ಅರುಣಾಚಲಪ್ರದೇಶ: ಉತ್ತರಾಖಂಡದ ಏಳನೇ ಗರ್ವಾಲ್ ರೆಫಲ್ಸ್ ಸೈನಿಕರಾಗಿದ್ದ ಹರೇಂದ್ರ ನೇಗಿ ಮತ್ತು ಪ್ರಕಾಶ್ ಸಿಂಗ್ ರಾಣಾ ಮೇ 28 ರಂದು ನಾಪಾತ್ತೆಯಾಗಿದ್ದಾರೆ. ಆದರೆ ಕಾರ್ಯಾಚರಣೆಯ ನಡುವೆಯೂ ಇಬ್ಬರು ಸೈನಿಕರು ಪತ್ತೆಯಾಗಿಲ್ಲ. ತೀವ್ರ ಶೋಧ ಕಾರ್ಯ ನಡೆಯುತ್ತಿದ್ದು, ಇನ್ನು ಕೂಡ ಪತ್ತೆಯಾಗಿಲ್ಲ.
ಈ ಇಬ್ಬರು ಸೈನಿಕರು ಅರುಣಾಚಲ ಪ್ರದೇಶದ ಅಂಜಾವ್ ಜಿಲ್ಲೆಯ ಮುಂಚೂಣಿ ಪ್ರದೇಶದಕ್ಕೆ ನಿಯೋಜನೆ ಮಾಡಲಾಗಿತ್ತು. ಆದರೆ ಇದೀಗ ನಾಪತ್ತೆಯಾಗಿ ಕೆಲ ದಿನಗಳೇ ಕಳೆಯುತ್ತಿದೆ. ಇಬ್ಬರು ಸೈನಿಕರು ಪೋಸ್ಟ್ ಗೆ ಹತ್ತಿರವಾಗಿ ಹರಿಯುತ್ತಿದ್ದ ನದಿಗೆ ಬಿದ್ದಿದ್ದರು ಎನ್ನಲಾಗಿದೆ. ವಿಷಯ ತಿಳಿದ ಕೂಡಲೆ ಅಧಿಕಾರಿಗಳು ಶೋಧ ಕಾರ್ಯ ಮುಂದುವರೆಸಿದ್ದಾರೆ. ಇಷ್ಟು ದಿನವಾದರೂ, ಎಷ್ಟೇ ತೀವ್ರಗತಿಯಲ್ಲಿ ಹುಡುಕಿದರು ಸೈನಿಕರು ಮಾತ್ರ ಸಿಗುತ್ತಿಲ್ಲ.
ಈ ವಿಚಾರವಾಗಿ ಸೈನಿಕ ಹರೇಂದ್ರ ನೇಗಿ ಅವರ ಪತ್ನಿ ಮಾತನಾಡಿದ್ದು, ನದಿಯ ಬಳಿ ಅವರು ಹೋಗಿದ್ದಾರೆಂಬುದನ್ನು ಯಾರು ನೋಡಿಲ್ಲ. ಇದನ್ನು ನಂಬುವುದಕ್ಕೆ ಹೇಗೆ ಸಾಧ್ಯ. ನನಗಂತು ನಂಬಲು ಕಷ್ಟಸಾಧ್ಯ ಎಂದು ಆತಂಕ ವ್ಯಕ್ತಪಡಿಸಿದ್ದಾರೆ. ಸದ್ಯ ಹುಡುಕಾಟದ ತೀವ್ರತೆಯನ್ನು ಕಳೆದ ಎರಡು ದಿನದಿಂದ ಹೆಚ್ಚು ಮಾಡಿದ್ದಾರೆ.