ವರದಿ ಮತ್ತು ಫೋಟೋ ಕೃಪೆ
ಸುರೇಶ್ ಪಟ್ಟಣ್,
ಮೊ : 98862 95817
ಸುದ್ದಿಒನ್, ಚಿತ್ರದುರ್ಗ (ಜು.27) : ಶೌಚಕ್ರಿಯೆ ಮಾಡುವಂತ ಖಾಸಗಿ ಜಾಗದಲ್ಲಿ ವಿಡಿಯೋ ಚಿತ್ರೀಕರಣ ಮಾಡುವಂತ ಹೇಯ ಕೃತ್ಯದಲ್ಲಿ ಭಾಗವಹಿಸಿದ ವಿದ್ಯಾರ್ಥಿಗಳ ವಿರುದ್ಧ ಪೊಲೀಸ್ ಇಲಾಖೆ ಯಾವುದೇ ಒತ್ತಡಕ್ಕೆ ಒಳಗಾಗದೆ ಸತ್ಯಾಸತ್ಯತೆಯನ್ನು ಪರಿಶೀಲಿಸಿ ಕ್ರಮ ತೆಗೆದುಕೊಂಡು ಇದರ ಹಿಂದಿರುವಂತ ಷಡ್ಯಂತ್ರವನ್ನು ಬಯಲಿಗೆಳೆಯಬೇಕು ಎಂದು ಆಗ್ರಹಿಸಿ ಬಿಜೆಪಿ ಮಹಿಳಾ ಮೋರ್ಚಾ ಇಂದು ನಗರದ ಜಿಲ್ಲಾಧಿಕಾರಿಗಳ ಕಚೇರಿ ಬಳಿ ಪ್ರತಿಭಟನೆಯನ್ನು ನಡೆಸಿತು.
ಈ ಬಗ್ಗೆ ಮಾತನಾಡಿದ ನಗರಾಭೀವೃದ್ದಿ ಪ್ರಾಧಿಕಾರದ ಮಾಜಿ ಸದಸ್ಯೆ ಮತ್ತು ಜಿಲ್ಲಾ ಕಾರ್ಯದರ್ಶಿ ಶ್ರೀಮತಿ ಎ. ರೇಖಾ ರಾಜ್ಯ ಸರ್ಕಾರ ಒಂದು ಜನಾಂಗದ ಪರವಾಗಿ ಕೆಲಸವನ್ನು ಮಾಡುತ್ತಿದೆ. ಅವರ ಓಲೈಕೆಯನ್ನು ಮಾಡುವ ಕೆಲಸಕ್ಕೆ ಮುಂದಾಗಿದೆ. ಅವರಿಂದಲೇ ನಾವು ಎನ್ನುವಂತಾಗಿದೆ. ಬೇರೆ ಜನಾಂಗದವರನ್ನು ಸರಿಯಾದ ರೀತಿಯಲ್ಲಿ ಕಾಣುತ್ತಿಲ್ಲ ಗ್ಯಾರೆಂಟಿ ಕಾರ್ಡನೊಂದಿಗೆ ಅಧಿಕಾರಕ್ಕೆ ಬಂದ ಕಾಂಗ್ರೆಸ್ ಸರಿಯಾದ ರೀತಿಯಲ್ಲಿ ಆಡಳಿತವನ್ನು ನಡೆಸುತ್ತಿಲ್ಲ ಇವರ ಆಧಿಕಾರದಲ್ಲಿ ಶಾಲೆಗೆ ವಿದ್ಯಾರ್ಥಿನಿಯರು ಹೋಗಲು ಹೆದರುತ್ತಿದ್ದಾರೆ, ಇಲ್ಲಿ ಅನ್ಯಾಯ ನಡೆಯುತ್ತಿದೆ ಅವರನ್ನು ಬಂಧಿಸಿ ಎಂದು ದೂರು ನೀಡಲು ಹೋದರೆ ಅವರನ್ನೇ ತೆಗಳುವ ಕೆಲಸವನ್ನು ಮಾಡಲಾಗುತ್ತಿದೆ ಎಂದು ದೂರಿದರು.
ಈಗಾಗಲೇ ರಾಜ್ಯಾದ್ಯಂತ ಸಾಮಾಜಿಕ ಜಾಲತಾಣಗಳಲ್ಲಿ ಉಡುಪಿಯ ನೇತ್ರ ಜ್ಯೋತಿ ಕಾಲೇಜಿನಲ್ಲಿ ಹಿಂದೂ ಯುವತಿಯರು ಶೌಚಾಲಯವನ್ನು ಬಳಸುವ ವೀಡಿಯೋವನ್ನು ಮುಸ್ಲಿಂ ಯುವತಿಯರು ತಮ್ಮ ಕೋಮಿನವರೊಂದಿಗೆ ಹಂಚಿಕೊಂಡು ಹಿಂದೂ ವಿದ್ಯಾರ್ಥಿನಿಯರನ್ನು ದಾರಿ ತಪ್ಪಿಸುವ ಕೆಲಸವನ್ನು ಮಾಡುತ್ತಿದ್ದಾರೆ. ಈಗಾಗಲೇ ಮಾಧ್ಯಮಗಳಲ್ಲಿ ಬಂದಂತೆ ತಮಾಷೆಗಾಗಿ ಶೌಚಾಲಯದಲ್ಲಿ ವಿಡಿಯೋ ಚಿತ್ರೀಕರಣ ಮಾಡಿದ್ದೇವೆ ಎಂಬುದು ತೀರ ಬಾಲಿಷ ಹಾಗೂ ಪ್ರಕರಣವನ್ನು ದಾರಿ ತಪ್ಪಿಸುವ ಹೇಳಿಕೆ ಶೌಚ ಕ್ರಿಯೆ ಮಾಡುವಂತ ಖಾಸಗಿ ಜಾಗದಲ್ಲಿ ವಿಡಿಯೋ ಚಿತ್ರೀಕರಣ ಮಾಡುವಂತ ಹೇಯ ಕೃತ್ಯದಲ್ಲಿ ಭಾಗವಹಿಸಿದ ವಿದ್ಯಾರ್ಥಿಗಳ ವಿರುದ್ಧ ಪೊಲೀಸ್ ಇಲಾಖೆ ಯಾವುದೇ ಒತ್ತಡಕ್ಕೆ ಒಳಗಾಗದೆ ಸತ್ಯಾಸತ್ಯತೆಯನ್ನು ಪರಿಶೀಲಿಸಿ ಕ್ರಮ ತೆಗೆದುಕೊಂಡು ಇದರ ಹಿಂದಿರುವಂತ ಷಡ್ಯಂತ್ರವನ್ನು ಬಯಲಿಗೆಳೆಯಬೇಕು ಎಂದು ಒತ್ತಾಯಿಸಿದ್ದಾರೆ.
ಈ ಪ್ರಕರಣವನ್ನು ಎಲ್ಲಾ ಮಹಿಳೆಯರು ಖಂಡಿಸಬೇಕಿದೆ ಈ ರೀತಿಐಆದ ಪ್ರಕರಣ ಬೇರೆ ಕಡೆಯಲ್ಲಿ ನಡೆಯುವುದಕ್ಕೆ ಬಿಡಬಾರದು ಇದರ ಬಗ್ಗೆ ಸರ್ಕಾರದಲ್ಲಿ ವಿಚಾರ ಮಾಡಿದರೆ ಉಡಾಫೆ ಉತ್ತರವನ್ನು ನೀಡಲಾಗುತ್ತಿದೆ. ಈ ಕುರಿತು ಜಿಲ್ಲಾಡಳಿತ ಸೂಕ್ತ ರೀತಿಯ ತನಿಖೆಯನ್ನು ನಡೆಸಿ ತಪ್ಪಿತಸ್ಥರ ಮೇಲೆ ಕಾನೂನಾತ್ಮಕ ಕಠಿಣ ಕ್ರಮವನ್ನು ತೆಗೆದುಕೊಳ್ಳಬೇಕೆಂದು ಆಗ್ರಹಿಸಲಾಯಿತು.
ಈ ಪ್ರತಿಭಟನೆಯಲ್ಲಿ ಜಿಲ್ಲಾ ಮಹಿಳಾ ಮೋರ್ಚಾದ ಪ್ರಧಾನ ಕಾರ್ಯದರ್ಶಿ ಶಾಂತಮ್ಮ ಜಗದಾಂಬ, ಎಸ್.ಸಿ ರಾಜ್ಯ ಕಾರ್ಯಕಾರಿಣಿ ಸದಸ್ಯೆ ಭಾರ್ಗವಿ, ನಗರ ಮತ್ತು ಗ್ರಾಮಾಂತರ ಜಿಲ್ಲಾ ಮಂಡಲ ಅದ್ಯಕ್ಷ ವೀಣಾ, ಶೀಲ, ರೈತ ಮೋರ್ಚಾ ಕಾರ್ಯದರ್ಶಿಗಳಾದ ಕಾಂಚನ, ವೀಣಾ ಮಂಡಲ ಅಧ್ಯಕ್ಷರಾದ ಲಕ್ಷ್ಮೀ ಸಿದ್ದಮ್ಮ, ತಾಹಿರಾ ಬಾನು ವನಜ ಮಂಜುಳ ಭಾಗವಹಿಸಿದ್ದರು.