ನನ್ನ ಸರ್ಕಾರ ಬಿದ್ದ ಎರಡೇ ತಿಂಗಳಿಗೆ ಉತ್ತರ ಕರ್ನಾಟಕದಲ್ಲಿ ಪ್ರವಾಹ ಬಂತು : ಕುಮಾರಸ್ವಾಮಿ

suddionenews
1 Min Read

ರಾಮನಗರ: ಜೆಡಿಎಸ್ ಮಹತ್ವಕಾಂಕ್ಷೆಯ ಯೋಜನೆ ಜಲ್ದಾರೆಗೆ ಇಂದು ರಾಮನಗರದಲ್ಲಿ ಚಾಲನೆ ಸಿಕ್ಕಿದೆ. ಈ ವೇಳೆ ಮಾತನಾಡಿದ ಕುಮಾರಸ್ವಾಮಿ ಅವರು, ಸಿಎಂ ಇಬ್ರಾಹಿಂ ಅವರು ಮರಳಿ ಮನೆಗೆ ಬಂದಿದ್ದಾರೆ. ಈ ಕಾರ್ಯಕ್ರಮವನ್ನು ಮೂರ್ನಾಲ್ಕು ತಿಂಗಳ ಮುಂಚೆಯೇ ಪ್ರಾರಂಭ ಮಾಡಬೇಕು ಎಂಬುದಿತ್ತು. ಕಳೆದ ಬಾರಿ ರಚನೆ ಮಾಡಿದ್ದ ಮೈತ್ರಿ ಸರ್ಕಾರ ಅದರಿಂದ ಕನಕಪುರ ಜನತೆಗೆ ನೋವು ಕೊಟ್ಟಿದ್ದೇನೆ. ಆ ಕಾರಣಕ್ಕೆ ಸಾರ್ವಜನಿಕವಾಗಿ ಕ್ಷಮೆ ಕೇಳುತ್ತೇನೆ. ಅವತ್ತು ಅನಿವಾರ್ಯ ಪರಿಸ್ಥಿತಿಯಿಂದ ಮೈತ್ರಿ ಸರ್ಕಾರ ರಚಿಸಿದೆ.

ನಿಮ್ಮ ಮರಿ ಮಕ್ಕಳು ಹುಟ್ಟಿದರು ನೀರು ಸಿಗುವುದಿಲ್ಲ. ಇವತ್ತು ಎರಡು ರಾಷ್ಟ್ರೀಯ ಪಕ್ಷಗಳು ಹೋಗುತ್ತಿರುವ ದಾರಿ ನೋಡಿದ್ರೆ ಯಾವ ನೀರಾವರಿ ಯೋಜನೆಯೂ ಪೂರ್ಣವಾಗುವಂತೆ ಕಾಣುತ್ತಿಲ್ಲ. ಕಾಂಗ್ರೆಸ್ ನವರು ಮೇಕೆದಾಟುಗಾಗಿ ಪಾದಯಾತ್ರೆ ಮಾಡಿದ್ರು. ಕಾಂಗ್ರೆಸ್ ನಡೆ ಕೃಷ್ಣೆ ಕಡೆಗೆ ಅಂತ ಕಳೆದ ಬಾರಿ ಶುರು ಮಾಡಿದ್ದರು. ನಾನು ಹೇಳಿದ್ದೆ ನಿಮ್ಮ ನಡಿಗೆ ಕೃಷ್ಣೆ ಕಡೆಗೆ ಅಲ್ಲ ಆಂಧ್ರ ಕಡೆಗೆ ಎಂದು. ಇವತ್ತಿನ ಮೇಕೆದಾಟು ಹಣೆಬರಹೂ ಅಷ್ಟೇ. ಸರಿಯಾದ ರೀತಿ ಮಾಡದೆ ಹೋದರೆ ಮೇಕೆದಾಟು ಯಾತ್ರೆ ತಮಿಳುನಾಡಿನ ಕಡೆಗೆ ಆಗುತ್ತೆ.

ಐದು ವರ್ಷದಲ್ಲಿ ಈ ನೀರಾವರಿ ಯೋಜನೆಯನ್ನು ಸಂಪೂರ್ಣಗೊಳಿಸದೆ ಇದ್ದರೆ ಈ ಪಕ್ಷವನ್ನು ವಿಸರ್ಜನೆ ಮಾಡುತ್ತೇನೆಂದು ಈಗಾಗಲೇ ಸವಾಲು ಸ್ವೀಕರಿಸಿದ್ದೇನೆ. ಕಳೆದ ಮೂರು ವರ್ಷದಿಂದ ಮೌನವಿದ್ದೆ. ನನ್ನ ಮೈತ್ರಿ ಸರ್ಕಾರವನ್ನು ತೆಗೆದರು ಅಂತೇಳಿ ಬಿಜೆಪಿ ವಿರುದ್ಧ ಹೋರಾಟ ಮಾಡಲು ಹೋಗಲಿಲ್ಲ. ಅದ್ಯಾವ ಒಳ್ಳೆ ಕೆಲಸ ಮಾಡಲಿ ಅಂತ ಸುಮ್ಮನೆ ಇದ್ದೆ. ನನ್ನ ಸರ್ಕಾರ ಬಿದ್ದ. ಎರಡೇ ತಿಂಗಳಲ್ಲಿ ಉತ್ತರ ಕರ್ನಾಟಕದಲ್ಲಿ ಪ್ರವಾಹ ಉಂಟಾಗಿತ್ತು. ಮನೆಗಳೆಲ್ಲ ಬಿದ್ದು, ರಸ್ತೆಯಲ್ಲಿದ್ದಾರೆ ಇನ್ನು. ಒಂದು ಲಕ್ಷ ಕೊಡ್ತೀನಿ ಅಂದಿದ್ದರು, ಐದು ಲಕ್ಷ ಕೊಟ್ಟು ಮನೆ ಕಟ್ಟಿಕೊಡ್ತೀವಿ ಅಂದಿದ್ರು. ಕೊಟ್ಟ ಹಣವನ್ನು ಕಿತ್ತುಕೊಂಡಿದ್ದಾರೆ ಎಂಬ ವಿಚಾರ ಕೇಳ್ಪಟ್ಟೆ. ಇದು ಬಿಜೆಪಿ ಸರ್ಕಾರವೆಂದು ಹರಿಹಾಯ್ದಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *