ತುಮಕೂರಿನಲ್ಲಿ ತಾಯಿಯನ್ನ ಕೊಂದ ಕಥೆಗೆ ಟ್ವಿಸ್ಟ್ : ಜ್ಯೋತಿಷಿ ಮಾತಲ್ಲ ಆಸ್ತಿಗಾಗಿ ಈ ಕೊಲೆ..!

1 Min Read

ತುಮಕೂರು: ಕ್ಯಾತ್ಸಂದ್ರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ದಾಖಲಾಗಿರುವ ತಾಯಿಯೊಬ್ಬರ ಕೊಲೆ ಕೇಸ್ ಗೆ ಬಿಗ್ ಟ್ವಿಸ್ಟ್ ಸಿಕ್ಕಿದೆ. ಆನ್ಲೈನ್ ಜ್ಯೋತಿಷಿ ಮಾತು ನಂಬಿಕೊಂಡು ಈ ಕೊಲೆ ಮಾಡಲಾಗಿದೆ ಎನ್ನಲಾಗಿತ್ತು. ಆದರೆ ಆ ಕೇಸ್ ಗೆ ಬಿಗ್ ಟ್ವಿಸ್ಟ್ ಸಿಕ್ಕಿದ್ದು, ಜ್ಯೋತಿಷಿ ಮಾತು ನಂಬಿ ಕೊಲೆ ಮಾಡಿದ್ದಲ್ಲ, ಹಣ ಆಸ್ತಿಗಾಗಿ ಮಾಡಿರೋದು ಎಂಬ ಸತ್ಯ ಬೆಳಕಿಗೆ ಬಂದಿದೆ.

ಆಸ್ತಿ ಮತ್ತು ಹಣಕ್ಕಾಗಿ ಮಗಳು ಸುಚಿತ್ರ ತನ್ನ ಹೆತ್ತ ತಾಯಿ ಪುಷ್ಪಾವತಿ ಅವರನ್ನೇ ಹತ್ಯೆ ಮಾಡಿದ್ದಾಳೆ ಎಂಬುದು ಈಗ ತನಿಖೆ ವೇಳೆ ಬೆಳಕಿಗೆ ಬಂದಿದೆ. ಯಾಕಂದ್ರೆ ಆಕೆಯ ತಾಯಿ ಬಳಿ ಸೈಟ್ ಮಾರಿದ್ದಂತ 40 ಲಕ್ಷ ಹಣ ಇತ್ತು. ಜೊತೆಗೆ ಮನೆಯೂ ಇತ್ತು. ಈ ಹಣವನ್ನು ತನಗೆ ನೀಡುವಂತೆ ಸುಚಿತ್ರಾ ತನ್ನ ತಾಯಿ ಬಳಿ ಕೇಳಿದ್ದಳು. ಮದುವೆಯಾಗಿದ್ದರು ಸಹ ತಾಯಿ ಮನೆಯಲ್ಲಿಯೇ ವಾಸವಿದ್ದಳು. ತಾಯಿ ಕೂಡ ಹಣವನ್ನ ನೀಡಿರಲಿಲ್ಲ.

ಮೃತ ಪುಷ್ಪಾವತಿಯ ಗಂಡ ಕೂಡ ಇತ್ತೀಚೆಗೆ ತೀರಿಕೊಂಡಿದ್ದರು. ಮಗಳ ಟಾರ್ಚರ್ ಅನ್ನ ತಮ್ಮನ ಬಳಿ ಪುಷ್ಪಾವತಿ ಹೇಳಿಕೊಂಡಿದ್ದಳು. ನಿನ್ನೆ ಬೆಳಗ್ಗೆ ನೋಡಿದ್ರೆ ಹಾರ್ಟ್ ಅಟ್ಯಾಕ್ ನಿಂದ ಅಮ್ಮ ಸತ್ತಿದ್ದಾಳೆ ಎಂದು ಸುಚಿತ್ರಾ‌ ಎಲ್ಲರಿಗೂ ಫೋನ್ ಮಾಡಿ ಹೇಳಿದ್ದಳು. ಆದರೆ ಅನುಮಾನವಿದ್ದ ಮಾವ, ಕ್ಯಾತ್ಸಂದ್ರ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಪೊಲೀಸರು ತನಿಖೆ ನಡೆಸಿದಾಗಲೇ ಗೊತ್ತಾಗಿದ್ದು, ಹಣ, ಆಸ್ತಿಗಾಗಿ ಹೆತ್ತ ತಾಯಿಯನ್ನೇ ಉಸಿರುಗಟ್ಟಿಸಿ ಸಾಯಿಸಿದ್ದಾಳೆ. ಸದ್ಯ ಪೊಲೀಸರ ಅತಿಥಿಯಾಗಿರುವ ಸುಚಿತ್ರಾ, ಹಣಕ್ಕಾಗಿ ಮಾಡಿದ ಕರ್ಮಫಲವನ್ನ ಜೈಲಲ್ಲಿ ಉಣ್ಣುವಂತಾಗಿದೆ.

Share This Article
Enable Notifications OK No thanks