ಕಡೆಗೂ ನೆರವೇರಿತು ಉಗ್ರಂ ಮಂಜು ನಿಶ್ಚಿತಾರ್ಥ : ಹುಡುಗಿ ಯಾರು..?

1 Min Read

ನಟ ಉಗ್ರಂ ಮಂಜುಗೆ ಮದುವೆಯಾಗಬೇಕು ಅನ್ನೋದು ಅವರ ತಂದೆ ತಾಯಿಯ ಆಸೆಯಾಗಿತ್ತು. ಆದರೆ ಅದಕ್ಕೆ ಮಂಜು ಸುತರಾಂ ಒಪ್ಪುತ್ತಿರಲಿಲ್ಲ. ಬಿಗ್ ಬಾಸ್ ಗೆ ಬಂದ್ಮೇಲೆ ಸುದೀಪ್ ಅವರು ಕೂಡ ಒಮ್ಮೆ ಹೇಳಿದ್ದರು. ಎಲ್ಲದರ ಫಲವಾಗಿ ಇದೀಗ ಉಗ್ರಂ ಮಂಜು ಎಂಗೇಜ್ಮೆಂಟ್ ಆಗಿದೆ. ಆ ಹುಡುಗಿ ಯಾರು..? ಏನ್ ಮಾಡ್ತಾ ಇದ್ದಾರೆ ಎಂಬೆಲ್ಲಾ ವಿಚಾರಗಳನ್ನು ಈಗ ಹುಡುಕುತ್ತಿದ್ದಾರೆ ಅವರ ಅಭಿಮಾನಿಗಳು.

ಮ್ಯಾಕ್ಸ್ ಮಂಜು ಅವರು ಸಂಧ್ಯಾ ಖುಷಿ ಎನ್ನುವರು ಜೊತೆ ಎಂಗೇಜ್ಮೆಂಟ್ ಮಾಡಿಕೊಂಡಿದ್ದಾರೆ. ಈ ಸಂಬಂಧದ ಫೋಟೋಗಳನ್ನು ಇಬ್ಬರೂ ತಮ್ಮ ತಮ್ಮ ಇನ್ಸ್ಟಾಗ್ರಾಮ್ ನಲ್ಲಿ ಹಂಚಿಕೊಂಡಿದ್ದಾರೆ. ಅಲ್ಲದೇ ಬದುಕಿನ ಹೊಸ ಅಧ್ಯಾಯ ಆರಂಭವಾಗಿದೆ. ನಿಮ್ಮ ಆಶೀರ್ವಾದ ನಮ್ಮ ಮೇಲಿರಲಿ. ದೇವರ ಕೃಪೆಯಿಂದ, ಕುಟುಂಬದ ಆಶೀರ್ವಾದದಿಂದ ನಾವೂ ಜೀವನದ ಹೊಸ ಹಾದಿಗೆ ಕಾಲಿಟ್ಟಿದ್ದೇವೆ. ಹೊಸ ಬಂಧದ ಆರಂಭ ನಿಶ್ಚುತಾರ್ಥದ ಸುಂದರ ಕ್ಷಣ ನಿಮ್ಮೆಲ್ಲರೊಂದಿಗೆ ಹಂಚಿಕೊಳ್ಳುತ್ತಿದ್ದೇವೆ ಎಂದು ಇಬ್ಬರು ಸೋಷಿಯಲ್ ಮೀಡಿಯಾದಲ್ಲಿ ಬರೆದುಕೊಂಡಿದ್ದಾರೆ.

ಸಹಜವಾಗಿಯೇ ಉಗ್ರಂ ಮಂಜು ಮದುವೆಯಾಗುತ್ತಿರುವ ಹುಡುಗಿ ಯಾರು..? ಅವರು ಇಂಡಸ್ಟ್ರಿಯವರೇನಾ ಎಂಬೆಲ್ಲಾ ಪ್ರಶ್ನೆಗಳು ಸಹಜವಾಗಿಯೇ ಬರುತ್ತೆ. ಆದರೆ ಕುತೂಹಲದಿಂದ ಕಾಯುತ್ತಿರುವ ಅವರ ಅಭಿಮಾನಿಗಳ ಗಮನಕ್ಕೆ ಸಂಧ್ಯಾ ಖುಷಿ ಕಲಾವಿದರಲ್ಲ, ಸಿನಿಮಾ ಇಂಡಸ್ಟ್ರಿಗೂ ಅವರಿಗೂ ನಂಟಿಲ್ಲ. ಅವರು ಆಸ್ಪತ್ರೆ ಒಂದರಲ್ಲಿ ಕೆಲಸ ಮಾಡುತ್ತಿದ್ದಾರೆ. ಸಂಧ್ಯಾ ಖುಷಿ ಸ್ಪರ್ಶ್ ಆಸ್ಪತ್ರೆಯಲ್ಲಿ ಅಡ್ಮಿನ್ ಡಿಪಾರ್ಟ್ಮೆಂಟ್ ನಲ್ಲಿ ಕೆಲಸ ಮಾಡುತ್ತಿದ್ದು, Transplant Coordinator ಎಂದು ತಮ್ಮ ಸೋಷಿಯಲ್ ಮೀಡಿಯಾದಲ್ಲಿ ಬರೆದುಕೊಂಡಿದ್ದಾರೆ. ಸದ್ಯ ಎಂಗೇಜ್ಮೆಂಟ್ ಮಾಡಿಕೊಂಡಿದ್ದು, ಮಂಜು ತಂದೆ ಖುಷಿಯಾಗಿದ್ದಾರೆ.

Share This Article
Enable Notifications OK No thanks