ಅಕ್ಕಿ ವಿಚಾರವಾಗಿ ಈಗಾಗಲೇ ಪ್ರಧಾನಿ ನರೇಂದ್ರ ಮೋದಿಯವರಿಗೆ ಅಕ್ಕಿ ನೀಡಲು ಕೇಳಿದ್ದಾರೆ. ಆದರೆ ಕೇಂದ್ರ ಸರ್ಕಾರದಿಂದ ಪಾಸಿಟಿವ್ ಆಗಿ ಉತ್ತರ ಸಿಕ್ಕಿಲ್ಲ. ಹೀಗಾಗಿ ಇಂದು ಸಿಎಂ ಸಿದ್ದರಾಮಯ್ಯ ಅಂಡ್ ಟೀಂ ಇಂದು ದೆಹಲಿಯಲ್ಲಿ ಬೀಡು ಬಿಟ್ಟಿದ್ದಾರೆ. ಕೇಂದ್ರ ಸಚಿವರ ಭೇಟಿಗೆ ಅವಕಾಶ ಕೇಳಿದರೂ ಇನ್ನೂ ಸಿಕ್ಕಿಲ್ಲ. ಈ ಮಧ್ಯೆ ರಾಷ್ಟ್ರಪತಿ ದ್ರೌಪದಿ ಮುರ್ಮಾ ಅವರನ್ನು ಭೇಟಿಯಾಗಿದ್ದಾರೆ.
ನವದೆಹಲಿಯಲ್ಲಿ ಸಿಎಂ ಸಿದ್ದರಾಮಯ್ಯ ಈ ಬಗ್ಗೆ ಮಾತನಾಡಿ, ಇಂದು ರಾತ್ರಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಭೇಟಿಯಾಗುವೆ. ಅಕ್ಕಿ ವಿಚಾರವಾಗಿ ಅಮಿತ್ ಶಾ ಬಳಿ ಪ್ರಸ್ತಾಪ ಮಾಡುತ್ತೇನೆ. ಕೇಂದ್ರ ಸಚಿವ ಪಿಯೂಷ್ ಗೋಯಲ್ ಭೇಟಿಗೆ ಸಮಯ ಕೇಳಿಲ್ಲ. FCI ಅಕ್ಕಿ ಕೊಡಲು ಆಗಲ್ಲ ಎಂದಿದ್ದರೆ ಬೇರೆ ಕಡೆ ಚರ್ಚೆ ಮಾಡುತ್ತೇವೆ. ಅಕ್ಕಿ ಇಲ್ಲದಿದ್ದರೆ ಎಫ್ಸಿಐ ಜೂ.12ರಂದು ಯಾಕೆ ಪತ್ರ ಕೊಟ್ಟಿತು ಎಂದು ಪ್ರಶ್ನಿಸಿದರು.
ದೆಹಲಿಯಲ್ಲಿ ಆಹಾರ ಇಲಾಖೆ ಸಚಿವ K.H.ಮುನಿಯಪ್ಪ ಮಾತನಾಡಿ, ಕೇಂದ್ರ ಸಚಿವ ಪಿಯೂಷ್ ಗೋಯಲ್ ಭೇಟಿಗೆ ಅವಕಾಶ ನೀಡುತ್ತಿಲ್ಲ. ಕಳೆದ ಮೂರು ದಿನಗಳಿಂದ ಭೇಟಿಗೆ ಕಾಲಾವಕಾಶ ನೀಡುತ್ತಿಲ್ಲ. ಕೇಂದ್ರ ರಾಜ್ಯ ಖಾತೆ ಸಚಿವರ ಭೇಟಿಗೆ ಕಾಲಾವಕಾಶ ನೀಡಿದ್ದರು. ನಾಳೆ ಬೆಳಗ್ಗೆ 10ಕ್ಕೆ ಭೇಟಿಗೆ ನೀಡಿದ್ದ ಅವಕಾಶವೂ ನಿರಾಕರಿಸಿದ್ದಾರೆ ಎಂದರು.