Notice: Undefined index: options in /home/nagendra/public_html/content/plugins/elementor-pro/modules/theme-builder/widgets/site-logo.php on line 124

ಸಹಕಾರ ಸಂಘಗಳಿಗೆ ಏಕರೂಪದ ಸಾಫ್ಟವೇರ್, ಬೈಲಾ ವ್ಯವಸ್ಥೆ : ಇಲ್ಯಾಸ್ ಉಲ್ಲಾ ಷರೀಫ್

Facebook
Twitter
Telegram
WhatsApp

 

ವರದಿ ಮತ್ತು ಫೋಟೋ ಕೃಪೆ
ಸುರೇಶ್ ಪಟ್ಟಣ್,
ಮೊ : 98862 95817

ಚಿತ್ರದುರ್ಗ,(ಜೂ.16) :  ಕೇಂದ್ರ ಸರ್ಕಾರ ಮತ್ತು ರಾಜ್ಯ ಸರ್ಕಾರ ಪ್ರಾಥಮಿಕ ಕೃಷಿ ಸಹಕಾರ ಸಂಘಗಳಿಗೆ ಏಕರೂಪದ ಬೈಲಾವನ್ನು ಮಾಡಿದ್ದು ಇದರಲ್ಲಿ 50 ಉದ್ದೇಶಗಳನ್ನು ಹಾಕಿಕೊಂಡಿದ್ದು, 35000 ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳಿಗೂ ಈ ಉದ್ದೇಶಗಳನ್ನು ಜಾರಿಗೆ ತರಬೇಕಾಗಿದೆ ಎಂದು ಡಿಸಿಸಿ ಬ್ಯಾಂಕ್ ನಿಯಮಿತದ ವ್ಯವಸ್ಥಾಪಕ ನಿರ್ದೇಶಕರಾದ ಇಲ್ಯಾಸ್ ಉಲ್ಲಾ ಷರೀಫ್ ತಿಳಿಸಿದ್ದಾರೆ.

ಸಹಕಾರ ಇಲಾಖೆ, ಕರ್ನಾಟಕ ರಾಜ್ಯ ಸಹಕಾರ ಮಹಾಮಂಡಳ ನಿ., ಬೆಂಗಳೂರು ಹಾಗೂ ಚಿತ್ರದುರ್ಗ ಜಿಲ್ಲಾ ಸಹಕಾರ ಯೂನಿಯನ್ ನಿ., ಚಿತ್ರದುರ್ಗ ಇವರುಗಳ ಸಂಯುಕ್ತ ಆಶ್ರಯದಲ್ಲಿ ಕೆಳಗೋಟೆಯ ಚಿತ್ರದುರ್ಗ ಜಿಲ್ಲಾ ಸಹಕಾರ ಯೂನಿಯನ್ ನಿಯಮಿತದ ಸಹಕಾರ ಭವನದಲ್ಲಿ ಹಮ್ಮಿಕೊಂಡಿದ್ದ ಚಿತ್ರದುರ್ಗ ಹಾಗೂ ಹಿರಿಯೂರು ತಾಲ್ಲೂಕುಗಳಲ್ಲಿ ಬರುವ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳ ಅಧ್ಯಕ್ಷರು ಹಾಗೂ ಮುಖ್ಯಕಾರ್ಯನಿರ್ವಹಣಾಧಿಕಾರಿಗಳಿಗೆ ಒಂದು ದಿನದ ವಿಶೇಷ ತರಬೇತಿ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.

ಈ ಉದ್ದೇಶಗಳಿಗೆ ಮುಖ್ಯವಾಗಿ ಹಣಕಾಸಿನ ವ್ಯವಸ್ಥೆಯಾಗಬೇಕು ಇದನ್ನು ತಮ್ಮ ಸಂಘದ ಆಡಳಿತ ಮಂಡಳಿಯವರು ಸಂಪನ್ಮೂಲವನ್ನು ಕ್ರೂಢೀಕರಣ ಮಾಡಬೇಕಾಗಿದೆ. ಸರ್ಕಾರವು 60 ಸಾವಿರ ಸಹಕಾರ ಸಂಘಗಳಿಗೆ ಒಂದೇ ಮಾದರಿಯ ಸಾಫ್ಟವೇರ್, ಒಂದೇ ಮಾದರಿಯ ಬೈಲಾ, ವ್ಯವಸ್ಥೆ ಮಾಡಲಾಗಿದೆ. ಈಗ ಎಲ್ಲಾ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳಿಗಳಲ್ಲಿ ಲೆಕ್ಕಪತ್ರ ನಿರ್ವಹಣೆ  ಕಂಪ್ಯೂಟರೈಸೇಷನ್ ಮಾಡಬೇಕೆಂದು ಕೇಂದ್ರ ಸರ್ಕಾರ ಸಾಪ್ಟ್‌ವೇರ್ ಕೊಡುತ್ತಿದೆ.

ರಾಜ್ಯ ಸರ್ಕಾರ ಕಂಪೂಟರ್ ಗಳ ಹಾರ್ಡ್‍ವೇರ್ ಸೌಲಭ್ಯ ನೀಡುತ್ತಿದ್ದು, ಜನರಿಗೆ ಸಂಘ ಸಂಸ್ಥೆಗಳ ಮೇಲೆ ನಂಬಿಕೆ ವಿಶ್ವಾಸ ಮೂಡಿಸಲು ಜಿಲ್ಲಾ ಡಿಸಿಸಿ ಬ್ಯಾಂಕ್‍ಗಳಿಂದ ಒಂದು ಸಂಘಕ್ಕೆ  50,000-00 ರೂ.ಗಳನ್ನು ಸಹಾಯ ಧನ ನೀಡಬೇಕೆಂದು 80 ಲಕ್ಷವನ್ನು ಬ್ಯಾಂಕಿನಿಂದ ಸಚಿವರು ಹಾಗೂ ಬ್ಯಾಂಕಿನ ಅಧ್ಯಕ್ಷರಾದ ಡಿ. ಸುಧಾಕರ್ ರವರು ಮಂಜೂರು ಮಾಡುತ್ತಿದ್ದಾರೆ ಎಂದರು.

ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳು ಕಾಮನ್ ಸರ್ವಿಸ್ ಸೆಂಟರ್ ಆಗಿ ಕೆಲಸ ನಿರ್ವಹಿಸಬೇಕು ಎಂದು  ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳಿಗೆ 4 % ಬಡ್ಡಿ ದರದಲ್ಲಿ ಸಾಲ ಸೌಲಭ್ಯ, ಗೋದಾಮುಗಳು, ಹಾಗೂ ಯಂತ್ರೋಪಕರಣಗಳನ್ನು ನಿರ್ಮಾಣ ಮಾಡುವುದರ ಮೂಲಕ ರೈತರಿಗೆ ಉಪಯೋಗವಾಗುವ ಮೂಲಕ ಜಿಲ್ಲೆಯ 18 ಸಹಕಾರ ಸಂಘಗಳಿಗೆ 50 ಕೋಟಿ ಸಾಲ ನೀಡುವ ವ್ಯವಸ್ಥೆ ಮಾಡಲಾಗಿದೆ. ಈ ಉದ್ದೇಶಗಳನ್ನು ಚಾಲನೆಗೆ ತರಬೇಕಾಗಿದೆ ಎಂದು ಇಲ್ಯಾಸ್ ಉಲ್ಲಾ ಷರೀಫ್ ತಿಳಿಸಿದರು.

ಕಾರ್ಯಕ್ರಮದಲ್ಲಿ ಪ್ರಾಸ್ತಾವಿಕ ನುಡಿಯನ್ನು ಯೂನಿಯನ್ನಿನ ನಿರ್ದೇಶಕರಾದ ಜಿಂಕಲ್ ಬಸವರಾಜ್ ರವರು ಮಾತನಾಡಿ ಸಹಕಾರ ಸಂಘಗಳ ಅಭಿವೃದ್ಧಿಗೆ ಸಂಘದ ಅಧ್ಯಕ್ಷರು ಮತ್ತು ಮುಖ್ಯಕಾರ್ಯನಿರ್ವಾಹಕರ ಜವಾಬ್ದಾರಿ, ಕರ್ತವ್ಯ ಬಹಳ ಮುಖ್ಯವಾಗಿದೆ.  ಈ ತರಬೇತಿಯಲ್ಲಿ ಇತ್ತೀಚಿನ ಕಾನೂನು, ಲೆಕ್ಕಪತ್ರಗಳನ್ನು ಈ ತರಬೇತಿ ಕಾರ್ಯಕ್ರಮದ ಮೂಲಕ ತಿಳಿದುಕೊಳ್ಳಲು ಹಾಗೂ ಇಂತಹ ತರಬೇತಿಯ ಸದುಪಯೋಗಪಡೆದುಕೊಂಡು ಇದರ ಮಾಹಿತಿಯನ್ನು ಅಳವಡಿಸಿಕೊಳ್ಳಬೇಕುಕರ್ನಾಟಕ ರಾಜ್ಯ ಸಹಕಾರ ಮಹಾಮಂಡಳ ಮತ್ತು ಜಿಲ್ಲಾ ಸಹಕಾರ ಯೂನಿಯನ್‍ಗಳ ವತಿಯಿಂದ ತರಬೇತಿ ಕಾರ್ಯಕ್ರಮಗಳನ್ನು ನೀಡುತ್ತಿದ್ದು ಸಹಕಾರ ಸಂಘಗಳ ಸಿಬ್ಬಂದಿಗಳು ಮತ್ತು ಆಡಳಿತ ಮಂಡಳಿಯವರು ಇದರ ಸದುಪಯೋಗ ಪಡೆದುಕೊಳ್ಳಬೇಕೆಂದು ಎಂದು ತಿಳಿಸಿದರು.

ನಿರ್ದೇಶಕರಾದ ಹೆಚ್.ಎಂ.ದ್ಯಾಮಣ್ಣ ಮಾತನಾಡಿ ಶ್ರೀ ಮಹಾತ್ಮ ಗಾಂಧಿಯವರು ಕನಸು ಒಂದು ಗ್ರಾಮದಲ್ಲಿ ಒಂದು ಗ್ರಾಮ ಪಂಚಾಯಿತಿ , ಒಂದು ಸಹಕಾರ ಸಂಘ, ಒಂದು ಶಾಲೆ ಇರಬೇಕು ಎಂದು ಅವರು ಕನಸು ಕಂಡಿದ್ದರು ಅದರಂತೆ ಇತ್ತೀಚಿನ ದಿನಗಳಲ್ಲಿ ಆ ಕನಸು ನನಸು ಮಾಡಲಾಗಿದೆ ಇತ್ತೀಚಿನ ದಿನಗಳಲ್ಲಿ ತಮ್ಮ ಸಂಘಗಳಲ್ಲಿ ರಾಜಕೀಯ ಹೊರತು ಪಡಿಸಿ ಕೆಲಸ ನಿರ್ವಹಿಸಬೇಕಾಗಿದೆ ಮತ್ತು ತಮ್ಮ ಸಂಘಗಳಲ್ಲಿ ಆಡಳಿತ ಮಂಡಳಿಯವರು ಸಂಘದ ಲೆಕ್ಕ ಪತ್ರಗಳ ಮಾಹಿತಿ ತಿಳಿದುಕೊಂಡಿರಬೇಕು ಎಂದು ತಿಳಿಸಿದರು.  ಸಂಘದ ಅಭಿವೃದ್ಧಿಗೆ ಸಂಘದ ಅಧ್ಯಕ್ಷರು ಮತ್ತು ಕಾರ್ಯದರ್ಶಿಗಳ ಪಾತ್ರ ಮುಖ್ಯವಾಗಿದೆ ಎಂದು ಹೇಳಿದರು.

ಚಿತ್ರದುರ್ಗ ಜಿಲ್ಲಾ ಸಹಕಾರ ಯೂನಿಯನ್ ನಿರ್ದೇಶಕರಾದ ಪ್ರತಾಪ ಸಿಂಹ ಮಾತನಾಡಿ ಸರ್ಕಾರ ಎಂಬುದು ಒಂದು ಕುಟುಂಬ ಇದ್ದ ಹಾಗೆ ಸರ್ಕಾರದಿಂದ ಕೊಟ್ಟ ರೈತರ ಸಾಲವನ್ನು ಮನ್ನ ಆಗುವುದೆಂಬ ಆಲೋಚನೆ ನಮ್ಮ ತಲೆಯಿಂದ ತೆಗೆದುಹಾಕಬೇಕು ಸಾಲದ ಉಪಯೋಗವನ್ನು ಸದುಪಯೋಗ ಪಡಿಸಿಕೊಳ್ಳಿ ಎಂದು ರೈತರಿಗೆ ತಿಳಿಸಬೇಕಾಗಿದೆ ಎಂದು ಈ ತರಬೇತಿಯಲ್ಲಿ ಉಪಸ್ಥಿತರಿರುವ ಎಲ್ಲಾ ಸದಸ್ಯರಿಗೂ ಕಿವಿ ಮಾತು ತಿಳಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆವಹಿಸಿದ ಯೂನಿಯನ್ನಿನ ಅಧ್ಯಕ್ಷರಾದ  ಜೆ.ಶಿವಪ್ರಕಾಶ್ ನಮ್ಮ ಯೂನಿಯನ್ ಇಂತಹ ತರಬೇತಿಗಳನ್ನು ನಿರಂತರವಾಗಿ ನೀಡುತ್ತದೆ.  ತಾವು ತಮ್ಮ ಸಂಘದ ಲಾಭದಲ್ಲಿ ನಮ್ಮ ಯೂನಿಯನ್‍ಗೆ ನೀಡುವ 2 % ಸಹಕಾರ ಶಿಕ್ಷಣ ನಿಧಿಯು ಸದುಪಯೋಗವಾಗಬೇಕೆಂದರೆ ತಾವು ಇಂತಹ ತರಬೇತಿಯ ಸೌಲಭ್ಯ ಪಡೆಯಬೇಕು. ರೈತರಿಗೆ ನೀಡುವ ಸಾಲ ಸೌಲಭ್ಯಗಳನ್ನು ರೈತರಿಗೆ ಸಂಘದ ಸದಸ್ಯರು ಇದರ ಬಗ್ಗೆ ಮಾಹಿತಿ ನೀಡಬೇಕು ಎಂದು ತಿಳಿಸಿದರು.

ಉದ್ಥಾಟನೆಯನ್ನು ಚಿತ್ರದುರ್ಗ ಜಿಲ್ಲಾ ಸಹಕಾರ ಯೂನಿಯನ್ ಹಾಗೂ ಕರ್ನಾಟಕ ರಾಜ್ಯ ಸಹಕಾರ ಮಹಾಮಂಡಳ ನಿ., ನಿರ್ದೇಶಕರಾದ ಆರ್. ರಾಮರೆಡ್ಡಿ, ಕಾರ್ಯಕ್ರಮ ಉದ್ಘಾಟಿಸಿದರು.

ಈ ತರಬೇತಿಗೆ ಉಪನ್ಯಾಸಕರಾಗಿ ಸಹಕಾರ ಸಂಘಗಳ ಸಹಾಯಕ ನಿಬಂಧಕರು (ನಿವೃತ್ತ) ಲಿಯಾಖತ್ ಅಲಿ , ಇವರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳು ಏಕರೂಪದ ಮಾದರಿ ಬೈಲಾವನ್ನು ಅಳವಡಿಸಿಕೊಳ್ಳುವ ಕುರಿತು ಹಾಗೂ ಜಿಲ್ಲಾ ವ್ಯವಸ್ಥಾಪಕರು, ಸಿಎಸ್‍ಸಿ ಇ-ಗೌರ್‍ನೆನ್ಸ್ ಸರ್ವೀಸ್ ಇಂಡಿಯಾ ಲಿ.ನ ಎನ್.ವಿ.ಶ್ರೀನಿವಾಸ್ ಮತ್ತು  ರಾಘವೇಂದ್ರ ಜಿ.ಎಸ್, ಚಿತ್ರದುರ್ಗ  ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳು ಬಹು ಉಪಯೋಗಿ ಸಂಸ್ಥೆಗಳಾಗಲು ಬೇಕಾಗುವ ಯೋಜನೆಗಳು ಕುರಿತು ಉಪನ್ಯಾಸ ನೀಡಿದರು.

ಜಿಲ್ಲಾ ಸಹಕಾರ ಶಿಕ್ಷಕರಾದ ನಾಗರಾಜ್ ಪಾಟೀಲ್, ಕಾರ್ಯಕ್ರಮ ನಿರೂಪಿಸಿ ಸ್ವಾಗತಿಸಿದರು. ಮುಖ್ಯ ಕಾರ್ಯನಿರ್ವಹಣಾಧಿಕಾರಿ ಶ್ರೀಮತಿ ಅನ್ನಪೂರ್ಣ ಹೇಮವಾಡಗಿ, ವಂದಿಸಿದರು.

Facebook
Twitter
Telegram
WhatsApp
suddionenews

suddionenews

Leave a Comment

Top Stories

ಸಿಇಎನ್ ಪೊಲೀಸರ ದಾಳಿ : ಅಂತರ್ ರಾಜ್ಯ ಗಾಂಜಾ ಪೆಡ್ಲರ್ ಬಂಧನ

ಸುದ್ದಿಒನ್, ಚಿತ್ರದುರ್ಗ, ನವೆಂಬರ್. 22 : ಆಂದ್ರಪ್ರದೇಶದ ವಿಶಾಖಪಟ್ಟಣಂ ನಿಂದ ಗಾಂಜಾವನ್ನು ತಂದು ಚಿತ್ರದುರ್ಗ ನಗರಕ್ಕೆ ಬಂದು ಗಾಂಜಾ ಮಾರಾಟ ಮಾಡುತ್ತಿದ್ದ ಡ್ರಗ್ಸ್‌ ಪೆಡ್ಲರ್‌ನನ್ನು ಸಿಇಎನ್ ಠಾಣೆ ಪೊಲೀಸರು ಬಂಧಿಸಿದ್ದಾರೆ. ಬಿಹಾರದ ಹರಿ ಓಂಕುಮಾರ್(24

ಪೆಟ್ರೋಲ್ ಬಂಕಿನಲ್ಲಿ ವಂಚನೆ ಆರೋಪ : ಗ್ರಾಹಕರು ಹಾಗೂ ಸಿಬ್ಬಂದಿಗಳ ನಡುವೆ ಮಾತಿನ ಚಕಮಕಿ

  ವರದಿ ಮತ್ತು ಫೋಟೋ ಕೃಪೆ ಸುರೇಶ್ ಬೆಳಗೆರೆ ಮೊ : 97398 75729 ಸುದ್ದಿಒನ್, ಚಳ್ಳಕೆರೆ, ನವೆಂಬರ್. 22 : ಬೈಕ್ ಗಳಿಗೆ ಪೆಟ್ರೋಲ್ ಹಾಕುವ ವೇಳೆ ಗ್ರಾಹಕರಿಗೆ ಇಲ್ಲಿನ ಸಿಬ್ಬಂದಿ ವಂಚನೆ

ಅಕ್ರಮ ಕಸಾಯಿ ಖಾನೆ ಬಂದ್ ಮಾಡಿ : ದಾದಾ ಪೀರ್ ಆಗ್ರಹ : ವಿಡಿಯೋ ವೈರಲ್..!

ಸುದ್ದಿಒನ್, ಹಿರಿಯೂರು : ಅಕ್ರಮವಾಗಿ ಕಸಾಯಿ ಖಾನೆ ನಡೆಸುತ್ತಿರುವವರ ವಿರುದ್ಧ ದಾದಾ ಪೀರ್ ಎಂಬುವವರು ತಮ್ಮ ಆಕ್ರೋಶ ವ್ಯಕ್ತಪಡಿಸಿದ್ದಾರೆ. ದಾದಾ ಪೀರ್ 6ನೇ ವಾರ್ಡ್ ನಲ್ಲಿ ವಾಸಿಸುವವ ವ್ಯಕ್ತಿಯಾಗಿದ್ದಾರೆ. ಕಸಾಯಿ ಖಾನೆಯಿಂದ ಮಕ್ಕಳು ಅನಾರೋಗ್ಯಕ್ಕೆ

error: Content is protected !!