ಶಿವಮೊಗ್ಗ: ಹೊಸ ವರುಷ.. ಹೊಸ ಹರುಷ ತರಲೆಂದು ಎಲ್ಲರೂ ಈ ವರ್ಷವನ್ನು ಬಹಳ ಸಂತಸದಿಂದ ಬರಮಾಡಿಕೊಂಡಿದ್ದಾರೆ. ಕಳೆದ ಎರಡು ವರ್ಷದಿಂದ ಕೊರೊನಾ ಭಯದಿಂದ ಯಾರು ಕೀಡ ಸರಿಯಾಗಿ ನ್ಯೂ ಇಯರ್ ಸೆಲೆಬ್ರೇಷನ್ ಮಾಡಲು ಆಗಿರಲಿಲ್ಲ. ಹೀಗಾಗಿ ಈ ವರ್ಷ ಎಲ್ಲರೂ ಪಾರ್ಟಿ ಮಾಡುವ ಮೂಲಕ ನ್ಯೂ ಇಯರ್ ವೆಲ್ ಕಂ ಮಾಡಿದ್ದಾರೆ. ಇದೇ ಎಂಜಾಯ್ಮೆಂಟ್ ಮೂಡ್ ಇಬ್ಬರ ಸಾವಿಗೆ ಕಾರಣವಾಗಿದೆ.
ಶಿವಮೊಗ್ಗದ ಸಹ್ಯಾದ್ರಿ ಕಾಲೇಜಿನ ಗ್ಲಾಸ್ ಹೌಸ್ ಬಳಿ ಪಾರ್ಟಿ ಮಾಡಲು ಹೋದ ಇಬ್ಬರು ಬಲಿಯಾಗಿದ್ದಾರೆ. 36 ವರ್ಷದ ವಿನಯ್ ಪಿಡ್ಲ್ಯೂಡಿ ಕ್ವಾರ್ಟಸ್ ನಲ್ಲಿ ವಾಸವಾಗಿದ್ದರು. ದಾವಣಗೆರೆ ವಿವಿಯಲ್ಲಿ ಕನ್ನಡ ಪಿಎಚ್ಡಿ ಕೂಡ ಮಾಡುತ್ತಿದ್ದರು. ಮಂಜುನಾತ್ ಓಲೇಕಾರ್ ಎಂಬುವವರ ಮನೆಗೆ ಹೊಸ ವರ್ಷಾಚರಣೆಗೆಂದು ಹೋಗಿದ್ದರು.
ಈ ವೇಳೆ ಮಂಜುನಾಥ್ ಸರಿಯಾಗಿ 12 ಗಂಟೆಗೆ ನ್ಯೂ ಇಯರ್ ಬರಮಾಡಿಕೊಳ್ಳಲು ತಮ್ಮ ಬಳಿ ಇದ್ದ ಗನ್ ನಿಂದ ಗುಂಡು ಹಾರಿಸಿದ್ದಾರೆ. ಆದರೆ ಆ ಗುಂಡು ನೇರವಾಗಿ ವಿನಯ್ ಹೊಟ್ಟೆಗೆ ತಾಗಿದೆ. ತಕ್ಷಣ ಅವರನ್ನು ಆಸ್ಪತ್ರೆಗೆ ಸಾಗಿಸಿತ್ತಾದರೂ, ಬದುಕುಳಿದಿಲ್ಲ. ಅದೇ ಭಯದಲ್ಲಿ ಮಂಜುನಾಥ್ ಗೆ ಹೃದಯಾಘಾತವಾಗಿದೆ. ಮಂಜುನಾಥ್ ಕೂಡ ಹೊಸ ವರ್ಷದ ದಿನವೇ ಸಾವನ್ನಪ್ಪಿದ್ದಾರೆ.