ಉಕ್ರೇನ್ ಮೇಲಿನ ರಷ್ಯಾ ದಾಳಿ ಇಂದಿಗೆ ನಾಲ್ಕನೇ ದಿನಕ್ಕೆ ಕಾಲಿಟ್ಟಿದೆ. ಈ ಮಧ್ಯೆ ಉಕ್ರೇನ್ ನಲ್ಲಿ ಸಾಕಷ್ಟು ಸಾವು ನೋವು ಸಂಭವಿಸಿದೆ. ಯುದ್ಧದಿಂದ ಹಿಂದೆ ಸರಿಯಲು ಉಕ್ರೇನ್ ಮನವಿ ಮಾಡಿದ್ದರು, ಯುದ್ಧ ಮುಂದುವರೆಸುತ್ತಿರುವ ರಷ್ಯಾ ಒಂದೊಂದೆ ಪ್ರದೇಶವನ್ನ ತನ್ನ ವಶಕ್ಕೆ ಪಡೆಯುತ್ತಿದೆ. ಇದೀಗ ಅತಿ ದೊಡ್ಡ ನಗರದ ಮೇಲೆ ಗ್ಯಾಸ್ ಪೈಪ್ ಲೈನ್ ಸ್ಪೋಟ ಮಾಡಿದೆ.
ಉಕ್ರೇನ್ ಅತಿ ದೊಡ್ಡ ನಗರ ಕರ್ಕೀವ್ ನಲ್ಲಿ ಗ್ಯಾಸ್ ಪೈಪ್ ಲೈನ್ ಬ್ಲಾಸ್ಟ್ ಮಾಡಲಾಗಿದೆ. ಸ್ಪೋಟದ ಪರಿಣಾಮವಾಗಿ, ಆಗಸದಲ್ಲಿ ದೊಡ್ಡ ಪ್ರಮಾಣದಲ್ಲಿ ಹೊಗೆ ಆವರಿಸಿಕೊಂಡಿದೆ. ಇದು ಪರಿಸರಕ್ಕೂ ಸಾಕಷ್ಟು ಹಾನಿ ಮಾಡಲಿದೆ. ಅಷ್ಟೇ ಅಲ್ಲ ಅಲ್ಲಿ ವಾಸಿಸುತ್ತಿರುವ ಜನರ ಆರೋಗ್ಯದ ಮೇಲೂ ಸಾಕಷ್ಟು ಪರಿಣಾಮ ಬೀರಲಿದೆ.
https://twitter.com/WW32022/status/1497758655407665165?t=ABUGKNDKrKcfCJkHThgljw&s=19
ಜನ ಮನೆಯ ಕಿಟಕಿಗಳನ್ನ ಬಟ್ಟೆಯಲ್ಲಿ ಮುಚ್ಚಿ, ಆರೋಗ್ಯಕ್ಕಾಗಿ ಹೆಚ್ಚು ದ್ರವ ಪದಾರ್ಥಗಳನದನ ಸೇವಿಸಬೇಕಾಗಿದೆ. ಜನರಿಗೆ ಆರೋಗ್ಯವನ್ನು ನೋಡಿಕೊಳ್ಳಲು ಅಲ್ಲಿನ ಸರ್ಕಾರ ಸೂಚನೆ ನೀಡಿದೆ.