ಲಕ್ನೋ: ಇಂದು ಸಿಎಂ ಯೋಗಿ ಆದಿತ್ಯನಾಥ್ ರಾಮ ಮಂದಿರದ ಗರ್ಭಗುಡಿ ಶಿಲಾನ್ಯಾಸ ನೆರವೇರಿಸಿದ್ದಾರೆ. ಈ ಬೆನ್ನಲ್ಲೆ ಮಹತ್ವದ ಆದೇಶವೊಂದನ್ನು ಹೊರಡಿಸಿದ್ದಾರೆ. ರಾಮ ಮಂದಿರದ ಸುತ್ತ ಮುತ್ತ ಯಾರೂ ಕೂಡ ಮದ್ಯ ಮಾರಾಟ ಮಾಡುವಂತಿಲ್ಲ ಎಂಬ ಆದೇಶ ಹೊರಡಿಸಿದ್ದಾರೆ.
ಈಗಾಗಲೇ ದೇವಸ್ಥಾನದ ಆಜುಬಾಜಿನಲ್ಲಿದ್ದ ಮದ್ಯದಂಗಡಿಗಳ ಪರವಾನಗಿಯನ್ನು ರದ್ದು ಮಾಡಿರುವ ಬಗ್ಗೆ ಅಬಕಾರಿ ಸಚಿವ ನಿತಿನ್ ಅಗರ್ ವಾಲ್ ಮಾಹಿತಿ ನೀಡಿದ್ದಾರೆ. ಕಳೆದ ವರ್ಷ ಮಥುರಾದ ಯಾತ್ರ ಸ್ಥಳಗಳ ಬಳಿ ಮದ್ಯ ಮತ್ತು ಮಾಂಸ ಮಾರಾಟವನ್ನು ನಿಷೇಧಿಸಿದ್ದರು. ಇದೀಗ ಅಯೋಧ್ಯೆಯ ರಾಮಜನ್ಮ ಭೂಮಿಯಲ್ಲಿ ಮದ್ಯ ಮಾರಾಟ ಮತ್ತು ಮಾಂಸ ಮಾರಾಟವನ್ನು ನಿಷೇಧಿಸಿದ್ದಾರೆ.
ಧಾರ್ನಿಕ ಸ್ಥಳಗಳ ಸುತ್ತ ಮುತ್ತ ಮದ್ಯ ಮತ್ತು ಮಾಂಸ ಮಾರಾಟವನ್ನು ನಿಷೇಧಿಸಬೇಕೆಂದು ಸಂತರು ಮತ್ತು ಧರ್ಮದರ್ಶಿಗಳು ಒತ್ತಾಯಿಸಿದ ಹಿನ್ನೆಲೆ ಇಂಥದ್ದೊಂದು ನಿರ್ಧಾರ ಕೈಗೊಳ್ಳಲಾಗಿದೆ. ಮದ್ಯ ಮತ್ತು ಮಾಂಸ ಮಾರಾಟ ಮಾಡುವವರು ಅದನ್ನು ಬಿಟ್ಟು ಬೇರೆ ವ್ಯಾಪಾರವನ್ನು ಆ ಜಾಗದಲ್ಲಿ ಮಾಡಬಹುದು ಎಂದು ಆದೇಶದಲ್ಲಿ ತಿಳಿಸಲಾಗಿದೆ.