Kannada news ಚಿತ್ರದುರ್ಗ ದಾವಣಗೆರೆ ಬೆಂಗಳೂರು ರಾಜಕೀಯ ಚುನಾವಣೆ ಮಳೆ ಕ್ರಿಕೆಟ್ ಭಾರತ ಚಿನ್ನ ಬೆಳ್ಳಿ ಹವಾಮಾನ ಕ್ರಿಕೆಟ್  ಕನ್ನಡ ನ್ಯೂಸ್

---Advertisement---

ಹಾಪ್‍ಕಾಮ್ಸ್ ಆಡಳಿತ ಮಂಡಳಿ ನಿರ್ದೇಶಕರ ಸ್ಥಾನಗಳಿಗೆ ಅವಿರೋಧ ಆಯ್ಕೆ

---Advertisement---

 

ಚಿತ್ರದುರ್ಗ. ಅ.16: ತೋಟಗಾರಿಕೆ ಸಹಕಾರ ಸಂಘಗಳು ಮತ್ತು ತಾಲ್ಲೂಕು ಕೃಷಿ ಮಾರಾಟ ಸಹಕಾರ ಸಂಘಗಳಿಂದ ಹಾಪ್ ಕಾಮ್ಸ್ (ಜಿಲ್ಲಾ ತೋಟದ ಉತ್ಪನ್ನಗಳ ಬೆಳೆಗಾರರ ಮಾರಾಟ ಮತ್ತು ಸಂಸ್ಕರಣ ಸಹಕಾರ ಸಂಘ) ಆಡಳಿತ ಮಂಡಳಿ ನಿರ್ದೇಶಕರ ಸ್ಥಾನಗಳಿಗೆ 13 ಜನರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ.

ಚಿತ್ರದುರ್ಗ ತಾಲ್ಲೂಕಿನಿಂದ ಎಸ್.ಪಿ.ಲತಾ, ಹೆಚ್.ಎನ್.ತಿಪ್ಪೇಸ್ವಾಮಿ, ಎನ್.ಡಿ.ಚಂದ್ರಶೇಖರ ರೆಡ್ಡಿ,

ಹಿರಿಯೂರು ತಾಲ್ಲೂಕಿನಿಂದ ಆರ್.ಕೀರ್ತಿಕುಮಾರಿ, ಎಸ್.ಜೆ.ಹನುಮಂತರಾಯ,

ಚಳ್ಳಕೆರೆ ತಾಲ್ಲೂಕಿನಿಂದ ಮಲ್ಲಿಕಾರ್ಜುನ, ಹೆಚ್.ಟಿ.ಶಶಿಧರ,

ಮೊಳಕಾಲ್ಮೂರು ತಾಲ್ಲೂಕಿನಿಂದ ಹೆಚ್.ಟಿ.ನಾಗರೆಡ್ಡಿ, ಎ.ಚನ್ನಬಸಪ್ಪ,

ಹೊಳಲ್ಕೆರೆ ತಾಲ್ಲೂಕಿನಿಂದ ಟಿ.ತಿಮ್ಮಪ್ಪ, ಅರುಣಕುಮಾರ್.ಎಂ.ಬಿ.

ಹೊಸದುರ್ಗ ತಾಲ್ಲೂಕಿನಿಂದ ಟಿ.ಎಸ್.ಶಂಕರಮೂರ್ತಿ, ಜೆ.ಡಿ.ಕೆಂಚವೀರಪ್ಪ ನಿದೇಶಕರಾಗಿ ಆಯ್ಕೆಯಾಗಿದ್ದಾರೆ.

 

ಆಡಳಿತ ಮಂಡಳಿ ನಿರ್ದೇಶಕರ ಆಯ್ಕೆಗೆ ಅ.19 ರಂದು ಚುನಾವಣೆ ದಿನಾಂಕ ನಿಗಧಿ ಪಡಿಸಲಾಗಿತ್ತು. ಆದರೆ ಅ.14 ರಂದು ನಾಮಪತ್ರ ಪರಿಶೀಲನೆ ನಂತರ 13 ಸದಸ್ಯರು ಅವಿರೊಧ ಆಯ್ಕೆಯಾಗಿದ್ದಾರೆ ಎಂದು ಜಿಲ್ಲಾ ವ್ಯವಸ್ಥಾಪಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

suddionenews

ಕನ್ನಡ ಸುದ್ದಿಗಳ ವಿಶ್ವಾಸಾರ್ಹ ಮೂಲ — suddione.com ನಲ್ಲಿ ಓದಿ ರಾಷ್ಟ್ರೀಯ, ಅಂತರರಾಷ್ಟ್ರೀಯ, ರಾಜಕೀಯ, ಕ್ರೀಡೆ, ಮನರಂಜನೆ, ವಾಣಿಜ್ಯ, ಶಿಕ್ಷಣ ಮತ್ತು ತಂತ್ರಜ್ಞಾನಕ್ಕೆ ಸಂಬಂಧಿಸಿದ ಪ್ರತಿಯೊಂದು ಪ್ರಮುಖ ಅಪ್‌ಡೇಟ್. ನೀವು ಯಾವಾಗಲೂ ಅಪ್‌ಡೇಟ್ ಆಗಿರಲು ನಾವು ವೇಗವಾದ, ನಿಖರವಾದ ಮತ್ತು ನಿಷ್ಪಕ್ಷಪಾತವಾದ ಸುದ್ದಿಗಳನ್ನು ಸರಳ ಹಾಗೂ ಸ್ಪಷ್ಟ ಭಾಷೆಯಲ್ಲಿ ನೀಡುತ್ತೇವೆ. ಸಂಪಾದಕರು: ನಾಗೇಂದ್ರ ರೆಡ್ಡಿ ಪಿ.ಎಲ್

Join WhatsApp

Join Now

Join Telegram

Join Now
🏫 ಅಡ್ಮಿಷನ್ ಓಪನ್
🔒

ಇಂಡಿಯನ್ ಇಂಟರ್ ನ್ಯಾಷನಲ್ ಸ್ಕೂಲ್

ಸ್ವಾಗತ...