Notice: Undefined index: options in /home/nagendra/public_html/content/plugins/elementor-pro/modules/theme-builder/widgets/site-logo.php on line 124

ದ್ವೇಷದ ನಡೆಗೆ ತೆರೆ ಬೀಳಲಿ ; ಪ್ರೀತಿ ವಿಶ್ವಾಸ ವಿಶ್ವದಲ್ಲಿ ವಿಜೃಂಭಿಸಲಿ

Facebook
Twitter
Telegram
WhatsApp

ಕ್ಯಾಲೆಂಡರ್ ವರ್ಷದ ಆರಂಭ ಜಗತ್ತನ್ನು ತೀವ್ರ ಸಂಕಷ್ಟಕ್ಕೆ ದೂಡಿದೆ. ಮನುಷ್ಯನ ಸ್ವಪ್ರತಿಷ್ಠೆ, ದ್ವೇಷದ ನಡೆಗೆ ಜಗತ್ತು ನಲುಗಿದೆ. ಆಳುವ ನೇತಾರರ ದರ್ಪಕ್ಕೆ ಬದುಕಿ ಬಾಳಬೇಕಾದ ಲಕ್ಷಾಂತರ ಅಮಾಯಕರು ಜೀವ ಕಳೆದುಕೊಳ್ಳುತ್ತಿದ್ದಾರೆ, ಕೋಟ್ಯಾಂತರ ಜನರ ಬದುಕು ಬೀದಿಗೆ ಬೀಳುತ್ತಿದೆ.

ಒಂದು ಪುಟ್ಟ ಹಾಗೂ ದೊಡ್ಡ ದೇಶದ ಮಧ್ಯೆ ಘೋಷಿತ ಯುದ್ಧ ಸಹಸ್ರಾರು ಮಂದಿಯನ್ನು ಬಲಿ ತೆಗೆದುಕೊಳ್ಳುತ್ತಿದೆ. ಒಂದು ರಾಷ್ಟ್ರವನ್ನೇ ವಿನಾಶದ ಅಂಚಿಗೆ ದೂಡಿದೆ. ಈ ಯುದ್ಧ ಜಗತ್ತಿನ ಬಹಳಷ್ಟು ರಾಷ್ಟ್ರಗಳ ಮೇಲೆ ದುಷ್ಪರಿಣಾಮ ಬೀರಿದೆ. ಈ ಹಿಂದಿನ ಯುದ್ಧಗಳಿಂದ ಜಗತ್ತು ಪಾಠ ಕಲಿತಿಲ್ಲ ಎಂಬುದು ಸ್ಪಷ್ಟಗೊಂಡಿದೆ. ಯುದ್ಧಕ್ಕೆ ತಡೆಯೊಡ್ಡಬೇಕಾದ ಹೊಣೆಗಾರಿಕೆಯಿಂದ ದೊಡ್ಡ ದೊಡ್ಡ ರಾಷ್ಟ್ರಗಳು ನುಣಚಿಕೊಂಡಿದ್ದು, ಅವುಗಳ ಮೌನ, ಜಾಣೆ ನಡೆ, ದಿಗ್ಬ್ರಮೆ ಮೂಡಿಸಿದೆ.

ಜ್ಞಾನವಂತರೇ ಹೆಚ್ಚಾಗಿರುವ ಆಧುನಿಕ ಜಗತ್ತಿನಲ್ಲಿ ರಾಜರ ಕಾಲದ ರೀತಿ ವಿಜೃಂಭಿಸುತ್ತಿರುವ ಯುದ್ಧ ಜಗತ್ತನ್ನು ಅಪಾಯಕ್ಕೆ ದೂಡುತ್ತಿದೆ. ಯುದ್ಧ ರಹಿತ ಜಗತ್ತು ನಿರ್ಮಾಣ ಮಾಡಲು ಆಗದಷ್ಟು ಜಗತ್ತಿನ ಎಲ್ಲ ರಾಷ್ಟ್ರಗಳ ಆಳುವ ವರ್ಗ ಬೌದ್ಧಿಕ ದಿವಾಳಿತನ ಹೊಂದಿರುವುದು ನಾಗರಿಕ ಸಮಾಜಕ್ಕೆ ಕಳಂಕವಾಗಿದೆ.

ಯುಕ್ರೇನ್-ರಷ್ಯಾ ಮಧ್ಯೆ ನಡೆಯುತ್ತಿರುವ ಯುದ್ಧ ಸಕಲ ಜೀವ ಸಂಕುಲಕ್ಕೆ ಕುತ್ತು ತರುವ ಹಾದಿಯಲ್ಲಿದೆ. ಮುಂದೊಂದು ದಿನ ಮೂರನೇ ಮಹಾ ಯುದ್ಧ ನಡೆದು, ಪರಮಾಣು ಅಸ್ತ್ರ ಬಳಕೆ ಆದಲ್ಲಿ ನಮ್ಮನ್ನೇ ನಾವು ನಾಶ ಮಾಡಿಕೊಳ್ಳುವುದರ ಜತೆಗೆ ಭೂಮಂಡಲದ ಻಻ಅವನತಿ ಖಚಿತ.

ಬುದ್ಧ, ಏಸು, ಪೈಗಂಬರ್, ಬಸವ, ಗಾಂಧಿ, ಻ಅಂಬೇಡ್ಕರ್ ಸೇರಿ ಅನೇಕ ಮಹನೀಯರ ಕುರಿತು ಗಂಟೆ ಗಟ್ಟಲೇ ಭಾಷಣ ಮಾಡುವ ಜಗತ್ತಿನ ಎಲ್ಲ ನಾಯಕರು, ಸ್ವಪ್ರತಿಷ್ಠೆ, ಆಂತರಿಕ ರಾಜಕೀಯ ಹಿತಾಸಕ್ತಿ ತೊರೆದು ದೇಶ, ಜಗತ್ತು ಒಳಿತಿಗೆ ನಿರ್ಧಾರ ಕೈಗೊಳ್ಳುವ ಒಳ್ಳೆ ಮನಸ್ಸು ಭಾರತೀಯರ ಪ್ರಕೃತಿಯ ಹಬ್ಬ ಯುಗಾದಿ ಕರುಣಿಸಲಿ ಎಂಬುದಷ್ಟೇ ನಮ್ಮ ಆಶಯ.

ಇನ್ನೂ ಶಾಲೆಯೊಂದರ ಮುಖ್ಯಶಿಕ್ಷಕರು ಬಗೆಹರಿಸಬಹುದಾಗಿದ್ದ ಹಿಜಾಬ್ ವಿವಾದ ನಾಡಿನಾದ್ಯಂತ ವಿವಾದ ಹುಟ್ಟುಹಾಕಿದೆ. ಸಹೋದರರ ರೀತಿ ಪರಸ್ಪರ ಜೀವನ ನಡೆಸಬೇಕಾಗಿದ್ದ ನಾವುಗಳು ಜಾತಿ-ಧರ್ಮ ಮುಂದಿಟ್ಟುಕೊಂಡು ಅಭಿವೃದ್ಧಿ ವಿಷಯವನ್ನೇ ಮರೆತಿರುವುದು ವಿಷಾದದ ಸಂಗತಿ.

ಬಲಗೈಯಲ್ಲಿ ಕೊಟ್ಟಿದ್ದು ಎಡಗೈಗೆ ಗೊತ್ತಾಬಾರದು ಎಂಬಂತೆ ಬದುಕು ನಡೆಸಿ, ಯಾರೊಬ್ಬರಿಗೂ ಸಣ್ಣ ಸುಳಿವು ಕೊಡದೇ ದಿಢೀರನೆ ಜಗತ್ತನ್ನು ಅಗಲಿದ ನಟ ಪುನೀತ್ ರಾಜಕುಮಾರ್ ಸಾವು ದೇಶವನ್ನೇ ದಿಗ್ಬ್ರಮೆಗೊಳಿಸಿದೆ.

ಕನ್ನಡಿಗರ ಕಣ್ಮಣಿ ಡಾ.ರಾಜಕುಮಾರ್ ಅವರನ್ನೇ ಮೀರಿಸುವ ರೀತಿ ಬದುಕು ನಡೆಸಿ, ಻಻ಅನೇಕ ಸಾಮಾಜಿಕ ಕಾರ್ಯಗಳನ್ನು ಮಾಡಿದ ಪುನೀತ್ ಸಾವು ಎಲ್ಲರನ್ನೂ ಶೋಕಸಮದ್ರದಲ್ಲಿ ಮುಳುಗಿಸಿದೆ.

ಒಳ್ಳೆಯತನ, ದೈಹಿಕ ದೃಢತೆ, ಮುಗ್ಧ ಮನಸ್ಸು, ಮತ್ತೊಬ್ಬರನ್ನು ಪ್ರೀತಿಸುವ ಗುಣ ಹೊಂದಿದ್ದು, ದ್ವೇಷದ ಪರಿಚಯವೇ ಇಲ್ಲದ ರೀತಿ ಜೀವಿಸಿದ ನಮ್ಮ ಪ್ರೀತಿ ಅಪ್ಪುವನ್ನು ಅದೇಗೆ ಸಾವು ಅಪ್ಪಿಕೊಂಡಿತು ಎಂಬುದಕ್ಕೆ ಉತ್ತರವೇ ಇಲ್ಲದಂತೆ ಆಗಿದೆ.

ಪುನೀತ್ ಸಾವು ಅಘಾತದ ಜೊತೆಗೆ ನಮ್ಮ ಬದುಕು ಕೂಡ ಻ಅವರಂತೆ ಇರಬೇಕೆಂಬ ದೊಡ್ಡ ಸಂದೇಶವನ್ನು ನಾಡಿಗೆ ನೀಡಿದೆ. ನಿಸ್ವಾರ್ಥ ಬದುಕು ಸತ್ತ ಬಳಿಕವೂ ನಮ್ಮನ್ನು ಜೀವಂತವಾಗಿಡುತ್ತದೆ ಎಂಬುದಕ್ಕೆ ಪುನೀತ್ ಸಾವು ನಮ್ಮ ಕಣ್ಣಮುಂದಿದೆ.

ಇನ್ನೂ ಈ ಯುಗಾದಿ ಆರಂಭದೊಂದಿಗೆ ರಾಜ್ಯದಲ್ಲಿ ಚುನಾವಣೆ ಜ್ವರ ಆರಂಭವಾಗಿದೆ. ವಿಧಾನಸಭೆ ಚುನಾವಣೆಗೆ ಒಂದು ವರ್ಷ ಇರುವಾಗಲೇ ರಾಜಕೀಯ ಪಕ್ಷಗಳು ಈಗಲೇ ಅಖಾಡಕ್ಕೆ ಇಳಿದಿವೆ. ವಿವಿಧ ರೀತಿ ತಂತ್ರ-ಪ್ರತಿತಂತ್ರ ಹೂಡುತ್ತೀವೆ. ಮತದಾರರಾದ ನಾವು ಜಾತಿ-ಧರ್ಮ, ಹಣ ರಹಿತ ಚಿಂತನೆ ಮೈಗೂಡಿಸಿಕೊಂಡು ಅಳೆದು-ತೂಗಿ ಉತ್ತಮರ ಆಯ್ಕೆ ಮಾಡುತ್ತೇವೆ ಎಂಬ ದೃಢ ನಿರ್ಧಾರ ಕೈಗೊಳ್ಳಬೇಕಿದೆ.

ಮಳೆ-ಚಳಿಯಲ್ಲೂ ಕರ್ತವ್ಯ ನಿರ್ವಹಿಸುವ ಮುದ್ರಣ ಮಾಧ್ಯಮದ ಬುನಾದಿಯೇ ಆಗಿರುವ ಪತ್ರಿಕಾ ವಿತರಕರ ಬದುಕು ಮೂರಾಬಟ್ಟೆ ಆಗಿದೆ. ಮುಂಜಾನೆ ಎದ್ದು ಪತ್ರಿಕೆ ಹಂಚುವ ವಿತರಕರ ಸ್ಥಿತಿ ಶೋಚನಿಯವಾಗಿದೆ. ಯಾವುದೇ ಸೌಲಭ್ಯಗಳು ಸಿಗದೆ ಇವರ ಬದುಕು ಅತಂತ್ರವಾಗಿರುವುದು ಆಳುವ ಸರ್ಕಾರಕ್ಕೆ ಗೌರವದ ಸೂಚಕವಲ್ಲ.

ಈಗಲಾದರೂ ಪತ್ರಿಕಾ ವಿತರಕರ ಕುರಿತು ಸರ್ಕಾರ ತಾಯಿ ಹೃದಯವಂತಿಕೆ ತೋರಬೇಕಿದೆ. ವಿವಾದಗಳಿಗೆ ತೆರೆ ಎಳೆದು ಅಭಿವೃದ್ಧಿ ಪರ ಚಿಂತನೆ ಮೈಗೂಡಿಸಿಕೊಳ್ಳಬೇಕಿದೆ. ಎಲ್ಲ ವರ್ಗದ ಜನರನ್ನು ಪ್ರೀತಿಸುವ ಻ವಿಶಾಲತೆ ನಮ್ಮ ನಾಯಕರು ಪ್ರದರ್ಶಿಸಬೇಕಿದೆ ಎಂಬುದು ನಮ್ಮ ಆಶಯ.

ಎಲ್ಲವನ್ನೂ ಹೇಳುವ ಮಾಧ್ಯಮದವರಾದ ನಮ್ಮ ಹೊಣೆಗಾರಿಕೆಯೂ ದೊಡ್ಡದು ಇದೆ. ಓದುಗರಿಗೆ ಕ್ಷಣ ಕ್ಷಣಕ್ಕೂ ಸುದ್ದಿಗಳನ್ನು ನೀಡುವ ಜವಾಬ್ದಾರಿ ನಮ್ಮದಾಗಿದೆ. ಈ ನಿಟ್ಟಿನಲ್ಲಿ ಕಾರ್ಯನಿರ್ವಹಿಸುತ್ತಿರುವ ಸುದ್ದಿಒನ್.ಕಾಂ. ವೆಬ್ ಸೈಟ್ (ಮೊ.ನಂ. 9336974702) ಗ್ರೂಪ್ ಗೆ ಓದುಗರು ಸೇರುವ ಮೂಲಕ ಮೊಬೈಲ್ ಲ್ಲಿಯೇ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆಯಬಹುದು.

ಪದೇ ಪದೆ ವಿಶೇಷ ಸಂಚಿಕೆ ಹೊರತರಲು ಪ್ರೋತ್ಸಾಹಿಸುತ್ತಿರುವ ಓದುಗ ದೊರೆಗಳು, ಸುದ್ದಿಒನ್.ಕಾಂ ಬಳಗದ ದೊಡ್ಡ ಶಕ್ತಿ ಆಗಿರುವ ಜಾಹೀರಾತುದಾರರಿಗೆ ಯುಗಾದಿ ಹಬ್ಬದ ಶುಭಾಷಯಗಳು ಕೋರುತ್ತಾ, ಈ ಶುಭಕೃತ್ ನಾಮ ಸಂವತ್ಸರವು ಎಲ್ಲರ ಬಾಳಲ್ಲಿ ಶುಭ ತರಲಿ ಎಂದು ಪ್ರಾರ್ಥಿಸುತ್ತೇನೆ.

ಇಂತಿ ನಿಮ್ಮವ

ಪಿ.ಎಲ್.ನಾಗೇಂದ್ರರೆಡ್ಡಿ
ಪ್ರಧಾನ ಸಂಪಾದಕ
ಸುದ್ದಿಒನ್.ಕಾಮ್

Facebook
Twitter
Telegram
WhatsApp
suddionenews

suddionenews

Leave a Comment

Top Stories

ಸಿಇಎನ್ ಪೊಲೀಸರ ದಾಳಿ : ಅಂತರ್ ರಾಜ್ಯ ಗಾಂಜಾ ಪೆಡ್ಲರ್ ಬಂಧನ

ಸುದ್ದಿಒನ್, ಚಿತ್ರದುರ್ಗ, ನವೆಂಬರ್. 22 : ಆಂದ್ರಪ್ರದೇಶದ ವಿಶಾಖಪಟ್ಟಣಂ ನಿಂದ ಗಾಂಜಾವನ್ನು ತಂದು ಚಿತ್ರದುರ್ಗ ನಗರಕ್ಕೆ ಬಂದು ಗಾಂಜಾ ಮಾರಾಟ ಮಾಡುತ್ತಿದ್ದ ಡ್ರಗ್ಸ್‌ ಪೆಡ್ಲರ್‌ನನ್ನು ಸಿಇಎನ್ ಠಾಣೆ ಪೊಲೀಸರು ಬಂಧಿಸಿದ್ದಾರೆ. ಬಿಹಾರದ ಹರಿ ಓಂಕುಮಾರ್(24

ಪೆಟ್ರೋಲ್ ಬಂಕಿನಲ್ಲಿ ವಂಚನೆ ಆರೋಪ : ಗ್ರಾಹಕರು ಹಾಗೂ ಸಿಬ್ಬಂದಿಗಳ ನಡುವೆ ಮಾತಿನ ಚಕಮಕಿ

  ವರದಿ ಮತ್ತು ಫೋಟೋ ಕೃಪೆ ಸುರೇಶ್ ಬೆಳಗೆರೆ ಮೊ : 97398 75729 ಸುದ್ದಿಒನ್, ಚಳ್ಳಕೆರೆ, ನವೆಂಬರ್. 22 : ಬೈಕ್ ಗಳಿಗೆ ಪೆಟ್ರೋಲ್ ಹಾಕುವ ವೇಳೆ ಗ್ರಾಹಕರಿಗೆ ಇಲ್ಲಿನ ಸಿಬ್ಬಂದಿ ವಂಚನೆ

ಅಕ್ರಮ ಕಸಾಯಿ ಖಾನೆ ಬಂದ್ ಮಾಡಿ : ದಾದಾ ಪೀರ್ ಆಗ್ರಹ : ವಿಡಿಯೋ ವೈರಲ್..!

ಸುದ್ದಿಒನ್, ಹಿರಿಯೂರು : ಅಕ್ರಮವಾಗಿ ಕಸಾಯಿ ಖಾನೆ ನಡೆಸುತ್ತಿರುವವರ ವಿರುದ್ಧ ದಾದಾ ಪೀರ್ ಎಂಬುವವರು ತಮ್ಮ ಆಕ್ರೋಶ ವ್ಯಕ್ತಪಡಿಸಿದ್ದಾರೆ. ದಾದಾ ಪೀರ್ 6ನೇ ವಾರ್ಡ್ ನಲ್ಲಿ ವಾಸಿಸುವವ ವ್ಯಕ್ತಿಯಾಗಿದ್ದಾರೆ. ಕಸಾಯಿ ಖಾನೆಯಿಂದ ಮಕ್ಕಳು ಅನಾರೋಗ್ಯಕ್ಕೆ

error: Content is protected !!