷಿಯಲ್ ಮೀಡಿಯಾ ಪೇಜ್ ಗಳನ್ನ ಹ್ಯಾಕ್ ಮಾಡಿನೆ ಸ್ನೇಹಿತರು, ಸಂಬಂಧಿಕರಿಗೆ ಅವರ ಹೆಸರಲ್ಲಿ ಹಣ ಕೇಳಿ, ಸುಲಭವಾಗಿ ಹಣ ಪಡೆದುಕೊಳ್ಳುತ್ತಾರೆ. ಹೀಗಾಗಿ ಉಪೇಂದ್ರ ಅವರು ಈ ಸಂಬಂಧ ವಿಡಿಯೋ ಮಾಡಿ ಹಾಕಿದ್ದಾರೆ.
ಇಂದು ಬೆಳಗ್ಗೆ ಆಗಿರೋ ಘಟನೆ ಇದಾಗಿದೆ. ಆರ್ಡರ್ ಹೆಸರಿನಲ್ಲಿ ಈ ಮೋಸ ನಡೆದಿದೆ.. ಈ ಘಟನೆ ಕುರಿತು ಕಂಪ್ಲೆಂಟ್ ನೀಡುವುದಕ್ಕೆ ಉಪೇಂದ್ರ ಮುಂದಾಗಿದ್ದಾರೆ. ಒಂದೇ ಒಂದು ಲಿಂಕ್ ನಿಂದ ಒಬ್ಬರಲ್ಲ ಇಬ್ಬರ ನಂಬರ್ ಹ್ಯಾಕ್ ಆಗಿದೆ. ಹ್ಯಾಕರ್ಸ್ ಗಳು ಸೆಲೆಬ್ರೆಟಿಗಳನ್ನೇ ಬಿಟ್ಟಿಲ್ಲ. ಬೆಳಗ್ಗೆ ಹ್ಯಾಶ್ ಟ್ಯಾಗ್ ಹಾಕಿ, ಈ ನಂಬರ್ ಗೆ ಡಯಲ್ ಕೊಡಿ ಅಂತ ಒಬ್ಬ ಹ್ಯಾಕರ್ ಹೇಳಿದ್ದ. ಪ್ರಿಯಾಂಕ ಕೂಡ ಏನೋ ಆರ್ಡರ್ ಮಾಡಿದ್ದರು. ಹೀಗಾಗಿ ಅದು ಬರುತ್ತೆ ಅಂತ ಆ ವ್ಯಕ್ತಿ ಹೇಳಿದ ಹ್ಯಾಶ್ ಟ್ಯಾಗ್ ಒತ್ತಿದ್ದಾರೆ. ಅದಕ್ಕೆ ನಾನು ಡಯಲ್ ಮಾಡಿದೆ. ಇದರಿಂದ ಇಬ್ಬರ ಫೋನ್ ಹ್ಯಾಕ್ ಆಗಿದೆ. ಯಾರೂ ಫೋನ್ ಮಾಡಬೇಡಿ, ಹಣ ಕೇಳಿದ್ರೆ ಕೊಡಬೇಡಿ ಎಂದಿದ್ದಾರೆ.



