ಟರ್ಕಿ – ಸಿರಿಯಾದಲ್ಲಿನ ಮಕ್ಕಳ ಪರಿಸ್ಥಿತಿ ಕಂಡು ಸೈನಿಕರು ಕಣ್ಣೀರು..!

ಟರ್ಕಿ ಮತ್ತು ಸಿರಿಯಾದಲ್ಲಿ ಅಕ್ಷರಶಃ ಸ್ಮಶಾನವಾಗಿದೆ. ಭೂಕಂಪನದ ಹೊಡೆತಕ್ಕೆ ಸಿಲುಕಿ ಅಲ್ಲಿನ ಜನ ನಲುಗಿ ಹೋಗಿದ್ದಾರೆ. ದಿನೇ ದಿನೇ ಸಾವಿನ ಸಂಖ್ಯೆ ಜಾಸ್ತಿಯಾಗುತ್ತಾ ಇದೆ. ಈಗಾಗಲೇ ಸಾವಿನ ಸಂಖ್ಯೆ 36 ಸಾವಿರಕ್ಕೆ ಏರಿಕೆಯಾಗಿದೆ. ಇದರ ನಡುವೆ ಭೂಕಂಪದ ಅವಶೇಷಗಳಡಿ‌ ಸಿಲುಕಿರುವ ಮಕ್ಕಳನ್ನು ಹೊರ ತೆಗೆದಾಗ ಸೈನಿಕರು ಕಣ್ಣುಗಳು ಒದ್ದೆಯಾಗುತ್ತಿವೆ, ಮನಸ್ಸು ಮರುಗುತ್ತಿದೆ.

ಸುಮಾರು ಎಂಟು ದಿನದಿಂದ ಸಿರಿಯಾ ಮತ್ತು ಟರ್ಕಿ ಎರಡು ದೇಶದಲ್ಲಜ ರಕ್ಷಣಾ ಕಾರ್ಯಾಚರಣೆ ನಡೆಯುತ್ತಿದೆ. ಅವಶೇಷಗಳಡಿ ಸಿಲುಕಿದವರನ್ನು ರಕ್ಷಣೆ ಮಾಡುತ್ತಿದ್ದಾರೆ. ಜನಿಸಿದ ಐದು ತಿಂಗಳ ಮಗುವು ಅವಶೇಷಗಳಡಿ ಸಿಲುಕಿತ್ತು. ಸುಮಾರು 100 ಗಂಟೆಗಳ ಬಳಿಕ ಆ ಮಗುವನ್ನು ಹೊರತೆಗೆಯಲಾಗಿದೆ. ಅದು ಸುರಕ್ಷಿತವಾಗಿ. ಹಾಲು, ಹಾರೈಕೆಯಿಲ್ಲದೆ ಆ ಮಗು ಆ ಅವಶೇಷಗಳಡಿ ಬದುಕಿದ್ದೆ ಹೆಚ್ಚು.

ಅಷ್ಟೇ ಅಲ್ಲ 13 ವರ್ಷದ ಬಾಲಕ ಕೂಡ ಅವಶೇಷಗಳಡಿ ಸಿಲುಕಿದ್ದ. ಸುಮಾರು 138 ಗಂಟೆಗಳ ಬಳಿಕ ಆತನನ್ನು ಹೊರ ತರಲಾಗಿದೆ. ಹಸಿವಿನಿಂದ ಬಳಲುತ್ತಿದ್ದ ಬಾಲಕ ಹೊರಗೆ ಬಂದೊಡನೆ ರಕ್ಷಣಾ ಸಿಬ್ಬಂದಿ ನೋಡಿ ನಿಟ್ಟುಸಿರು ಬಿಟ್ಟಿದ್ದಾನೆ. 104 ಗಂಟೆಯಿಂದ ಅವಶೇಷಗಳಡಿ‌ ಸಿಲುಕಿದ್ದ 43 ವರ್ಷದ ವ್ಯಕ್ತಿಯನ್ನು ಹೊರತಂದಿದ್ದಾರೆ. ಹೀಗೆ ಆ‌ ಮಕ್ಕಳು, ವಯಸ್ಸಾದವರನ್ನು ನೋಡಿ ಸೈನಿಕರು ಕಣ್ಣೀರು ಹಾಕಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *