ಮಂಗಳೂರು: ಕಾಲೇಜಿನ ಶೌಚಾಲಯದಲ್ಲಿ ಕ್ಯಾಮಾರಾ ಇಟ್ಟು ವಿಡಿಯೋ ಶೂಟ್ ಮಾಡಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ನಳೀನ್ ಕುಮಾರ್ ಕಟೀಲು ಗಂಭೀರ ಆರೋಪ ಮಾಡಿದ್ದಾರೆ. ಇದು ಒಂದು ದಿನ ನಡೆದ ಘಟನೆಯಲ್ಲ, ಅಲ್ಲಿಯ ವಿದ್ಯಾರ್ಥಿಗಳು ಹೇಳುವಂತೆ ಆರೇಳು ಬಾರಿ ನಡೆದಿದೆ ಎನ್ನಲಾಗಿದೆ.
ಬಿಜೆಪಿ ನಾಯಕರು ಇಂದು ಉಡುಪಿಯಲ್ಲಿ ಪ್ರತಿಭಟನೆ ನಡೆಸಿದ್ದಾರೆ. ಉಡುಪಿ ಘಟನೆಯನ್ನು ಸರ್ಕಾರ ಸರಳವಾಗಿ ತೆಗೆದುಕೊಂಡಿದೆ. ಅಂದ್ರೆ ಸಂಪೂರ್ಣವಾಗಿ ಮುಚ್ಚಿ ಹಾಕಲು ಕಾಂಗ್ರೆಸ್ ಸರ್ಕಾರ ಯತ್ನಿಸುತ್ತಿದೆ. ಈ ಘಟನೆಯ ಬಗ್ಗೆ ಸಂಪೂರ್ಣ ತನಿಖೆಯಾಗಬೇಕಿದೆ.
ಈ ಘಟನೆಯನ್ನು ಪೊಲೀಸ್ ಇಲಾಖೆ ಮುಚ್ಚಿ ಹಾಕುವ ಯತ್ನ ನಡೆಸುತ್ತಿದೆ. ದಿ ಕೇರಳ ಸ್ಟೋರಿ ಸಿನಿಮಾದಲ್ಲಿ ನಡೆದ ಘಟನೆಗಳು ಉಡುಪಿಯಲ್ಲೂ ನಡೆದಿವೆ. ಈ ಘಟನೆ ಕೇವಲ ಮೂರು ವಿದ್ಯಾರ್ಥಿಗಳಿಂದ ನಡೆದಿರುವುದಲ್ಲ. ಇದರ ಹಿಂದೆ ಕೇರಳದ ಶಕ್ತಿಗಳಿವೆ. ಸಿಎಂ ಸಿದ್ದರಾಮಯ್ಯ ಇದನ್ನು ಗಂಭೀರವಾಗಿ ಪರಿಗಣಿಸಬೇಕು ಎಂದಿದ್ದಾರೆ.