Warning: Undefined array key "options" in /home/nagendra/public_html/content/plugins/elementor-pro/modules/theme-builder/widgets/site-logo.php on line 124

ಯುಗಾದಿ ಕವಿತೆ : ಯುಗಾದಿ ಸಂಭ್ರಮ : ಸುಜಾತ ಪ್ರಾಣೇಶ್

Facebook
Twitter
Telegram
WhatsApp

 

ಚೈತ್ರನಾಗಮನವಾಗಿದೆ
ವಸಂತ ಋತು ಅಡಿಯಿಡುತಿದೆ
ಮಾಮರ ಮೆಲ್ಲನೆ ಪಲ್ಲವಿಸುತಿದೆ
ಕೋಗಿಲೆಯ ಕೂಜನ ಕೇಳುತಿದೆ ॥

ಮತ್ತೆ ಯುಗಾದಿ ಬಂದಿದೆ
ಹೊಸವರ್ಷದ ಸಂಭ್ರಮ ತಂದಿದೆ
ಪ್ಲವನಾಮಕ್ಕೆ ವಿದಾಯ ಹೇಳುತ್ತಾ
ಶುಭಕೃತು ಮೆಲ್ಲನೆ ಅಡಿಯಿಟ್ಟಿದೆ ॥

ಬೇವು ಬೆಲ್ಲವ ಆಸ್ವಾದಿಸುತ
ಸುಖ ದುಃಖಗಳ ಸಮಭಾವದಿ ಸ್ವೀಕರಿಸುತಾ
ಹೊಸ ವರ್ಷಕ್ಕೆ ಹೊಸ ಸಂಕಲ್ಪವ ಮಾಡುತಾ
ಸಂಭ್ರಮದಿ ಸಾಗಲಿ ನಮ್ಮ ಪಥ  ॥

ದ್ವೇಷ ಅಸೂಯೆಗಳ ಮರೆಯೋಣ
ಶಾಂತಿ ಸೌಹಾರ್ದದಿ ಬಾಳೋಣ
ವಿಶ್ವ ಮಾನವರಾಗೋಣ
ಮಾನವೀಯತೆಯ ಮೆರೆಯೋಣ ॥

ಭಾರತಾಂಬೆ ವಿಶ್ವಮಾತೆಯಾಗಲಿ
ಮನುಕುಲಕ್ಕೆ ಭಾರತ ಮಾದರಿಯಾಗಲಿ
ಉಗ್ರರ ಚೆಂಡಾಡುವ ಚಾಮುಂಡಿಯಾಗಲಿ
ಸರ್ವರಿಗೂ ಯುಗಾದಿ ಶುಭ ತರಲಿ ॥

ಸುಜಾತ ಪ್ರಾಣೇಶ್
ಚಿತ್ರದುರ್ಗ ; 99861 53163

Facebook
Twitter
Telegram
WhatsApp
suddionenews

suddionenews

Leave a Comment

Top Stories

ಸನಾತನ ಧರ್ಮದ ತತ್ವಜ್ಞಾನವನ್ನು ಜಗತ್ತಿಗೆ ಸಾರಿದ ಜಗದ್ಗುರು ಶಂಕರಾಚಾರ್ಯರರು : ಉಪವಿಭಾಗಾಧಿಕಾರಿ ಎಂ.ಕಾರ್ತಿಕ್ ಹೇಳಿಕೆ

  ಚಿತ್ರದುರ್ಗ.12: ಬುದ್ದ ಹಾಗೂ ಜೈನ ಧರ್ಮಗಳ‌ ಪ್ರಭಾವದಿಂದ ಸನಾತನ ಧರ್ಮವನ್ನು ಮೇಲೆತ್ತಿ, ಸನಾತನ ಧರ್ಮದ ಉನ್ನತ‌ ತತ್ವಜ್ಞಾನವನ್ನು ಜಗತ್ತಿಗೆ ಸಾರುವ ಕೆಲಸವನ್ನು ಆದಿಗುರು ಶಂಕರಾಚಾರ್ಯರು ಮಾಡಿದರು ಎಂದು ಉಪವಿಭಾಗಾಧಿಕಾರಿ ಎಂ.ಕಾರ್ತಿಕ್ ಹೇಳಿದರು. ನಗರದ

ಹಣ್ಣುಗಳ ರಾಜ ಮಾವಿನಹಣ್ಣನ್ನು ಹೀಗೆ ತಿನ್ನಿ….!

ಸುದ್ದಿಒನ್ : ಬೇಸಿಗೆಯಲ್ಲಿ ದೊರೆಯುವ ಮಾವಿನ ಹಣ್ಣುಗಳನ್ನು ಹಣ್ಣುಗಳ ರಾಜ ಎಂದು ಕರೆಯುತ್ತಾರೆ. ಇವುಗಳ ರುಚಿ ಚೆನ್ನಾಗಿರುತ್ತದೆ. ಅಷ್ಟೇ ಅಲ್ಲದೇ ಅವು ನಮ್ಮ ದೇಹಕ್ಕೆ ಅಗತ್ಯವಿರುವ ಪೋಷಕಾಂಶಗಳನ್ನು ಹೊಂದಿರುತ್ತವೆ. ಆಯುರ್ವೇದದ ಪ್ರಕಾರ ಮಾವಿನ ಹಣ್ಣಿನಲ್ಲಿ

ಈ ರಾಶಿಯವರಿಗೆ ವಯಸ್ಸು ಮೀರುತ್ತಿದೆ ಮದುವೆ ಬಗ್ಗೆ ಯೋಚನೆ ಮಾಡುವುದು ಉತ್ತಮ

ಈ ರಾಶಿಯವರಿಗೆ ವಯಸ್ಸು ಮೀರುತ್ತಿದೆ ಮದುವೆ ಬಗ್ಗೆ ಯೋಚನೆ ಮಾಡುವುದು ಉತ್ತಮ, ಈ ರಾಶಿಯವರಿಗೆ ವಂಶೋದ್ಧಾರ ಗಂಡು ಸಂತಾನದ ಚಿಂತೆ ಭಾನುವಾರ-ರಾಶಿ ಭವಿಷ್ಯ ಮೇ-12,2024 ಶಂಕರಾಚಾರ್ಯ ಜಯಂತಿ, ತಾಯಿ ದಿನ ಸೂರ್ಯೋದಯ: 05:49, ಸೂರ್ಯಾಸ್ತ

error: Content is protected !!