Notice: Undefined index: options in /home/nagendra/public_html/content/plugins/elementor-pro/modules/theme-builder/widgets/site-logo.php on line 124

ಅಭಿವೃದ್ಧಿ ಮಾಡದ ಸರ್ಕಾರ ಹಿಂದೂಗಳ ಮೇಲೆ ದಬ್ಬಾಳಿಕೆ ಮಾಡುತ್ತಿದೆ : ಬಿಜೆಪಿ ವಕ್ತಾರ ಕೆ.ಎಸ್.ನವೀನ್

Facebook
Twitter
Telegram
WhatsApp

 

ವರದಿ ಮತ್ತು ಫೋಟೋ ಕೃಪೆ
ಸುರೇಶ್ ಪಟ್ಟಣ್,
ಮೊ : 98862 95817

ಸುದ್ದಿಒನ್, ಚಿತ್ರದುರ್ಗ ಜ. 05 :  ರಾಜ್ಯ ಸರ್ಕಾರ ಹಿಂದೂಗಳು ಮತ್ತು ಹಿಂದು ಕಾರ್ಯಕರ್ತರ ಮೇಲೆ ವಿನಾ ಕಾರಣ ಹಳೆಯ ಪ್ರಕರಣಗಳನ್ನು ದಾಖಲು ಮಾಡಿ ಹಿಂದುಗಳನ್ನು ಕೆಣಕುತ್ತಿದೆ. ರಾಜ್ಯದ ಅಧಿಕಾರವನ್ನು ಹಿಡಿದ ಸಿದ್ದರಾಮಯ್ಯ ರಾಜ್ಯದ ಅಭಿವೃದ್ದಿಯನ್ನು ಮಾಡದೇ ಹಿಂದುಗಳನ್ನು ಕೆಣಕುತ್ತಿದ್ದಾರೆ ಇದರ ಪರಿಣಾಮ ಮುಂದಿನ  ದಿನದಲ್ಲಿ ನೋಡಬೇಕಾಗುತ್ತದೆ ಎಂದು ವಿಧಾನ ಪರಿಷತ್ ಸದಸ್ಯ, ಬಿಜೆಪಿ ವಕ್ತಾರ ಕೆ.ಎಸ್.ನವೀನ್ ಸಿದ್ದರಾಮಯ್ಯ ಮತ್ತು ಸರ್ಕಾರದ ವಿರುದ್ದ ಗುಡುಗಿದ್ದಾರೆ.

ಚಿತ್ರದುರ್ಗ ಜಿಲ್ಲಾ ಬಿಜೆಪಿ ಕಚೇರಿಯಲ್ಲಿ ಶುಕ್ರವಾರ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬರುತ್ತಿದ್ದಂತಯೇ ಹಿಂದುಗಳ ಮೇಲೆ ದಬ್ಬಾಳಿಕೆಯನ್ನು ನಡೆಸುವ ಕಾರ್ಯವನ್ನು ಮಾಡುತ್ತಿದೆ. 25-30 ವರ್ಷ ಹಳೆಯದಾದ ಪ್ರಕರಣಗಳನ್ನು ಹೂರ ತೆಗೆದು ಅದರಲ್ಲಿ ಭಾಗಿಯಾಗಿದ್ದವರ ಮೇಲೆ ಪ್ರಕರಣವನ್ನು ದಾಖಲಿಸಿ ಜೈಲಿಗೆ ಕಳುಹಿಸುವ ಕಾರ್ಯವನ್ನು ಮಾಡುತ್ತಿದೆ, ಇದನ್ನು ಬಿಜೆಪಿ ಖಂಡಿಸುತ್ತದೆ. ಕಳೆದ ವಾರದ ಹಿಂದೆ ರಾಜ್ಯದ ಪೋಲಿಸ್ ಮುಖ್ಯಸ್ಥರ ಸಭೆಯನ್ನು ನಡೆಸಿದ ಸಿದ್ದರಾಮಯ್ಯ ಮತ್ತು ಡಿ.ಕೆ.ಶಿವಕುಮಾರ್ ರಾಜ್ಯದ ಹಿಂದುಗಳ ಮೇಲೆ ದಬ್ಬಾಳಿಕೆಯನ್ನು ನಡೆಸಿ ಅವರನ್ನು ಜೈಲಿಗೆ ಕಳುಹಿಸುವಂತೆ ಪೋಲಿಸರಿಗೆ ಸೂಚನೆಯನ್ನು ನೀಡಿದ್ದಾರೆ ಎನ್ನಲಾಗಿದೆ ಇದರಿಂದ ಪೊಲೀಸಿನವರು ಈ ರೀತಿಯಾದ ಕೆಲಸವನ್ನು ಮಾಡುತ್ತಿದ್ದಾರೆ ಎನ್ನಲಾಗಿದೆ ಎಂದು ನವೀನ್ ತಿಳಿಸಿದರು.

ರಾಜ್ಯದಲ್ಲಿ ಬರಗಾಲ ಬಂದಿದೆ. ರೈತರು ನೀರಿಲ್ಲದೆ, ಜಾನುವಾರುಗಳಿಗೆ ಮೇವಿಲ್ಲದೆ, ಜನತೆ ಕೆಲಸ ಇಲ್ಲದೆ ಗುಳೆ ಹೋಗುತ್ತಿದ್ದಾರೆ. ಇದನ್ನು ತಡೆಯುವ ಕಾರ್ಯವನ್ನು ಮಾಡದ ಸಿದ್ದರಾಮಯ್ಯ ಹಿಂದುಗಳ ಮೇಲೆ ದೌರ್ಜನ್ಯವನ್ನು ನಡೆಸುತ್ತಿದ್ದಾರೆ. ಸರ್ಕಾರ ಆಧಿಕಾರಕ್ಕೆ ಬಂದು 7 ತಿಂಗಳಾದರು ಸಹಾ ಯಾವ ಅಭಿವೃದ್ದಿ ಕಾರ್ಯವೂ ಸಹಾ ಪ್ರಾರಂಭವಾಗಿಲ್ಲ, ಈ ಹಿಂದೆ ಆಗಿರುವ ಅಭಿವೃದ್ದಿ ಕಾರ್ಯವೂ ಸಹಾ ನಡೆಯದೆ ಸ್ಥಗಿತವಾಗಿವೆ. ಸರ್ಕಾರ ತಟಸ್ಥವಾಗಿದೆ, ತಮ್ಮ ಗ್ಯಾರೆಂಟಿಗಳಿಗೆ ಹಣವನ್ನು ಹೊಂದಿಸುವ ಕಾರ್ಯವನ್ನು ಮಾಡುತ್ತಿದೆ, ಪರಿಶಿಷ್ಟ ಜಾತಿ ಮತ್ತು ಪಂಗಡದವರ ಹಣವನ್ನು ಸಹಾ ತೆಗೆದುಕೊಳ್ಳಲಾಗುತ್ತಿದೆ, ಅವರ ಅಭಿವೃದ್ದಿಯನ್ನು ಸಹಾ ಕಡೆಗಣಿಸಲಾಗುತ್ತಿದೆ ಎಂದು ದೂರಿದರು.

ಸಿದ್ದರಾಮಯ್ಯ ರವರು ತಮ್ಮ ಪಕ್ಷದ ಹೈಕಮಾಂಡನ್ನು ಓಲೈಸುವುದಕ್ಕಾಗಿ ರಾಜ್ಯದಲ್ಲಿ ಹಿಂದುಗಳ ಮೇಲೆ ಪ್ರಕರಣವನ್ನು ದಾಖಲಿಸುತ್ತಿದ್ದಾರೆ. ಜಾತಿಗಳ ಮಧ್ಯೆ ಕಲಹವನ್ನು ಉಂಟು ಮಾಡುವಂತ ಕಾರ್ಯವನ್ನು ಮಾಡುತ್ತಿದ್ದಾರೆ. ಕಾಂಗ್ರೆಸ್ ಮುಖಂಡರುಗಳಾದ ಹರಿಪ್ರಸಾದ್, ಉಗ್ರಪ್ಪ,ಅಂಜನೇಯ ರವರು ಹಿಂದು ಸಮಾಜವನ್ನು ಕೆಣಕುವ ಮಾತುಗಳನ್ನು ಆಡುತ್ತಿದ್ದಾರೆ. ರಾಜ್ಯದಲ್ಲಿ ಆಶಾಂತಿಯನ್ನು ಉಂಟು ಮಾಡುವಂತ ಕಾರ್ಯವನ್ನು ಮಾಡುತ್ತಿದ್ದಾರೆ. ಸರ್ಕಾರ ರಾಜ್ಯದಲ್ಲಿ ಆಶಾಂತಿಯನ್ನುಂಟು ಮಾಡುವಂತೆ ಪೋಲಿಸರಿಗೆ ಸೂಚನೆಯನ್ನು ನೀಡಿದಂತೆ ಕಾಣುತ್ತಿದೆ. ಇದರಿಂದ ಅವರು ಈ ರೀತಿಯಾದ ಕೆಲಸವನ್ನು ಮಾಡುತ್ತಿದ್ದಾರೆ ಎಂದು ನವೀನ್ ಆರೋಪಿಸಿದರು.

ರಾಜ್ಯದಲ್ಲಿ ಹಿಂದೂಗಳನ್ನು ಧಮನ ಮಾಡುವ ಕಾರ್ಯವನ್ನು ಸಿದ್ದರಾಮಯ್ಯ ಮಾಡುತ್ತಿದ್ದರೆ ಅದರ ಹತ್ತು ಪಟ್ಟು ಹೆಚ್ಚು ಹಿಂದುಗಳ ಶಕ್ತಿ ಜಾಸ್ತಿಯಾಗುತ್ತದೆ. ಆಂಜನೇಯ ರಾವಣನ ಲಂಕೆಯನ್ನು ದಹನ ಮಾಡಿದಂತೆ ನಮ್ಮ ಕಾರ್ಯಕರ್ತರು ಸಿದ್ದರಾಮಯ್ಯ ಸರ್ಕಾರವನ್ನು ಧಮನ ಮಾಡಲು ಮುಂದಾಗುತ್ತಾರೆ ಎಂದು ಎಚ್ಚರಿಕೆಯನ್ನು ನೀಡಿದ ಅವರು, ಹಿಂದು ಕಾರ್ಯಕರ್ತರನ್ನು ಬಂಧಿಸುವ ಕಾರ್ಯವನ್ನು ನಿಲ್ಲಿಸಿ ರಾಜ್ಯದ ಬರಗಾಲ, ಅಭಿವೃಧ್ದಿಯ ಕಡೆಗೆ ಯೋಚಿಸಿ ಹಿಂದುಗಳಲ್ಲಿ ಭಯದ ವಾತಾವರಣವನ್ನು ನಿರ್ಮಾಣ ಮಾಡಬೇಡಿ ಎಂದು ಎಂದು ಮುಖ್ಯಮಂತ್ರಿಗಳಿಗೆ ಕಿವಿ ಮಾತು ಹೇಳಿದರು.

ಪಕ್ಷದಲ್ಲಿ ಪ್ರಮಾಣಿಕತೆ ಪಕ್ಷ ನೀಡಿದ ಸೂಚನೆಗಳನ್ನು ಸರಿಯಾದ ರೀತಿಯಲ್ಲಿ ಮಾಡಿಕೊಂಡು ಹೋದರೆ ಮುಂದೆ ಪಕ್ಷ ಅವರನ್ನು ಗುರುತಿಸಿ ಉತ್ತಮ ಸ್ಥಾನವನ್ನು ನೀಡುತ್ತದೆ. ಎಂಬುದಕ್ಕೆ ನನಗೆ ಈಗ ಬಂದಿರುವ ಸ್ಥಾನವೇ ಸಾಕ್ಷಿಯಾಗಿದೆ ಎಂದು ನವೀನ್ ತಿಳಿಸಿದ್ದು ಪಕ್ಷ ಈ ಹಿಂದೆ ನೀಡಿದ ವಿವಿಧ ರೀತಿಯ ಹುದ್ದೆಗಳನ್ನು ನಿಭಾಯಿಸಿದ್ದರಿಂದ ಈಗ ನನಗೆ ರಾಜ್ಯ ವಕ್ತಾರ ಹುದ್ದೆಯನ್ನು ನೀಡಿದೆ ಇದಕ್ಕೆ ಪಕ್ಷದ ಮುಖಂಡರನ್ನು ಅಭಿನಂದಿಸಿದರು.

ಗೋಷ್ಟಿಯಲ್ಲಿ ಬಿಜೆಪಿ ಅಧ್ಯಕ್ಷರಾದ ಎ.ಮುರಳಿಧರ, ಮಂಡಲ ಅಧ್ಯಕ್ಷ ನವೀನ್ ಚಾಲುಕ್ಯ, ರೈತ ಮೋರ್ಚಾದ ಅಧ್ಯಕ್ಷ ವೆಂಕಟೇಶ್ ಯಾದವ್, ಗ್ರಾಮಾಂತರ ಅಧ್ಯಕ್ಷ ಕಲ್ಲೇಶಯ್ಯ, ಜಿಲ್ಲಾ ವಕ್ತಾರರಾದ ನಾಗರಾಜ್ ಬೇದ್ರೇ, ದಗ್ಗೆ ಶಿವಪ್ರಕಾಶ್ ಸೇರಿದಂತೆ ಇತರರು ಭಾಗವಹಿಸಿದ್ದರು. ಇದೇ ಸಂದರ್ಭದಲ್ಲಿ ರಾಜ್ಯ ವಕ್ತಾರರಾಗಿ ನೇಮಕವಾಗಿದ್ದಕ್ಕೆ ಕೆ.ಎಸ್.ವನೀನ್ ರವರನ್ನು ಬಿಜೆಪಿವತಿಯಿಂದ ಹಾರ ಹಾಕಿ ಅಭಿನಂದಿಸಲಾಯಿತು.

Facebook
Twitter
Telegram
WhatsApp
suddionenews

suddionenews

Leave a Comment

Top Stories

ಪೆಟ್ರೋಲ್ ಬಂಕಿನಲ್ಲಿ ವಂಚನೆ ಆರೋಪ : ಗ್ರಾಹಕರು ಹಾಗೂ ಸಿಬ್ಬಂದಿಗಳ ನಡುವೆ ಮಾತಿನ ಚಕಮಕಿ

  ವರದಿ ಮತ್ತು ಫೋಟೋ ಕೃಪೆ ಸುರೇಶ್ ಬೆಳಗೆರೆ ಮೊ : 97398 75729 ಸುದ್ದಿಒನ್, ಚಳ್ಳಕೆರೆ, ನವೆಂಬರ್. 22 : ಬೈಕ್ ಗಳಿಗೆ ಪೆಟ್ರೋಲ್ ಹಾಕುವ ವೇಳೆ ಗ್ರಾಹಕರಿಗೆ ಇಲ್ಲಿನ ಸಿಬ್ಬಂದಿ ವಂಚನೆ

ಅಕ್ರಮ ಕಸಾಯಿ ಖಾನೆ ಬಂದ್ ಮಾಡಿ : ದಾದಾ ಪೀರ್ ಆಗ್ರಹ : ವಿಡಿಯೋ ವೈರಲ್..!

ಸುದ್ದಿಒನ್, ಹಿರಿಯೂರು : ಅಕ್ರಮವಾಗಿ ಕಸಾಯಿ ಖಾನೆ ನಡೆಸುತ್ತಿರುವವರ ವಿರುದ್ಧ ದಾದಾ ಪೀರ್ ಎಂಬುವವರು ತಮ್ಮ ಆಕ್ರೋಶ ವ್ಯಕ್ತಪಡಿಸಿದ್ದಾರೆ. ದಾದಾ ಪೀರ್ 6ನೇ ವಾರ್ಡ್ ನಲ್ಲಿ ವಾಸಿಸುವವ ವ್ಯಕ್ತಿಯಾಗಿದ್ದಾರೆ. ಕಸಾಯಿ ಖಾನೆಯಿಂದ ಮಕ್ಕಳು ಅನಾರೋಗ್ಯಕ್ಕೆ

ಬದುಕಿನಲ್ಲಿ ರಂಗಭೂಮಿ ಉತ್ತಮ ಮಾರ್ಗದರ್ಶನ ನೀಡುತ್ತದೆ : ಡಾ.ಬಸವಕುಮಾರ ಸ್ವಾಮೀಜಿ

    ಸುದ್ದಿಒನ್, ಚಿತ್ರದುರ್ಗ, ನವೆಂಬರ್. 22: ಜೀವನ ಒಂದು ನಾಟಕರಂಗ ನಾವುಗಳು ಅದರ ಪಾತ್ರಧಾರಿಗಳು. ಬದುಕಿನಲ್ಲಿ ನಾನಾ ಕಷ್ಟಸುಖಗಳು ಬರುತ್ತವೆ. ಅದಕ್ಕೆಲ್ಲಾ ಉತ್ತಮ ಮಾರ್ಗದರ್ಶನ ನೀಡುವುದು ರಂಗಭೂಮಿ ಮಾತ್ರ ಎಂದು ಎಸ್.ಜೆ.ಎಮ್. ವಿದ್ಯಾಪೀಠದ

error: Content is protected !!