ಉಕ್ಕಿ ಹರಿಯುತ್ತಿದೆ ತುಂಗಾ ಭದ್ರ ಡ್ಯಾಂ : ಬಳ್ಳಾರಿ ಜನತೆಗೆ ಎದುರಾಗಿದೆ ಪ್ರವಾಹದ ಭೀತಿ..!

1 Min Read

 

 

ಬಳ್ಳಾರಿ: ಈಗ ರಾಜ್ಯದ ಎಲ್ಲೆಡೆ ಮಳೆ ಸಿಕ್ಕಾಪಟ್ಟೆ ಸುರಿಯುತ್ತಿದೆ. ಪರಿಣಾಮ ಎಲ್ಲೆಡೆ ಹಳ್ಳ-ಕೊಳ್ಳ, ನದಿಗಳು, ಡ್ಯಾಂಗಳು ತುಂಬಿ ಹರಿಯುತ್ತಿವೆ. ಬಳ್ಳಾರಿಯ ತುಂಗಾಭದ್ರ ಡ್ಯಾಂ ಕೂಡ ಬಹುತೇಕ ತುಂಬಿದೆ. ಒಳ ಹರಿವು ಹೆಚ್ಚಿರುವ ಹಿನ್ನೆಲೆಯಲ್ಲಿ ನದಿಗೆ ನೀರು ಹರಿಸಲಾಗಿದೆ. ಆದ್ದರಿಂದ ಬಳ್ಳಾರಿ ಜಿಲ್ಲೆಯ ವುವಿಧ ಪ್ರದೇಶಗಳಲ್ಲಿ ಪ್ರವಾಹ ಪರಿಸ್ಥಿತಿ ಎದುರಾಗಿದೆ.

ಈಗಾಗಲೇ ತುಂಗಾಭದ್ರ ನದಿಗೆ ಒಳಹರಿವು 1,47,122 ಕ್ಯೂಸೆಕ್ ಆಗಿದೆ. ಹಿರ ಹರಿವು 1,56,482 ಕ್ಯೂಸೆಕ್ ಆಗಿದೆ. 1633 ಅಡಿಯ ಡ್ಯಂನಲ್ಲಿ ಸದ್ಯ 1630 ಅಡಿ ನೀರಿನ ಸಂಗ್ರಹವಿದೆ. 97,4 ಟಿಎಂಸಿ ಅಡಿ ನೀರು ಸಂಗ್ರಹವಾಗಿದೆ. ಜಲಾಶಯಕ್ಕೆ ಹೆಚ್ಚಿನ ಒಳಹರಿವು ಇರುವ ಕಾರಣ ಈಗಾಗಲೇ ತುಂಗಾಭದ್ರಾ ನದಿಗೆ ನೀರು ಹರಿಸಲಾಗುತ್ತಿದೆ. ಬಳ್ಳಾರಿ ಜಿಲ್ಲಾಧಿಕಾರಿ ಪ್ರಶಾಂತ್ ಕುಮಾರ್ ಮಿಶ್ರಾ ಅವರು ತುಂಗಾಭದ್ರಾ ಡ್ಯಾಂಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

 

ತುಂಗಾ ಭದ್ರಾ ಡ್ಯಾಂಗೆ ಅಪಾರವಾದ ನೀರು ಹರಿದು ಬರುತ್ತಿದ್ದು, ಜಲಾಶಯದಿಂದಾನೂ ಸಾಕಷ್ಟು ಪ್ರಮಾಣದಲ್ಲಿ ನೀರನ್ನು ಹೊರಗೆ ಬಿಡಲಾಗುತ್ತದೆ. ಜಿಲ್ಲೆಯ ಕಂಪ್ಲಿ ಮತ್ತು ಸಿರಗುಪ್ಒ ತಾಲೂಕು ನದಿಭಾಗದ ಜನರು ನದಿಪಾತ್ರಕ್ಕೆ ತೆರಳದಂತೆ ಜಿಲ್ಲಾಧಿಕಾರಿ ಎಚ್ಚರಿಕೆಯನ್ನು ನೀಡಿದ್ದಾರೆ. ನೀರಿನ ರಭಸ ಜೋರಾಗಿದ್ದು, ಅನಾಹುತಗಳು ಆಗುವ ಸಾಧ್ಯತೆ ಇರುವ ಕಾರಣ, ಯಾರು ನದಿಪಾತ್ರಕ್ಕೆ ತೆರಳಬಾರದು ಎಂದು ಸೂಚಿಸಿದ್ದಾರೆ.

ಈಗಾಗಲೇ ಸೋಷಿಯಲ್ ಮೀಡಿಯಾದಲ್ಲಿ ನೋಡುವಂತೆ ಮಳೆಗಾಲದಲ್ಲಿ ಪ್ರಕೃತಿ ಸೌಂದರ್ಯ ನೋಡಲು ಹೋಗಿ ಪ್ರಾಣ ಕಳೆದುಕೊಂಡವರು ಜಾಸ್ತಿ ಇದ್ದಾರೆ. ಅದರಲ್ಲೂ ಜೋರಾದ ಅಲೆಯೊಂದಿಗೆ ಬರುವ ನೀರಿನಲ್ಲಿ ಹುಡುಗಾಟ‌ ಆಡುವುದು ಪ್ರಾಣಕ್ಕೆ ಕುತ್ತು ತಂದಿದೆ. ಹೀಗಾಗಿ ಎಲ್ಲರು ಎಚ್ಚರಿಕೆಯಿಂದ ಇರಬೇಕಾಗಿರುತ್ತದೆ.

Share This Article
Leave a Comment

Leave a Reply

Your email address will not be published. Required fields are marked *