Notice: Undefined index: options in /home/nagendra/public_html/content/plugins/elementor-pro/modules/theme-builder/widgets/site-logo.php on line 124

ಅಂಗವಿಕಲರಿಗೆ ಇಪ್ಪತ್ತು ಲಕ್ಷ ಮೀಸಲು : ಶಾಸಕ ಕೆ.ಸಿ.ವೀರೇಂದ್ರಪಪ್ಪಿ

Facebook
Twitter
Telegram
WhatsApp

 

ವರದಿ ಮತ್ತು ಫೋಟೋ ಕೃಪೆ
ಕೆ.ಎಂ.ಮುತ್ತುಸ್ವಾಮಿ ಕಣ್ಣನ್,
ಮೊ : 78998 64552

ಸುದ್ದಿಒನ್, ಚಿತ್ರದುರ್ಗ, ಡಿಸೆಂಬರ್. 24 : ಅಂಗವಿಕಲರಿಗೆ ಪ್ರತಿ ವರ್ಷವೂ ನನ್ನ ಅನುದಾನದಲ್ಲಿ ಇಪ್ಪತ್ತು ಲಕ್ಷ ರೂ.ಗಳನ್ನು ಈ ಕ್ಷಣದಿಂದಲೆ ಮೀಸಲಿಡುತ್ತೇನೆಂದು ಶಾಸಕ ಕೆ.ಸಿ.ವೀರೇಂದ್ರಪಪ್ಪಿ ವಾಗ್ದಾನ ಮಾಡಿದರು.

ಜಿಲ್ಲಾ ಅಂಗವಿಕಲರ ಕ್ಷೇಮಾಭ್ಯುದಯ ಸಂಘ, ಎಂ.ಆರ್.ಡಬ್ಯ್ಲೂ, ಯು.ಆರ್.ಡಬ್ಯು, ವಿ.ಆರ್.ಡಬ್ಯು. ವತಿಯಿಂದ ಐ.ಎಂ.ಎ.ಹಾಲ್‍ನಲ್ಲಿ ಮಂಗಳವಾರ ಹಮ್ಮಿಕೊಳ್ಳಲಾಗಿದ್ದ ವಿಶ್ವ ವಿಕಲಚೇತನರ ದಿನಾಚರಣೆ ಹಾಗೂ ಜಿಲ್ಲಾ ಮಟ್ಟದ ಸಮಾವೇಶ ಉದ್ಗಾಟಿಸಿ ಮಾತನಾಡಿದರು.

ವಸತಿ ನಿಗಮಗಳ ಯೋಜನೆಯಲ್ಲಿ ಮೀಸಲಾತಿ, ಗ್ರಾಮ ಪಂಚಾಯಿತಿಯಲ್ಲಿ ಶೇ.5 ರಷ್ಟು ಅನುದಾನ ಮೀಸಲಿಡುತ್ತೇನೆ. ಸರ್ಕಾರ ನಿಮ್ಮ ಜೊತೆಗಿದೆ. ವಿಕಲಚೇತನರೆಂಬ ಕೀಳರಿಮೆ ತೊರೆದು ಸಮಾಜದ ಮುಖ್ಯವಾಹಿನಿಗೆ ಬರುವಂತೆ ಅಂಗವಿಕಲರಿಗೆ ಕರೆ ನೀಡಿದರು.
ಪ್ರತಿ ಮತ ಕ್ಷೇತ್ರದಲ್ಲಿ ಶೇ. 5 ರಷ್ಟು ವಿಕಲಚೇತನರಿದ್ದಾರೆ. ಆದಾರ್ ಯೋಜನೆಯಲ್ಲಿ ಒಂದು ಲಕ್ಷ ರೂ.ಸಾಲ ಸಿಗುತ್ತದೆ. ಅದರಲ್ಲಿ ಐವತ್ತು ಸಾವಿರ ರೂ.ಸಬ್ಸಡಿ. ಲ್ಯಾಪ್‍ಟಾಪ್, ಹೊಲಿಗೆ ಯಂತ್ರ, ಅಂಧರಿಗೆ ಸ್ಮಾರ್ಟ್ ಫೋನ್‍ಗಳನ್ನು ನೀಡಲಾಗುತ್ತಿದೆ. ಸರ್ಕಾರದಿಂದ ಸಿಗುವ ಸೌಲಭ್ಯಗಳನ್ನು ಸದುಪಯೋಗಪಡಿಸಿಕೊಂಡು ಸ್ವ-ಉದ್ಯೋಗಿಗಳಾಗಿ. ಹೆಸರಾಂತ ನಾಟಕಕಾರ ಶೇಕ್ಸ್‍ಪಿಯರ್ ಹಾಗೂ ವಾಸ್ಕೋಡಿಗಾಮ ಇವರುಗಳು ಅಂಗವಿಕಲರಾಗಿದ್ದರು. ನೂನ್ಯತೆ ಮರೆತು ಎಲ್ಲರಂತೆ ಬದುಕಿ. ನಿಮ್ಮ ಏನೆ ಸಮಸ್ಯೆಗಳಿದ್ದರೂ ನೇರವಾಗಿ ನನ್ನ ಗಮನಕ್ಕೆ ತನ್ನಿ. ನನ್ನ ಹಂತದಲ್ಲಿ ಆಗುವುದನ್ನು ಬಗೆಹರಿಸುತ್ತೇನೆ ಎಂದು ಹೇಳಿದರು.
ಮುಂದಿನ ದಿನಗಳಲ್ಲಿ ವಿಕಲಚೇತನರಿಗೆ ಸಮುದಾಯ ಭವನ ಕಟ್ಟಿಸಿಕೊಡುತ್ತೇನೆ. ಮಾಳಪ್ಪನಹಟ್ಟಿಯಲ್ಲಿರುವ ಅಂಧರ ಶಾಲೆಯಲ್ಲಿ ಪ್ರತಿ ವರ್ಷವೂ ನನ್ನ ಹುಟ್ಟುಹಬ್ಬ ಆಚರಿಸಿಕೊಂಡು ಅವರೊಟ್ಟಿಗೆ ಕೆಲವು ಕಾಲ ಕಳೆಯುತ್ತೇನೆ. ಭಿಕ್ಷಾಟನೆ ಮಾಡುವುದನ್ನು ಬಿಟ್ಟು ಸಮಾಜದೊಂದಿಗೆ ಎಲ್ಲರೊಡನೆ ಬೆರೆತು ಸ್ವಂತ ಕಾಲ ಮೇಲೆ ನಿಲ್ಲುವಂತಾಗಿ ಎಂದು ವಿಕಲಚೇತನರಿಗೆ ತಿಳಿಸಿದರು.

ಚಿತ್ರದುರ್ಗ ನಗರಾಭಿವೃದ್ದಿ ಪ್ರಾಧಿಕಾರದ ಅಧ್ಯಕ್ಷ ಎಂ.ಕೆ.ತಾಜ್‍ಪೀರ್ ಮಾತನಾಡಿ ಅಂಗವಿಕಲರಿಗೆ ಅನುಕಂಪ ಬೇಡ. ಅವಕಾಶ ಸಿಗಬೇಕು. ಸಾಮಾನ್ಯರಿಗಿಂತ ವಿಕಲಚೇತನರಲ್ಲಿ ವಿಶೇಷವಾದ ಸಾಮಥ್ರ್ಯವಿರುತ್ತದೆ. ಅಂಗವಿಕಲರಿಗೆ ಕೇವಲ ಸರ್ಕಾರದ ಸಹಾಯ ಸಿಕ್ಕರೆ ಸಾಲದು. ಸಾರ್ವಜನಿಕರು, ವಿವಿಧ ಸಂಘಟನೆಗಳ ಜವಾಬ್ದಾರಿಯೂ ಇದೆ. ಸಬ್ಸಡಿ ಜೊತೆ ಬ್ಯಾಂಕ್‍ಗಳಲ್ಲಿ ಅಂಗವಿಕಲರಿಗೆ ಸಾಲ ಸಿಗುವ ವ್ಯವಸ್ಥೆ ಮಾಡುವಂತೆ ಶಾಸಕರಲ್ಲಿ ಮನವಿ ಮಾಡಿದರು.
ದಲಿತ ಮುಖಂಡ ಬಿ.ರಾಜಣ್ಣ ಮಾತನಾಡುತ್ತ ಅಂಗವಿಕಲರಿಗೆ ಸರ್ಕಾರಿ ನೌಕರಿ ಸಿಗಬೇಕು. ಚಿತ್ರದುರ್ಗದಲ್ಲಿ ಕೈಗಾರಿಕಾ ಘಟಕ ಪ್ರಾರಂಭಿಸಿದರೆ ವಿಕಲಚೇತರಿಗೆ ಉದ್ಯೋಗ ದೊರಕುತ್ತದೆ. ಹಾಗಾಗಿ ಕೈಗಾರಿಕೆ ಕಡೆ ಹೆಚ್ಚಿನ ಗಮನ ಕೊಡಬೇಕೆಂದು ಶಾಸಕ ಕೆ.ಸಿ.ವೀರೇಂದ್ರಪಪ್ಪಿರವರಲ್ಲಿ ಅಂಗವಿಕಲರ ಪರವಾಗಿ ವಿನಂತಿಸಿದರು.

ಲೇಖಕ ಹೆಚ್.ಆನಂದಕುಮಾರ್ ಮಾತನಾಡಿ ಅಂಗವಿಕಲರಿಗೆ ಅನುಕಂಪ ತೋರುವ ಬದಲು ಸ್ವಾವಲಂಬಿಗಳಾಗಿ ಬದುಕುವ ಅವಕಾಶ ಕಲ್ಪಿಸಬೇಕು. ಸರ್ಕಾರದಿಂದ ಸಾಕಷ್ಟು ನೆರವು ದೊರಕುತ್ತಿದೆ. ಎಲ್ಲವನ್ನು ಬಳಸಿಕೊಂಡು ಆತ್ಮಸ್ಥೈರ್ಯದಿಂದ ಬದುಕುವಂತೆ ಹೇಳಿದರು.
ಸೆಲ್ಕೋ ಪೌಂಡೇಶನ್‍ನ ಮಂಜುನಾಥ್ ಭಾಗವತ್ ಮಾತನಾಡುತ್ತ ಅಂಗವಿಕಲರು ಸಮಾಜದ ಮುಖ್ಯವಾಹಿನಿಗೆ ಬರಬೇಕಾದರೆ ಸರ್ಕಾರಿ ನೌಕರಿ ಸಿಗಬೇಕು, ವಿಕಲಚೇತನರು ಸ್ವ-ಉದ್ಯೋಗ ಕೈಗೊಳ್ಳಲು ಮುಂದೆ ಬಂದರೆ ಸೆಲ್ಕೋ ಪೌಂಡೇಶನ್‍ನಿಂದ ಶೇ. 50 ರಷ್ಟು ಹಣಕಾಸಿನ ನೆರವು ನೀಡುತ್ತೇವೆ. ಗ್ರಾಮ ಪಂಚಾಯಿತಿಯಲ್ಲಿ ಹದಿನೈದನೆ ಹಣಕಾಸು ಯೋಜನೆಯಡಿ ನೆರವಿದೆ. ಸಿಗಬೇಕು ಅಷ್ಟೆ ಎಂದರು.

 

ಜಿಲ್ಲಾ ಅಂಗವಿಕಲರ ಕ್ಷೇಮಾಭ್ಯುದಯ ಸಂಘದ ಜಿಲ್ಲಾಧ್ಯಕ್ಷ ನಾಗರಾಜ್ ಟಿ. ಪ್ರಧಾನ ಕಾರ್ಯದರ್ಶಿ ಎಂ.ಎಸ್.ಪಾಪಣ್ಣ, ಕಾರ್ಯದರ್ಶಿ ಕೆ.ಆನಂದ್, ಎನ್.ಮೈಲಾರಪ್ಪ ಟಿ.ಕೆ.ವೆಂಕಟೇಶ್, ಭಾನುಕಿರಣ್, ಅಜ್ಜಪ್ಪ, ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಡಿ.ಎನ್.ಮೈಲಾರಪ್ಪ, ನ್ಯಾಯವಾದಿ ಪ್ರತಾಪ್‍ಜೋಗಿ, ಬಡಗಿ ಕೆಲಸಗಾರರ ಸಂಘದ
ಅಧ್ಯಕ್ಷ ಎ.ಜಾಕಿರ್‍ಹುಸೇನ್, ವಾಗೀಶ್, ಜಾನಪದ ಜಾಗೃತಿ ಪರಿಷತ್ ಅಧ್ಯಕ್ಷ ಹೆಚ್.ಪ್ಯಾರೆಜಾನ್ ವೇದಿಕೆಯಲ್ಲಿದ್ದರು.
ವಿಕಲಚೇತನರಿಗೆ ವಿವಿಧ ಸಲಕರಣೆಗಳನ್ನು ವಿತರಿಸಲಾಯಿತು.

Facebook
Twitter
Telegram
WhatsApp
suddionenews

suddionenews

Leave a Comment

Top Stories

ಮದಕರಿಪುರ : ಊರಿಗೆ ಊರೇ ಖಾಲಿ…!

ಸುದ್ದಿಒನ್ ವಿಶೇಷ ವರದಿ ಚಿತ್ರದುರ್ಗ, ಡಿಸೆಂಬರ್. 25 : ದುರ್ಗದಿಂದ ಕೂಗಳತೆಯ ದೂರದಲ್ಲಿರುವ ಮದಕರಿಪುರ ಗ್ರಾಮ ಮಂಗಳವಾರ ಭಣಗುಡುತ್ತಿತ್ತು. ಎಲ್ಲಾ ಮನೆಗಳಿಗೂ ಬೀಗ ಹಾಕಲಾಗಿತ್ತು. ದೇವಸ್ಥಾನಗಳಲ್ಲಿ ದೇವರ ಮೂರ್ತಿಗಳು ಕೂಡಾ ಇರಲಿಲ್ಲ. ಊರಿನ ಯಾವುದೇ

ಈ ರಾಶಿಯ ಪ್ರೇಮಿಗಳು ಮದುವೆಯಾಗಲು ಕುಟುಂಬದವರನ್ನು ಒಪ್ಪಿಸಿ

ಈ ರಾಶಿಯ ಪ್ರೇಮಿಗಳು ಮದುವೆಯಾಗಲು ಕುಟುಂಬದವರನ್ನು ಒಪ್ಪಿಸಿ, ಈ ಪಂಚ ರಾಶಿಗಳ ಮದುವೆ ವಿಳಂಬದಿಂದ ಶುರುವಾಯಿತು ಟೆನ್ಷನ್, ಬುಧವಾರ- ರಾಶಿ ಭವಿಷ್ಯ ಡಿಸೆಂಬರ್-25,2024 ಸೂರ್ಯೋದಯ: 06:47, ಸೂರ್ಯಾಸ್ತ : 05:45 ಶಾಲಿವಾಹನ ಶಕೆ -1946

ಚಳ್ಳಕೆರೆ | ಒತ್ತುವರಿ ತೆರವುಗೊಳಿಸಿ ರಸ್ತೆ ನಿರ್ಮಾಣ ಕಾರ್ಯ ಆರಂಭ : ತಹಸೀಲ್ದಾರ್ ರೇಹಾನ್ ಪಾಷಾ

  ವರದಿ ಮತ್ತು ಫೋಟೋ ಕೃಪೆ ಸುರೇಶ್ ಬೆಳೆಗೆರೆ, ಚಳ್ಳಕೆರೆ, ಮೊ : 84314 13188 ಸುದ್ದಿಒನ್, ಚಳ್ಳಕೆರೆ, ಡಿಸೆಂಬರ್. 24 : ಚಳ್ಳಕೆರೆ ನಗರದ ಬಳ್ಳಾರಿ ರಸ್ತೆ ಮಾರ್ಗದಲ್ಲಿ ನಿರಾಶ್ರಿತ ನೂರಾರು ಕುಟುಂಬಗಳಿಗೆ ಪ್ರತ್ಯೇಕವಾಗಿ

error: Content is protected !!