ಭಾರತಕ್ಕೆ ಟ್ರಂಪ್ ಸಡನ್ ಶಾಕ್ : ಶೇ. 25 ರಷ್ಟು ಸುಂಕ ವಿಧಿಸಿ ಘೋಷಣೆ…!

ಸುದ್ದಿಒನ್, ಜುಲೈ. 30 :

ರಷ್ಯಾದೊಂದಿಗಿನ ಸ್ನೇಹವೇ ಭಾರತಕ್ಕೆ ಶಾಪವಾಗಿ ಪರಿಣಮಿಸಿದೆ. ಏಕೆಂದರೆ ನಮ್ಮ ದೇಶ ರಷ್ಯಾದೊಂದಿಗೆ ಹೊಂದಿರುವ ಉತ್ತಮ ಸ್ನೇಹ ಸಂಬಂಧ, ಭಾರತವು ಆ ದೇಶದಿಂದ ಶಸ್ತ್ರಾಸ್ತ್ರಗಳನ್ನು ಖರೀದಿಸುವುದು ಮತ್ತು ಕಚ್ಚಾ ತೈಲವನ್ನು ಆಮದು ಮಾಡಿಕೊಳ್ಳುವುದು ಇದೆಲ್ಲವನ್ನೂ ನೋಡಿ ಸಹಿಸಿಕೊಳ್ಳಲಾಗದ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ಭಾರತದ ಮೇಲೆ ತನ್ನ ಅಸಹನೆಯನ್ನು ವ್ಯಕ್ತಪಡಿಸಿದೆ ಕೆರಳಿಸಿದೆ. ಇದರ ಪರಿಣಾಮವಾಗಿ, ಟ್ರಂಪ್ ಭಾರತದ ಮೇಲೆ ಶೇಕಡಾ 25 ರಷ್ಟು ಸುಂಕವನ್ನು ವಿಧಿಸಿದ್ದಾರೆ. ಭಾರತದೊಂದಿಗೆ ವ್ಯಾಪಾರ ಒಪ್ಪಂದವನ್ನು ಅಮೆರಿಕ ನಿಗದಿಪಡಿಸಿದ ಗಡುವಿನೊಳಗೆ ಒಪ್ಪಂದಕ್ಕೆ ಮುಂದಾಗಲಿಲ್ಲ ಆದ್ದರಿಂದ ಭಾರತದ ಮೇಲೆ ಸುಂಕಗಳನ್ನು ವಿಧಿಸುತ್ತಿರುವುದಾಗಿ ಟ್ರಂಪ್ ಹೇಳಿದರು. ಸುಂಕಗಳನ್ನು ವಿಧಿಸುವಾಗ, ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಭಾರತದ ವಿರುದ್ಧ ಬೆದರಿಕೆಯ ರೀತಿಯಲ್ಲಿ ಮಾತನಾಡಿದರು.

 

ಭಾರತದ ಮೇಲೆ ಸುಂಕ ವಿಧಿಸುವ ಕೆಲವು ಗಂಟೆಗಳ ಮೊದಲು, ಟ್ರಂಪ್ ಶ್ವೇತಭವನದಲ್ಲಿ ವರದಿಗಾರರಿಗೆ ಪ್ರಮುಖ ಹೇಳಿಕೆಗಳನ್ನು ನೀಡಿದರು. ಅಮೆರಿಕ ನಿಗದಿಪಡಿಸಿದ ಗಡುವಿನೊಳಗೆ ಭಾರತದೊಂದಿಗೆ ವ್ಯಾಪಾರ ಒಪ್ಪಂದವನ್ನು ತಲುಪಲು ಸಾಧ್ಯವಿಲ್ಲ ಮತ್ತು ಈ ವಿಷಯದ ಕುರಿತು ಮಾತುಕತೆಗಳು ಇನ್ನೂ ನಡೆಯುತ್ತಿವೆ ಎಂದು ಅವರು ಹೇಳಿದರು. ಆಗಸ್ಟ್ 1 ರೊಳಗೆ ಮಾತುಕತೆಗಳು ಅಂತಿಮಗೊಳ್ಳದಿದ್ದರೆ, ಭಾರತದ ಮೇಲೆ 20 ರಿಂದ 25 ಪ್ರತಿಶತದಷ್ಟು ಸುಂಕಗಳನ್ನು ವಿಧಿಸುವ ಬಗ್ಗೆ ಯೋಚಿಸುತ್ತಿರುವುದಾಗಿ ಅವರು ಹೇಳಿದರು. ಭಾರತ ಮತ್ತು ಪಾಕಿಸ್ತಾನ ನಡುವಿನ ಯುದ್ಧವು ನನ್ನ ಮಧ್ಯಸ್ಥಿಕೆಯಲ್ಲಿಯೇ ಕೊನೆಗೊಂಡಿತು ಎಂದು ಅವರು ಹೇಳಿದರು. ಆದರೂ ಇತರೆ ದೇಶಗಳಿಗೆ ಹೋಲಿಸಿದರೆ ನಮಗೆ ಭಾರತವು ಅವರ ಉತ್ತಮ ಸ್ನೇಹಿತನಾಗಿದ್ದರೂ ಕೂಡಾ ನಮ್ಮ ಮೇಲೆ ಹೆಚ್ಚಿನ ಸುಂಕಗಳನ್ನು ವಿಧಿಸುತ್ತಿದೆ ಎಂದು ಟ್ರಂಪ್ ಹೇಳಿದರು.

ಆಗಸ್ಟ್ 1 ರೊಳಗೆ ಮಾತುಕತೆ ಅಂತಿಮಗೊಳ್ಳದಿದ್ದರೆ ಸುಂಕ ವಿಧಿಸುವುದಾಗಿ ಹೇಳಿದ್ದ ಡೊನಾಲ್ಡ್ ಟ್ರಂಪ್, ಕೆಲವೇ ಗಂಟೆಗಳಲ್ಲಿ ತಮ್ಮ ನಿರ್ಧಾರ ಬದಲಾಯಿಸಿ ಭಾರತದ ಮೇಲೆ ಸುಂಕ ವಿಧಿಸುವುದಾಗಿ ಘೋಷಿಸಿದರು. ಇದಕ್ಕೆ ಪ್ರಮುಖ ಕಾರಣ ಭಾರತ ರಷ್ಯಾದೊಂದಿಗಿನ ಸ್ನೇಹ ಸಂಬಂಧ ಮತ್ತು ಕಳೆದ ಕೆಲವು ದಿನಗಳಲ್ಲಿ ರಷ್ಯಾದಿಂದ ಕಚ್ಚಾ ತೈಲ ಮತ್ತು ಶಸ್ತ್ರಾಸ್ತ್ರಗಳ ಖರೀದಿಗೆ ಮುಂದಾಗಿರುವುದೇ ಅಮೇರಿಕಾದ ಸಿಟ್ಟಿಗೆ ಕಾರಣ ಎನ್ನಲಾಗಿದೆ.

Share This Article
Leave a Comment

Leave a Reply

Your email address will not be published. Required fields are marked *

Enable Notifications OK No thanks