Notice: Undefined index: options in /home/nagendra/public_html/content/plugins/elementor-pro/modules/theme-builder/widgets/site-logo.php on line 124

TV9 Property Expo: ದಿನಾಂಕ : 15-17ರಂದು ಬೆಂಗಳೂರಿನಲ್ಲಿ ಟಿವಿ9 ಎಕ್ಸ್​ಪೋ

Facebook
Twitter
Telegram
WhatsApp

ಬೆಂಗಳೂರಿನ ನಾಯಂಡಹಳ್ಳಿ ಬಳಿಯ ನಂದಿ ಲಿಂಕ್ ಗ್ರೌಂಡ್​ನಲ್ಲಿ ಮೂರು ದಿನಗಳ ಕಾಲ ಪ್ರಾಪರ್ಟಿ ಎಕ್ಸ್​ಪೋ ನಡೆಯಲಿದೆ. ಟಿವಿ9 ಕನ್ನಡ ಸ್ವೀಟ್ ಹೋಮ್​ನಿಂದ ನವೆಂಬರ್ 15ರಿಂದ 17ರವರೆಗೆ ರಿಯಲ್ ಎಸ್ಟೇಟ್ ಎಕ್ಸ್​ಪೋ ಆಯೋಜನೆ ಮಾಡಲಾಗುತ್ತಿದೆ. ಬೆಂಗಳೂರಿನ ಪ್ರಮುಖ ಲ್ಯಾಂಡ್ ಡೆವಲಪರ್​ಗಳ ವಿವಿಧ ಪ್ರಾಜೆಕ್ಟ್​ಗಳನ್ನು ಒಂದೇ ವೇದಿಕೆಯಲ್ಲಿ ಕಾಣಬಹುದು.

ಮನೆ ಅಥವಾ ಸೈಟ್ ಖರೀದಿಸಬೇಕು ಎನ್ನುವ ಆಸೆ ಪ್ರತಿಯೊಬ್ಬರಲ್ಲೂ ಇದ್ದೇ ಇರುತ್ತದೆ. ಬೆಂಗಳೂರಿನಂಥ ನಗರಗಳಲ್ಲಿ ಚಿರಾಸ್ತಿ ಹೊಂದುವುದು ಜೀವಮಾನದ ಸಾಧನೆ ಎಂಬಂತಾಗಿದೆ. ಥರಹೇವಾರಿ ಬಿಸಿನೆಸ್​ಗಳಿಗೆ ಪೋಷಕವಾಗಿರುವ ಬೆಂಗಳೂರು ನಗರದಲ್ಲಿ ಭೂಮಿ ಬೆಲೆ ರಾಕೆಟ್​ನಂತೆ ಮೇಲೇರುತ್ತಲೇ ಇದೆ. ಎಲ್ಲಾ ವರ್ಗದ ಜನರ ಆಸೆ, ಅಗತ್ಯಗಳಿಗೆ ತಕ್ಕಂತೆ ಮನೆ, ನಿವೇಶನಗಳು ಲಭ್ಯ ಇವೆ. ಆದರೆ, ಅವುಗಳನ್ನು ಹುಡುಕಲು ಸಂಯಮ ಬೇಕು. ಅಷ್ಟು ವ್ಯವಧಾನ, ಸಮಯ ಇರುವವರ ಸಂಖ್ಯೆ ಕಡಿಮೆ. ಹೀಗಾಗಿ, ದುರಾಸೆಯ ಬ್ರೋಕರ್​ಗಳ ಜಾಲಕ್ಕೆ ಬೀಳುವುವರೇ ಹೆಚ್ಚು. ಇಂಥವರಿಗೆ ಟಿವಿ9 ಸ್ವೀಟ್ ಹೋಮ್ ರಿಯಲ್ ಎಸ್ಟೇಟ್ ಎಕ್ಸ್​ಪೋ ಉತ್ತಮ ಮಾರ್ಗೋಪಾಯ ನೀಡಿದೆ. ನಗರದ ಪ್ರಮುಖ ಲ್ಯಾಂಡ್ ಡೆವಲಪರ್​ಗಳು ಈ ಎಕ್ಸ್​ಪೋದಲ್ಲಿ ಒಂದೆಡೆ ಲಭ್ಯ ಇರುತ್ತಾರೆ. ಇವರ ವಿವಿಧ ರೆಸಿಡೆನ್ಷಿಯಲ್ ಮತ್ತು ಕಮರ್ಷಿಯಲ್ ಪ್ರಾಪರ್ಟಿಗಳ ಬಗ್ಗೆ ಒಂದೇ ವೇದಿಕೆಯಲ್ಲಿ ಮಾಹಿತಿ ಪಡೆಯಬಹುದು.

ಕಳೆದ ವರ್ಷ (2023ರ ಸೆಪ್ಟೆಂಬರ್) ನಡೆದ ಟಿವಿ9 ಸ್ವೀಟ್ ಹೋಮ್ ರಿಯಲ್ ಎಸ್ಟೇಟ್ ಎಕ್ಸ್​ಪೋಗೆ ಬೆಂಗಳೂರಿಗರು ಭರ್ಜರಿ ಸ್ಪಂದನೆ ನೀಡಿದ್ದರು. 20,000ಕ್ಕೂ ಹೆಚ್ಚು ಜನರು ಎಕ್ಸ್​ಪೋಗೆ ಬಂದು ಹೋಗಿದ್ದರು. ರಿಯಲ್ ಎಸ್ಟೇಟ್ ಉದ್ಯಮದಲ್ಲಿ ಅದೊಂದು ಹೊಸ ಮೈಲಿಗಲ್ಲಿನಂತಾಗಿತ್ತು. ಈ ವರ್ಷದ ಎಕ್ಸ್​ಪೋ ಬೆಂಗಳೂರಿನ ನಾಯಂಡಹಳ್ಳಿಯಲ್ಲಿ ನವೆಂಬರ್ 15, 16 ಮತ್ತು 17ರಂದು ನಡೆಯಲಿದೆ.

ವಿವಿಧ ಬೆಲೆಸ್ತರಗಳಲ್ಲಿ ಲಕ್ಷುರಿ ವಿಲ್ಲಾ, ಪ್ಲಾಟ್, ಅಪಾರ್ಟ್​ಮೆಂಟ್, ಫಾರ್ಮ್​ಲ್ಯಾಂಡ್​ಗಳನ್ನು ಒಂದೇ ಸ್ಥಳದಲ್ಲಿ ಮಾಹಿತಿ ಪಡೆದು ಅವಲೋಕಿಸಬಹುದು.
ಉದ್ಯಮದ ತಜ್ಞರು, ಪ್ರಾಪರ್ಟಿ ಕನ್ಸಲ್ಟೆಂಟ್, ಲೀಗಲ್ ಅಡ್ವೈಸರ್​ಗಳೆಲ್ಲರೂ ಸ್ಥಳದಲ್ಲಿ ನೆರವಿಗೆ ಲಭ್ಯವಿರುತ್ತಾರೆ.
ಎಕ್ಸ್​ಪೋದಲ್ಲಿ ನೀವು ಪ್ರಾಪರ್ಟಿ ಖರೀದಿಗೆ ನೊಂದಾಯಿಸಿದರೆ ವಿಶೇಷ ರಿಯಾಯಿತಿ, ಆಕರ್ಷಕ ಪಾವತಿ ಅವಕಾಶ ಮತ್ತಿತರ ಎಕ್ಸ್​ಕ್ಲೂಸಿವ್ ಆಫರ್​ಗಳನ್ನು ಪಡೆಯಬಹುದು.
ಇತರ ಹೂಡಿಕೆದಾರರೊಂದಿಗೆ ಮಾತನಾಡಬಹುದು, ವೃತ್ತಿಪರರೊಂದಿಗೆ ಸಮಾಲೋಚಿಸಬಹುದು. ಹೀಗೆ ನಾನಾ ಅವಕಾಶಗಳುಂಟು.
ಟಿವಿ9 ಕನ್ನಡ ಸ್ವೀಟ್ ಹೋಮ್ ಕಳೆದ 10ಕ್ಕೂ ಹೆಚ್ಚು ವರ್ಷಗಳಿಂದ ಪ್ರಾಪರ್ಟಿ ಎಕ್ಸ್​ಪೋ ಆಯೋಜಿಸುತ್ತಾ ಬರುತ್ತಿದೆ. ವರ್ಷದಿಂದ ವರ್ಷಕ್ಕೆ ಎಕ್ಸ್​ಪೋದ ವಿಶ್ವಾಸಾರ್ಹತೆ, ಉಪಯುಕ್ತತೆ, ವ್ಯಾಪ್ತಿ ಹೆಚ್ಚುತ್ತಾ ಬಂದಿದೆ. ನಿಮಗೆ ಪ್ರಾಪರ್ಟಿ ಖರೀದಿಸುವ ಇರಾದೆ ಇದ್ದಲ್ಲಿ ಈ ವರ್ಷದ ಎಕ್ಸ್​ಪೋ ಖಂಡಿತ ತಪ್ಪಿಸಿಕೊಳ್ಳಬೇಡಿ…

Facebook
Twitter
Telegram
WhatsApp
suddionenews

suddionenews

Leave a Comment

Top Stories

ರವಿ ಬೆಳಗೆರೆ ವ್ಯಕ್ತಿಯಲ್ಲ, ಶಕ್ತಿ : ಕೊಂಡ್ಲಹಳ್ಳಿ ಮಹಾದೇವ

ಸುದ್ದಿಒನ್, ಮೊಳಕಾಲ್ಮೂರು, ನವೆಂಬರ್. 14 : ತನ್ನ ಮೊನಚು ಬರವಣಿಗೆ,ಮಾತಿನ ಮೂಲಕ ನಾಡಿಗೇ ಪರಿಚಯವಾಗಿದ್ದ ‘ಅಕ್ಷರ ಬ್ರಹ್ಮ’ ರವಿ ಬೆಳಗೆರೆ ಅವರು ಕನ್ನಡ ಪತ್ರಿಕೋದ್ಯಮ ಕಂಡ ‘ಎಂದೂ ಮರೆಯದ ಮಾಣಿಕ್ಯ’ ಎಂದು ಪತ್ರಕರ್ತ ಕೊಂಡ್ಲಹಳ್ಳಿ

ಉತ್ತಮ ಜೀವನಶೈಲಿಯಿಂದ ಮಧುಮೇಹ ನಿಯಂತ್ರಣ : ಡಾ. ಸತೀಶ್

  ಸುದ್ದಿಒನ್, ಚಿತ್ರದುರ್ಗ:ನ. 14 : ಮಧುಮೇಹ ಅಂದರೆ ಭಯ ಪಡಬೇಕಿಲ್ಲ. ಅದು ಜೀವನದ ಕೊನೆಯೂ ಅಲ್ಲ. ಬದುಕಿಯೂ ಬದುಕದಂತೆ ಜೀವಿಸುವುದು ಸರಿಯಲ್ಲ. ಮಧುಮೇಹಿಗಳು ಜೀವನವನ್ನು ನೋಡುವ ದೃಷ್ಟಿಕೋನವನ್ನೂ ಬದಲಾಯಿಸಿಕೊಳ್ಳಬೇಕು. ನಾನು ಮಧುಮೇಹಿ ಎಂಬ

ವಕ್ಫ್ ವಿವಾದ : ಜಮೀರ್‌ ಮೇಲೆ ರೇಣುಕಾಚಾರ್ಯ ಕಿಡಿ..!

ದಾವಣಗೆರೆ: ರಾಜ್ಯದೆಲ್ಲೆಡೆ ವಕ್ಫ್ ವಿವಾದ ಜೋರಾಗಿದೆ. ರೈತರ ಜಮೀನು, ದೇವಸ್ಥಾನಗಳ ಪಹಣಿಗಳೆಲ್ಲಾ ವಕ್ಫ್ ಹೆಸರು ಸೇರ್ಪಡೆಯಾಗಿ ವಿವಾದ ಹುಟ್ಟು ಹಾಕಿದೆ. ಈ ಸಂಬಂಧ ಕೋಪಗೊಂಡ ರೇಣುಕಾಚಾರ್ಯ, ಇದೀಗ ಸಚಿವ ಜಮೀರ್ ಅಹ್ಮದ್ ವಿರುದ್ಧ ಕೆಂಡದಂತ

error: Content is protected !!