ನವದೆಹಲಿ: ಕಾಂಗ್ರೆಸ್ ಸಂಸದ ಮನೀಶ್ ತಿವಾರಿ ತಾವೂ ಬರೆದ ಪುಸ್ತಕದಿಂದ ಹೊಸದೊಂದು ಚರ್ಚೆ ಹುಟ್ಟು ಹಾಕಿದ್ದಾರೆ. 26/11 ಮುಂಬೈ ದಾಳಿ ಬಗ್ಗೆ ಉಲ್ಲೇಖಿಸಿದ್ದಾರೆ. ಅಂದು ಕಾಂಗ್ರೆಸ್ ಸಂಯಮ ವಹಿಸಿತ್ತು. ಅದು ಕಾಂಗ್ರೆಸ್ ನ ಲಕ್ಷಣವಲ್ಲ ಎಂದು ಅವರ ಹೊಸ ಪುಸ್ತಕದಲ್ಲಿ ಉಲ್ಲೇಖಿಸಿದ್ದಾರೆ.
27/11 ಮುಂಬೈ ದಾಳಿಯಲ್ಲಿ ಲಷ್ಕರ್ ಎ ತೋಯ್ಬಾ ಉಗ್ರರು ಆತ್ಮಾಹುತಿ ದಾಳಿ ನಡೆಸಿದ್ದರು. ಅಂದಿನ ಯುಪಿಎ ಸರ್ಕಾರ ಪಾಕ್ ಉಗ್ರರ ಮೇಲೆ ಕ್ರಮ ಕೈಗೊಳ್ಳಬೇಕಿತ್ತು. ಆದ್ರೆ ಆ ರೀತಿ ಮಾಡಲಿಲ್ಲ. ಬದಲಿಗೆ ಸಂಯಮ ವಹಿಸಿತ್ತು. ಆ ಸಂಯಮ ನಮ್ಮ ಸಾಮರ್ಥ್ಯದ ಲಕ್ಷಣವಲ್ಲ. ಬದಲಿಗೆ ನಮ್ಮ ದೌರ್ಬಲ್ಯದ ಸಂಕೇತ.
Happy to announce that my Fourth Book will be in the market shortly – '10 Flash Points; 20 Years – National Security Situations that Impacted India'. The book objectively delves into every salient National Security Challenge India has faced in the past two decades.@Rupa_Books pic.twitter.com/3N0ef7cUad
— Manish Tewari (@ManishTewari) November 23, 2021
ಕಾಂಗ್ರೆಸ್ ಸಂಸದ ಮನೀಶ್ ತಿವಾರಿ ಬರೆದ ಪುಸ್ತಕವನ್ನೇ ಆಧಾರವಾಗಿಟ್ಟುಕೊಂಡು ಅತ್ತ ಬಿಜೆಪಿ ಕಾಂಗ್ರೆಸ್ ವಿರುದ್ಧ ತಿರುಗೇಟು ನೀಡಲು ರೆಡಿಯಾಗಿದೆ. ಅಂದು ಕಾಂಗ್ರೆಸ್ ಪಾಕ್ ಉಗ್ರರ ಮೇಲೆ ಏನು ಕ್ರಮ ತೆಗೆದುಕೊಂಡಿಲ್ಲ ಎಂಬುದು, ಅವರ ಸಂಸದರೇ ಬರೆದ ಪುಸ್ತಕದಿಂದ ತಿಳಿದಿದೆ. ಉಗ್ರರರನ್ನು ಸದೆ ಬಡಿಯಲು ಅಂದಿನ ಸರ್ಕಾರ ಸೈನಿಕರಿಗೆ ಅನುಮತಿ ನೀಡಿರಲಿಲ್ಲ. ಒಬ್ಬ ಕಾಂಗ್ರೆಸ್ ಸಂಸದ ತನ್ನ ಪುಸ್ತಕದಲ್ಲಿ 26/11 ಮುಂಬೈ ದಾಳಿಯಲ್ಲಿ ಯುಪಿಎ ಸರ್ಕಾರ ಯಾವುದೇ ಕ್ರಮ ತೆಗೆದುಕೊಂಡಿಲ್ಲ ಎಂದು ಹೇಳಿರುವುದು ಕಾಂಗ್ರೆಸ್ ನ ವೈಪಲ್ಯವನ್ನ ಎತ್ತಿ ತೋರಿಸುತ್ತಿದೆ ಎಂದು ಬಿಜೆಪಿ ರಾಷ್ಟ್ರೀಯ ವಕ್ತಾರ ಗೌರವ್ ಭಾಟೀಯಾ ಕಿಡಿಕಾರಿದ್ದಾರೆ.