ಲಕ್ನೋ: ಉತ್ತರಪ್ರದೇಶದಲ್ಲಿ ಚುನಾವಣೆಯ ಪ್ರಚಾರ ಜೋರಾಗಿದೆ. ಸಿಎಂ ಯೋಗಿ ಆದಿತ್ಯಾನಾಥ್ ಪರ ಪ್ರಚಾರ ಮಾಡುವಾಗ ಶಾಸಕರೊಬ್ಬರು ಜನರಿಗೆ ಜೀವ ಬೆದರಿಕೆ ಹಾಕಿದ ಘಟನೆ ನಡೆದಿದೆ.

"Vote for Yogi in UP polls or face JCB & bulldozers. Your home will be crushed."
This is an open threat of T Raja Singh, Hyd BJP MLA, to the UP people. This is happening under your protection. @ECISVEEP pic.twitter.com/dH1VclTRTY
— Mission Ambedkar (@MissionAmbedkar) February 15, 2022
ತೆಲಂಗಾಣದ ಬಿಜೆಪಿ ಶಾಸಕ ಟಿ ರಾಜಾ ಮಾತಾಡಿರುವ ಭಾಷಣದ ವಿಡಿಯೋ ಇದೀಗ ಎಲ್ಲೆಡೆ ವೈರಲ್ ಆಗುತ್ತಿದೆ. ಈ ಬಾರಿಯ ಚುನಾವಣೆಯಲ್ಲೂ ಯೋಗಿಗೆ ಮತ ನೀಡಿ. ನಾನು ಯುಪಿ ಮತದಾರರಿಗೆ ಹೇಳ ಬಯಸುವುದೆಂದರೆ, ಯೋಗಿಜೀ ಉತ್ತರ ಪ್ರದೇಶಕ್ಕೆ ಸಾವಿರಾರು ಬುಲ್ಡೋಜರ್ ಗಳನ್ನ ತರಿಸಿದ್ದಾರೆ. ಮತ ಹಾಕದಿದ್ರೆ ನಿಮ್ಮ ಮನೆಗಳನ್ನ ಕೆಡವುದಾಗಿ ಬೆದರಿಕೆ ಹಾಕಿದ್ದಾರೆ.

ಚುನಾವಣೆ ಬಳಿಕ ಯೋಗಿ ಅವರಿಗೆ ಯಾರು ಮತ ನೀಡಿಲ್ಲವೆಂದು ಪತ್ತೆ ಹಚ್ಚಲಾಗುತ್ತದೆ. ಯಾರು ಮತ ನೀಡಿರುವುದಿಲ್ಲ. ಅವರ ಮನೆಗಳನ್ನ ಕೆಡವಲಾಗುತ್ತದೆ ಎಂದು ಬೆದರಿಕೆ ಹಾಕಿದ್ದಾರೆ. ಈ ಸಂಬಂಧ ಈಗಾಗಲೇ ಚುನಾವಣಾ ಆಯೋಗ ನೋಟೀಸ್ ನೀಡಿದೆ. 24 ಗಂಟೆಯೊಳಗೆ ಉತ್ತರಿಸಲು ಸೂಚಿಸಿದೆ.

