ಲಕ್ನೊ: ಪಂಚರಾಜ್ಯಗಳ ಚುನಾವಣೆ ಅನೌನ್ಸ್ ಆದ ಬೆನ್ನಲ್ಲೇ ಪಕ್ಷಗಳು ತಮ್ಮ ಚಟುವಟಿಕೆ ಶುರು ಮಾಡಿವೆ. ಪ್ರಚಾರದಲ್ಲಿ ಬ್ಯುಸಿಯಾಗಿದ್ದು, ಜನರನ್ನ ಸೆಳೆಯುವ ಪ್ರಯತ್ನ ನಡೆಸುತ್ತಿವೆ. ಈ ವೇಳೆ ಕನ್ನಯ್ಯ ಕಾಂಗ್ರೆಸ್ ಅಭ್ಯರ್ಥಿ ಪರ ಪ್ರಚಾರ ನಡೆಸಲು ಉತ್ತರಪ್ರದೇಶಕ್ಕೆ ಹೋಗಿದ್ದಾಗ ಆ್ಯಸಿಡ್ ದಾಳಿ ನಡೆದಿದೆ ಎನ್ನಲಾಗಿದೆ.
ಕನ್ನಯ್ಯ ಲಖನೌ ನಲ್ಲಿ ಮನೆ ಮನೆಗೆ ತೆರಳಿ ಮತ ಯಾಚನೆ ಮಾಡುತ್ತಿದ್ದರು. ಈ ವೇಳೆ ಕನ್ನಯ್ಯ ಅವರಿಗೆ ಯಾರೋ ಮಸಿ ಬಳಿಯಲು ಯತ್ನಿಸಿದ್ದಾರೆ. ಈ ಘಟನೆ ಬಗ್ಗೆ ಕಾಂಗ್ರೆಸ್ ಆಕ್ರೋಶ ವ್ಯಕ್ತಪಡಿಸಿದ್ದು, ಕನ್ನಯ್ಯ ಕುಮಾರ್ ಮೇಲೆ ಎರಚಿದ್ದು ಮಸಿ ಅಲ್ಲ, ಒಂದು ರೀತಿಯ ರಾಸಾಯನಿಕವನ್ನ ಎಸೆದಿದ್ದಾರೆ ಎಂದು ಆರೋಪಿಸಿದ್ದಾರೆ.
ಈಗಾಗಲೇ ಕನ್ನಯ್ಯ ಕುಮಾರ್ ಮೇಲೆ ಮಸಿ ಎರಚಲು ಬಂದ ವ್ಯಕ್ತಿಯನ್ನು ಬಂಧಿಸಲಾಗಿದೆ ಎಂದು ಉತ್ತರ ಪ್ರದೇಶ ಪೊಲೀಸರು ತಿಳಿಸಿದ್ದಾರೆ. ಇನ್ನು ಕನ್ನಯ್ಯ ಕುಮಾರ್ ಮೇಲೆ ಆ್ಯಸಿಡ್ ದಾಳಿ ನಡೆಸಲು ಹೋಗಿ, ಅದು ಕೆಲವು ಹುಡುಗರ ಮೇಲೆ ಬಿದ್ದಿದೆ ಎಂದು ಕಾಂಗ್ರೆಸ್ ಆಕ್ರೋಶ ವ್ಯಕ್ತಪಡಿಸಿದೆ. ಚುನಾವಣೆ ಹತ್ತಿರ ಇರುವಾಗ್ಲೇ ಈ ರೀತಿ ಘಟನೆಗಳು ಸಂಭವಿಸಿರುವುದು ಸ್ವಲ್ಪ ಗಲಿಬಿಲಿಗೆ ಕಾರಣವಾಗಿದೆ.