ಪಾಕಿಸ್ತಾನ ಪ್ರಧಾನಿಯಿಂದ ರಷ್ಯಾಗೆ ಚೊಚ್ಚಲ ಪ್ರವಾಸ : ರೋಮಾಂಚನಕಾರಿಯಾಗಿದೆ ಎಂದ ಇಮ್ರಾನ್ ಖಾನ್..!

 

ರಷ್ಯಾ ಉಕ್ರೇನ್ ಮೇಲೆ ಯುದ್ಧ ಸಾರಿದ್ದು ಈಗಾಗಲೇ ಎರಡು ದೇಶಗಳು ತಮ್ಮ ತಮ್ಮ ಕಡೆಯಿಂದ ಸ್ಯಾಂಪಲ್ ತೋರಿಸುತ್ತಿವೆ. ಈ ಮಧ್ಯೆ ಇದೇ ಮೊದಲ ಬಾರಿಗೆ ಪಾಕಿಸ್ತಾನದ ಪ್ರಧಾನಿ ಇಮ್ರಾನ್ ಖಾನ್ ರಷ್ಯಾಗೆ ಪ್ರವಾಸ ಕೈಗೊಂಡಿದ್ದಾರೆ. ಎರಡು ದಿನಗಳ ಕಾಲ ಪ್ರವಾಸ ಕೈಗೊಂಡಿದ್ದಾರೆ.

ಮಾಸ್ಕೋದಾ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಇಮ್ರಾನ್ ಖಾನ್ ಅವರನ್ನ ಸ್ವಾಗತಿಸಲಾಗಿದೆ. ಈ ಭೇಟಿಯಲ್ಲಿ ಇಮ್ರಾನ್ ಖಾನ್ ವ್ಲಾಡಿಮರ್ ಪುಟೀನ್ ಜೊತೆಗೆ ಮಾತುಕತೆ ನಡೆಸಲಿದ್ದಾರೆ. ದ್ವಿಪಕ್ಷೀಯ ಸಂಬಂಧ ಬಲಪಡಿಸುವ ಬಗ್ಗೆ ಹಾಗೂ ಇಂಧನ ವಲಯದಲ್ಲಿ ಸಿಗುವ ಸಹಕಾರದ ಬಗ್ಗೆ ಚರ್ಚೆ ನಡೆಸಲಿದ್ದಾರೆ.

ಇದಕ್ಕೂ ಮುನ್ನ ಇಮ್ರಾನ್ ಖಾನ್ ವಿಮಾನ ಇಳಿದ ಕೂಡಲೇ ಆಡಿರೋ ಮಾತುಗಳು ಅಲ್ಲಿನ ಕ್ಯಾಮೆರಾಗಳಲ್ಲಿ ಸೆರೆಯಾಗಿದೆ. ಇಂಥಹ ಯುದ್ಧದ ಸಮಯದಲ್ಲಿ ರಷ್ಯಾ ಪ್ರವಾಸದಲ್ಲಿರೋದು ಬಹಳ ರೋಚಕವಾಗಿದೆ ಎಂದಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *