ತುಮಕೂರು: ಇವತ್ತು ನೀಟ್ ಪರೀಕ್ಷೆ ನಡರಸಲಾಗಿತ್ತು. ಅದು ಇದ್ದದ್ದು ಕನ್ನಡ ಭಾಷೆಯ ಪತ್ರಿಕೆ. ಆದ್ರೆ ಪ್ರಶ್ನೆ ಪತ್ರಿಕೆ ನೋಡಿದ ವಿದ್ಯಾರ್ಥಿಗಳು ಅಕ್ಷರಶಃ ಶಾಕ್ ಆಗಿದ್ರು. ಪರೀಕ್ಷೆ ಬರೆಯಬೇಕಾ..? ಬೇಡವಾ ಎಂಬ ಗೊಂದಲ ವಿದ್ಯಾರ್ಥಿಗಳಿಗೆ ಕೊಠಡಿಯಲ್ಲೆ ಮೂಡಿತ್ತು. ಬಳಿಕ ಪರೀಕ್ಷೆಯನ್ನು ಬರೆಯದೆ ಪ್ರತಿಭಟಿಸಿರೋ ಘಟನೆ ನಡೆದಿದೆ.
ನಗರದ ಎಸ್ಐಟಿ ಕಾಲೇಜಿನಲ್ಲಿ ಪರೀಕ್ಷೆ ಆಯೋಜಿಸಲಾಗಿತ್ತು. ರಾಜ್ಯದ ನಾನಾ ಮೂಲೆಯಿಂದ ಪರೀಕ್ಷೆ ಬರೆಯಲು ವಿದ್ಯಾರ್ಥಿಗಳು ಬಂದಿದ್ದರು. ಬೆಳಗ್ಗೆ 9 ಗಂಟೆಯಿಂದ 12 ಗಂಟೆಗೆ ಪರೀಕ್ಷೆ ಸಮಯ ನಿಗದಿಯಾಗಿತ್ತು. 100 ಪ್ರಶ್ನೆಗಳಿರುವ ಪ್ರಶ್ನೆ ಪತ್ರಿಕೆಯಲ್ಲಿ 90 ಪ್ರಶ್ನೆಗಳು ಸಂಪೂರ್ಣ ಹಿಂದಿಯಲ್ಲಿ ಇನ್ನುಳಿದ ಕೇವಲ 10 ಪ್ರಶ್ನೆಗಳು ಕನ್ನಡದಲ್ಲಿ ಪ್ರಕಟಗೊಂಡಿದ್ದವು. ಇದನ್ನು ಕಂಡು ವಿದ್ಯಾರ್ಥಿಗಳು ಪರೀಕ್ಷೆ ಬರೆಯದಂತೆ ಹೊರ ಬಂದು ಪ್ರತಿಭಟಿಸಿದ್ದಾರೆ.
ತುಮಕೂರು ಮಾತ್ರವಲ್ಲ ಬಳ್ಳಾರಿಯಲ್ಲೂ ಇಂಥದ್ದೇ ಘಟನೆ ನಡೆದಿದೆ. ಕನ್ನಡ ಪತ್ರಿಕೆ ಹಿಂದಿಯಲ್ಲಿ ಬಂದಿದ್ದಕ್ಕೆ ಆಕ್ರೋಶಗೊಂಡಿದ್ದಾರೆ. ಮರು ಪರೀಕ್ಷೆ ನಡೆಸುವಂತೆ ಒತ್ತಾಯಿಸಿದ್ದಾರೆ.