ದಾವಣಗೆರೆ, ಫೆ.16 : ಕೇಂದ್ರ ಜಲಶಕ್ತಿ ಮತ್ತು ರೈಲ್ವೆ ಖಾತೆ ರಾಜ್ಯ ಸಚಿವ ವಿ.ಸೋಮಣ್ಣ ಅವರು ಫೆಬ್ರವರಿ 25 ರಂದು ಜಿಲ್ಲಾ ಪ್ರವಾಸ ಕೈಗೊಂಡಿದ್ದಾರೆ.
ಫೆ.25 ರಂದು ಬೆಳಿಗ್ಗೆ 10.15 ಕ್ಕೆ ತೊಳಹುಣಸೆಗೆ ಆಗಮಿಸಿ ತೊಳಹುಣಸೆ ಮತ್ತು ಅನಗೋಡು ಹೊಸ ರೈಲ್ವೆ ಮಾರ್ಗವನ್ನು ಪರಿಶೀಲನೆ ಮಾಡುವವರು 11.15 ನಿಮಿಷಕ್ಕೆ ಅನಗೋಡು ರೈಲ್ವೆ ನಿಲ್ದಾಣವನ್ನು ಪರಿಶೀಲನೆ ಮಾಡುವರು. ನಂತರ 11.45 ಕ್ಕೆ ಅನಗೋಡು- ಹೆಬ್ಬಾಳು ಹೊಸ ರೈಲ್ವೆ ಮಾರ್ಗವನ್ನು ಪರಿಶೀಲನೆ ಮಾಡುವರು. ನಂತರ ಚಿತ್ರದುರ್ಗ ಭರಮಸಾಗರ ಮಾರ್ಗವನ್ನು ಪರಿಶೀಲನೆ ಮಾಡಿ ಚಿತ್ರದುರ್ಗಕ್ಕೆ ಪ್ರಯಾಣಿಸುವರು.


