ಬೆಂಗಳೂರು: ತುಮಕೂರು ಜಿಲ್ಲೆಯ ಪಾವಗಡದ ಪಳವಳ್ಳಿ ಕಟ್ಟೆ ಬಳಿ ಬಸ್ ದುರಂತ ಪ್ರಕರಣವನ್ನ ವಿಧಾನಸಭೆಯಲ್ಲಿ ಕಾಂಗ್ರೆಸ್ ನ ಯು ಟಿ ಖಾದರ್ ಪ್ರಸ್ತಾಪ ಮಾಡಿದ್ದಾರೆ.
ಬಸ್ಸಿನ ಟಾಪ್ ನಲ್ಲಿ ಕುಳಿತು ಪ್ರಯಾಣಿಸುವಂತ ಸ್ಥಿತಿ ಬಂದಿದ್ದೇಕೆ..? ಸರ್ಕಾರಿ ಬಸ್ ಗಳ ಸಂಚಾರ ಕಡಿಮೆಯಾಗಿದ್ದೇ ಈ ದುರಂತಕ್ಕೆ ಕಾರಣವಾಗಿದೆ. ವ್ಯವಸ್ಥೆ ಸರಿಪಡಿಸುವ ಜವಬ್ದಾರಿ ಸರ್ಕಾರದ ಮೇಲಿದೆ. ಸಮಿತಿ ರಚನೆ ಮಾಡಿ ಸರ್ಕಾರದ ವರದಿ ಪಡೆಯಬೇಕಿದೆ. ಅಪಘಾತದಲ್ಲಿ ಮೃತರಾದವರ ಪರಿಹಾರ ಹೆಚ್ಚಿಸಬೇಕೆಂದು ಯು ಟಿ ಖಾದರ್ ಒತ್ತಾಯಿಸಿದ್ದಾರೆ.
ಸಮಸ್ಯೆ ಬಗೆಹರಿಸಬೇಕಿರುವ ಸಿಎಂ ಬೊಮ್ಮಾಯಿ ಅವರು, ಸಿನಿಮಾ ಟ್ರೇಲರ್ ರಿಲೀಸ್ ಗೆ ಹೋಗಿದ್ದಾರೆಂದು ಯು ಟಿ ಖಾದರ್ ವ್ಯಂಗ್ಯವಾಡಿದ್ದಾರೆ.
ಇದಕ್ಕೆ ಸಾರಿಗೆ ಸಚಿವ ಶ್ರೀರಾಮುಲು ಉತ್ತರ ಕೊಟ್ಟಿದ್ದು, ಉನ್ನತಮಟ್ಟದ ಅಧಿಕಾರಿಗಳನ್ನು ಘಟನಾ ಸ್ಥಳಕ್ಕೆ ಕಳುಹಿಸಿದ್ದೆ. ಅಪಘಾತ ಆಗಿರುವಂತ ಸ್ಥಳವನ್ನು ಬ್ಲಾಕ್ ಸ್ಪಾಟ್ ಎಂದು ಪರಿಗಣಿಸಲಾಗಿದೆ. ಅಪಘಾತಕ್ಕೆ ಕಾರಣ ಯಾರು ಎಂಬುದನ್ನು ಚರ್ಚೆ ಮಾಡಲಾಗಿದೆ. ಮೃತರ ಕುಟುಂಬಕ್ಕೆ ಸರ್ಕಾರದಿಂದ 5 ಲಕ್ಷ ಪರಿಹಾರವನ್ನು ನೀಡಲಾಗಿದೆ. ಅಷ್ಟೇ ಅಲ್ಲ ವೈಯಕ್ತಿಕವಾಗಿ ನಾನೂ ಕೂಡ 1 ಲಕ್ಷ ಸಹಾಯ ಮಾಡಿದ್ದೇನೆ. ಗಾಯಗೊಂಡವರಿಗೆ 50 ಸಾವಿರ ಪರಿಹಾರ ನೀಡಲಾಗಿದೆ. ಅಧಿಕಾರಿಗಳಿಗೆ ಸರ್ಕಾರಿ ಬಸ್ ಬಿಡುವಂತೆ ಸೂಚನೆ ನೀಡಲಾಗಿದೆ ಎಂದಿದ್ಸಾರೆ.