ಟ್ರಿನಿಡಾಡ್ : ಅಂಡರ್-19 ವಿಶ್ವಕಪ್ನಲ್ಲಿ ಆಡುತ್ತಿರುವ ಭಾರತ ಯುವ ತಂಡದಲ್ಲಿ ಕರೋನಾ ಆತಂಕ ಮೂಡಿಸಿದೆ. ನಾಯಕ ಯಶ್ ಧುಲ್ ಮತ್ತು ಉಪನಾಯಕ ಶೇಖ್ ರಶೀದ್ ಸೇರಿದಂತೆ ಒಟ್ಟು ಆರು ಭಾರತೀಯ ಕ್ರಿಕೆಟಿಗರಿಗೆ ಕರೋನವೈರಸ್ ಇರುವುದು ದೃಢಪಟ್ಟಿದೆ.
ಇದರಿಂದಾಗಿ ಇವರೆಲ್ಲರೂ ಇಂದು ಐರ್ಲೆಂಡ್ ವಿರುದ್ಧದ ಪಂದ್ಯದಿಂದ ಹೊರಗುಳಿದಿದ್ದಾರೆ ಎಂದು ವರದಿಯಾಗಿದೆ. ನಾಯಕ ಯಶ್ ಧುಲ್ ಅನುಪಸ್ಥಿತಿಯಲ್ಲಿ ಐರ್ಲೆಂಡ್ ವಿರುದ್ಧದ ಪಂದ್ಯಕ್ಕೆ ನಿಶಾಂತ್ ಸಂಧು ನಾಯಕತ್ವ ವಹಿಸಲಿದ್ದಾರೆ.
ಇದೇ ವೇಳೆ ಟಾಸ್ ಗೆದ್ದು ಮೊದಲು ಬ್ಯಾಟ್ ಮಾಡಿದ ಯುವ ಭಾರತ 40 ಓವರ್ ಗಳಲ್ಲಿ 2 ವಿಕೆಟ್ ನಷ್ಟಕ್ಕೆ 221 ರನ್ ಗಳಿಸಿತು. ಆರಂಭಿಕ ಆಟಗಾರರಾದ ರಘುವಂಶಿ (79) ಮತ್ತು ಹರ್ನೂರ್ ಸಿಂಗ್ (88) ಉತ್ತಮ ಆರಂಭ ನೀಡಿದರೆ, ರಾಜ್ ಭಜ್ವಾ (ಅಜೇಯ 23) ಮತ್ತು ನಿಶಾಂತ್ ಸಂಧು (ಅಜೇಯ 20) ಉತ್ತಮ ಆಟ ಪ್ರದರ್ಶಿಸಿದರು.