ನವದೆಹಲಿ: ಉತ್ತರ ಪ್ರದೇಶದ ಸಿಎಂ ಯೋಗಿ ಆದಿತ್ಯನಾಥ್ ಮೇಲೆ ಬಿಜೆಪಿ ಹೈಕಮಾಂಡ್ ಗೆ ಒಲವು ಜಾಸ್ತಿ. ಅವರು ಸ್ಪರ್ಧೆ ಮಾಡಿದ್ರೆ ಕೆಲ ಸಂದೇಶ ರವಾನೆ ಆಗುತ್ತೆ ಅನ್ನೋ ಗಾಢ ನಂಬಿಕೆ. ಹೀಗಾಗಿ ಅವರ ಸ್ಪರ್ಧೆಗೆ ಒತ್ತಡ ಹೆಚ್ಚಿದೆ. ಈ ಸಂಬಂಧ ಯೋಗಿ ಆದಿತ್ಯನಾಥ್ ಕೂಡ ಮಾತನಾಡಿದ್ದು, ಬಿಜೆಪಿ ನಾಯಕರು ಎಲ್ಲಿ ಹೇಳ್ತಾರೊ ಅಲ್ಲಿ ಸ್ಪರ್ಧೆ ಮಾಡುತ್ತೇನೆ ಎಂದಿದ್ದಾರೆ.
ಒಂದು ವೇಳೆ ಅಯೋಧ್ಯೆಯಿಂದ ಸ್ಪರ್ಧಿಸಿದರೆ ಯೋಗಿ ಆದಿತ್ಯನಾಥ್, ರಾಮ ಜನ್ಮಭೂಮಿ ಆಂದೋಲನದೊಂದಿಗೆ ದೀರ್ಘಕಾಲ ಸಂಬಂಧ ಹೊಂದಿದ್ದರಿಂದ ರಾಜ್ಯದಲ್ಲಿ ದೊಡ್ಡ ಸಂದೇಶದೊಂದಿಗೆ ಸಾಂಕೇತಿಕ ಹೋರಾಟವಾಗಲಿದೆ. ಪ್ರಧಾನಿ ನರೇಂದ್ರ ಮೋದಿಯವರು ಈಗ ವಾರಾಣಸಿಯೊಂದಿಗೆ ಬಾಂಧವ್ಯ ಹೊಂದಿದ್ದಾರೆ. ಅದೇ ರೀತಿ ಸಿಎಂ ಯೋಗಿ ಆದಿತ್ಯನಾಥ್, ಅಯೋಧ್ಯೆಯೊಂದಿಗೆ ಹೊಂದಿದ್ದಾರೆ.
ಯೋಗಿ ಆದಿತ್ಯನಾಥ್ ತವರು ಜಿಲ್ಲೆ ಗೋರಖ್ ಪುರ ಅಥವಾ ಇತ್ತೀಚೆಗೆ ಜನ ವಿಶ್ವಾಸ ಯಾತ್ರೆಗೆ ಚಾಲನೆ ನೀಡಿರುವ ಮಥುರಾ ಜಿಲ್ಲೆ ಎಂದು ಬಿಜೆಪಿ ನಾಯಕರೊಬ್ಬರು ಹೇಳಿದ್ದಾರೆ. ಮಥುರಾದಿಂದಲೂ ಯೋಗಿ ಆದಿತ್ಯನಾಥ್ ಸ್ಪರ್ಧಿಸುವ ಸಾಧ್ಯತೆ ಇದೆ ಎಂದು ಬಿಜೆಪಿ ನಾಯಕರೊಬ್ಬರು ಹೇಳಿದ್ದಾರೆ. ಈ ಬೆನ್ನಲ್ಲೇ ವಿರೋಧಿಗಳಾದ ಅಖಿಲೇಶ್ ಯಾದವ್, ಮಾಯಾವತಿ ಮತ್ತು ಪ್ರಿಯಾಂಕಾ ಗಾಂಧಿ ವಾದ್ರಾ ಅವರ ಮೇಲೆ ಒತ್ತಡ ಹೇರುತ್ತಿದ್ದಾರೆ ಎನ್ನಲಾಗಿದೆ.