Notice: Undefined index: options in /home/nagendra/public_html/content/plugins/elementor-pro/modules/theme-builder/widgets/site-logo.php on line 124

ಬಯಲಿನಲ್ಲಿ ಅನಾಥವಾಗಿ ಬಿದ್ದಿರುವ ಆಧಾರ್ ಕಾರ್ಡ್ ಗಳು

Facebook
Twitter
Telegram
WhatsApp

ವರದಿ : ರಾಮಾಂಜನೇಯ ಕೆ. ಚನ್ನಗಾನಹಳ್ಳಿ,                        ಮೊ ; 98440 95383

ಚಳ್ಳಕೆರೆ, (ಡಿ.27) ; ಕೇಂದ್ರ ಹಾಗೂ ರಾಜ್ಯ ಸರಕಾರ ಹತ್ತು ಹಲವು ಉಚಿತ ಭಾಗ್ಯಗಳ ಜತೆಗೆ ಹಲವು ಯೋಜನೆಗಳನ್ನು ಜಾರಿಗೊಳಿಸಿ ಕಟ್ಟಕಡೆಯ ವ್ಯಕ್ತಿಗೆ ಸೌಲಭ್ಯ ತಲುಪಿಸುವ ಉದ್ದೇಶದಿಂದ ಆಧಾರ್ ಕಾರ್ಡ್ ಕಡ್ಡಾಯ ಗೊಳಿಸಿದೆ, ಆದರೆ ಚಳ್ಳಕೆರೆ ನಗರದ ಖಾಸಗಿ ಲೇಔಟ್‍ನಲ್ಲಿ ರಾಶಿ ರಾಶಿ ಆಧಾರ್ ಕಾರ್ಡ್‍ಗಳು ಚೆಲ್ಲಪಿಲ್ಲಿಯಾಗಿ ಬಿದ್ದಿರುವ ಘಟನೆ ನಡೆದಿದೆ.

ಹೌದು ..ಚಳ್ಳಕೆರೆ ನಗರದ ಸೋಮಗುದ್ದು ರಸ್ತೆಯಲ್ಲಿವ ಕಂದಾಯ ನೌಕರರ ಬಡವಾಣೆಯ ಸಮೀಪದ ಖಾಲಿ ಜಾಗದಲ್ಲಿ ಸುಮಾರು ನೂರರಿಂದ ನೂರವತ್ತು ಆಧಾರ್ ಕಾರ್ಡ್‍ಗಳು ರಸ್ತೆ ಪಕ್ಕದಲ್ಲಿ ಬಿದ್ದಿವೆ, ಇನ್ನೂ ಆಧಾರ್ ಕಾರ್ಡ್‍ನಲ್ಲಿ ವಿಳಾಸ ನೋಡಿದರೆ ಕೇವಲ ನಗರ ವ್ಯಾಪ್ತಿಯ ಅಂಬೇಡ್ಕರ್  ನಗರ, ಜನತಾಕಲೋನಿ, ಚಿತ್ರಯ್ಯನಹಟ್ಟಿಗೆ, ಸಂಬಂದಿಸಿದ ವಿಳಾಸ ಹೊಂದಿದೆ, 2016 ಇಸವಿಯಲ್ಲಿ ಮುದ್ರಣವಾದ ಆಧಾರ್ ಕಾರ್ಡ್ ಎನ್ನಲಾಗಿದೆ.

ಆದರೆ ಇಷ್ಟೊಂದು ಪ್ರಮಾಣದಲ್ಲಿ ಆಧಾರ್‌ ಕಾರ್ಡ್ ಖಾಲಿ ಜಾಗದಲ್ಲಿ ಬಿದ್ದಿರುವುದರಿಂದ ಹಲವು ಅನುಮಾನಗಳಿಗೆ ಎಡೆ ಮಾಡಿಕೊಟ್ಟಿದೆ.
ಪ್ರತಿಯೊಂದು ಸೌಲಭ್ಯಕ್ಕೂ, ಶಾಲಾ ದಾಖಲಾತಿಗೂ, ಸರಕಾರದ ವಸತಿ ಯೋಜನೆಗೂ, ಪಿಂಚಣಿ, ಭಾಗ್ಯಲಕ್ಷ್ಮಿ, ಬ್ಯಾಂಕ್‍ಖಾತೆ, ಬೆಳೆವಿಮೆ, ಸಾಲಮನ್ನ,  ಕೃಷಿಯಂತ್ರ, ಬಿತ್ತನೆಬೀಜ ಗೊಬ್ಬರ, ಬೆಳೆನಷ್ಟ ಪರಿಹಾರ, ರಸಗೊಬ್ಬರ, ವಿದ್ಯಾರ್ಥಿವೇತನ, ಪಡಿತರ ಚೀಟಿ, ಸೇರಿದಂತೆ ಹತ್ತು ಹಲವು ಸೌಲಭ್ಯಗಳನ್ನು ಪಡೆಯಲು ಆಧಾರ್ ಕಾರ್ಡ್ ಕಡ್ಡಾಯ ಮಾಡಿದ್ದ ಸರಕಾರ, ಆದರೆ ಇಂತಹ ಅವಶ್ಯವಾಗಿರುವ ಆಧಾರ್ ಕಾರ್ಡ್ ಮನುಷ್ಯನ ಐಡೆಂಟಿಪಿಕೇಶ್‍ನ ಹಾಗಿದೆ ಇಂತಹ ಕಾರ್ಡ್ ಖಾಲಿ ಜಾಗದಲ್ಲಿ ನೋಡಿದರೆ ಹಲವು ಅನುಮಾನಗಳಿಗೆ ಆಸ್ಪಾದ ನೀಡುತ್ತಿದೆ.

ಪ್ರತಿಯೊಬ್ಬ ಮನುಷ್ಯನಿಗೂ ಅನಿವಾರ್ಯವಾದ ಈ ಆಧಾರ್ ಕಾರ್ಡ್ ಅನಾಥವಾಗಿ ಬಿದ್ದಿರುವ ದೃಶ್ಯ ನೋಡಿದೆರೆ ಯಾವುದೋ ದಂಧೆ ಮಾಡಲು, ದಂಧೆ ಕೊರರು ಈ ಆಧಾರ್ ಕಾರ್ರ್ಡಗಳನ್ನು ಬಳಸಿದ್ದಾರೆ ಅಥವಾ, ಅಂಚೆ ಕಛೇರಿಯಿಂದ ವಿತರಿಸಬೇಕಾದ ಫಲಾನುಭವಿಗಳಿಗೆ ಸರಿಯಾದ ರೀತಿಯಲ್ಲಿ ವಿತರಸಿಲ್ಲವಾ ಎಂಬ ಹಲವು ಅನುಮಾನಗಳಿಗೆ ಎಡೆಮಾಡಿದೆ.

ಆಧಾರ್ ಕಾರ್ಡ್‍ನಲ್ಲಿ ಅತೀ ಹೆಚ್ಚಿನದಾಗಿ ಚಿಕ್ಕಮಕ್ಕಳವೇ ಜಾಸ್ತಿಯಿವೆ, ಇನ್ನೂ ಕೇವಲ ಮೂರು ವಾರ್ಡ್‍ಗಳ ಸಾರ್ವಜನಿಕರ ಆಧಾರ್ ಕಾರ್ಡ್‍ಗಳು ಇಲ್ಲಿ ಕೃಡಿಕರಿಸಿ ಎಸೆದಿರುವುದಕ್ಕೆ ನಗರದ ಸಾರ್ವಜನಿಕರು ತಲ್ಲಣಗೊಡಿದ್ದಾರೆ.

ಮುಂಜಾನೆಯೇ ನಗರದ ಸಾರ್ವಜನಿಕರು ರಸ್ತೆ ಪಕ್ಕದಲ್ಲಿ ಬಿದ್ದಿರುವ 150 ಕ್ಕೂ ಹೆಚ್ಚಿನ ಆಧಾರ್ ಕಾರ್ಡ್‍ಗಳನ್ನು ಬಿದ್ದಿರುವ ಘಟನೆಯ ಸಾರ್ವಜನಿಕರ ಮಾಹಿತಿ ಮೇರೆಗೆ ಭಗತ್ ಸಿಂಗ್ ಹಿತಾ ರಕ್ಷಣಾ ಮತ್ತು ಸಮಗ್ರಾಭಿವೃದ್ದಿ ಸಮಿತಿಯ ಅಧ್ಯಕ್ಷ ಮಲ್ಲಿಕಾರ್ಜುನ ಹಾಗೂ ತಿಪ್ಪೆಸ್ವಾಮಿ, ನಾಗೇಂದ್ರ, ಶಾರು ಇತರರು ಸೇರಿ ಆಧಾರ್ ಕಾರ್ಡ್‍ನಲ್ಲಿರುವ ವಿಳಾಸ ಪತ್ತೆ ಮಾಡಿ ವಿಚಾರ ತಿಳಿಸಿದಾಗ ನೈಜ ಫಲಾನುಭವಿಗಳಿಗೆ ಅನುಮಾನ ಶುರುವಾಗಿದೆ, ನಮಗೆ ಈಗಾಗಲೇ ಆಧಾರ್ ಕಾರ್ಡ ಬಂದಿದೆ ಆದರೆ ಮತ್ತೆ ಆಧಾರ್‌ ಕಾರ್ಡ್ ಅಲ್ಲಿ ಬಿದ್ದಿರುವುದು ಗೊತ್ತಾಗುತಿಲ್ಲ ಎಂದು ನಿಟ್ಟುಸಿರು ಬಿಟ್ಟು ತಬ್ಬಿಬು ಹಾಗಿದ್ದಾರೆ.

ಅಷ್ಟೊಂದು ಪ್ರಮಾಣದಲ್ಲಿ ಆಧಾರ್ ಕಾರ್ಡ್‍ಗಳು ಖಾಲಿ ಜಾಗದಲ್ಲಿರುವುದು ನಿಮ್ಮಿಂದು ಮಾಹಿತಿ ಬಂದಿದೆ ಈ ಕೂಡಲೇ ಪರಿಶೀಲನೆ ನಡೆಸಿ, ಈ ಘಟನೆ ಯಾರಿಂದ ಹಾಗಿದೆ ಎಲ್ಲಿ ಲೋಪವಾಗಿದೆ ಎಂಬುದು ಮನಗಂಡು ಸಂಬಂದಿಸಿದ ಅಪರಾಧಿಗಳಿಗೆ ಸೂಕ್ತವಾದ ಕಾನೂನು ಕ್ರಮ ಜರುಗಿಸಲಾಗುವುದು.

— ಎನ್.ರಘುಮೂರ್ತಿ, ತಹಶಿಲ್ದಾರ್
ಚಳ್ಳಕೆರೆ

Facebook
Twitter
Telegram
WhatsApp
suddionenews

suddionenews

Leave a Comment

Top Stories

ಇಂದು ಸಂವಿಧಾನ ದಿನಾಚರಣೆ | ಕಾರಣ ಮತ್ತು ಮಹತ್ವವೇನು ? ಇಲ್ಲಿದೆ ಸಂಪೂರ್ಣ ಮಾಹಿತಿ…!

ಸುದ್ದಿಒನ್ | ರಾಷ್ಟ್ರೀಯ ಸಂವಿಧಾನ ದಿನ 2024 : ಬ್ರಿಟಿಷರ ಆಳ್ವಿಕೆಯಲ್ಲಿ ಸುಮಾರು 200 ವರ್ಷಗಳ ಕಾಲ ಲೂಟಿ ಮತ್ತು ಅಸ್ತವ್ಯಸ್ತಗೊಂಡಿದ್ದ ಭಾರತವನ್ನು ಸ್ವಾತಂತ್ರ್ಯದ ನಂತರ ಒಂದುಗೂಡಿಸುವಲ್ಲಿ ನಮ್ಮ ಸಂವಿಧಾನವು ಪ್ರಮುಖ ಪಾತ್ರ ವಹಿಸಿದೆ.

ಕಡಿಮೆ ರಕ್ತದ ಒತ್ತಡ ಕಾರಣಗಳೇನು ? ತಡೆಗಟ್ಟುವುದು ಹೇಗೆ ?

ಸುದ್ದಿಒನ್ | ಹೃದಯದಿಂದ ನಿರಂತರವಾಗಿ ರಕ್ತ ದೇಹದ ಎಲ್ಲಾ ಅಂಗಗಳಿಗೆ ಸರಬರಾಜು ಆಗುತ್ತಲೇ ಇರುತ್ತದೆ. ಹೃದಯದಿಂದ ರಕ್ತ ಹೊರಹಾಕಲ್ಪಟ್ಟ ಮೇಲೆ ರಕ್ತದ ಏಕಮುಖ ಹರಿವು ರಕ್ತನಾಳಗಳ ಒಳಪದರಗಳ ಮೇಲೆ ಹೇರುವ ಒತ್ತಡವನ್ನು “ರಕ್ತದ ಒತ್ತಡ”

ಈ ರಾಶಿಯ ಕಾಳುಮೆಣಸು ಮತ್ತು ಏಲಕ್ಕಿ ವ್ಯಾಪಾರ ವಹಿವಾಟಗಾರರಿಗೆ ಭಾರಿ ನಷ್ಟ

ಈ ರಾಶಿಯ ಕಾಳುಮೆಣಸು ಮತ್ತು ಏಲಕ್ಕಿ ವ್ಯಾಪಾರ ವಹಿವಾಟಗಾರರಿಗೆ ಭಾರಿ ನಷ್ಟ, ಈ ರಾಶಿಯವರ ಆದಾಯ ದ್ವಿಗುಣ ನೋ ಡೌಟ್ : ಈ ರಾಶಿಯವರಿಗೆ ಉನ್ನತ ಸ್ಥಾನ ದೊರೆತು, ರಾಜಕೀಯ ಸಂಪೂರ್ಣ ಬೆಂಬಲ ಸಿಗಲಿದೆ,

error: Content is protected !!