ಬೆಂಗಳೂರು: ಜನಪ್ರತಿನಿಧಿ ಸಿವಿಲ್ಸ್ ನಲ್ಲಿ ವಾರೆಂಟ್ ಆಗಿತ್ತು. ನಾನು ಮತ್ತೆ ಹೋಗಬೇಕಿತ್ತು. ನಾವೂ ದೇಶದ ರೈತರ ವಿಚಾರದಲ್ಲಿ ಹೋರಾಟ ಮಾಡಿದ್ದೆವು. ದೂರಿನಲ್ಲಿ ಹೇಳುತ್ತಾರೆ. ಫ್ರೀಡಂ ಪಾರ್ಕ ನಲ್ಲಿ ನಡೆದ ಪ್ರತಿಭಟನೆಯಲ್ಲಿ ನಾವೂ ಅಪರಾಧಿಗಳಾಗಿದ್ದೇವೆ ಅಂತ ಕೇಸನ್ನು ಹಾಕಿದ್ದಾರೆ. ಆರು ಜನರ ಮೇಲೆ ಕೇಸ್ ಆಗಿದೆ. ಎ1 ನಾನು. ಮಂಜುನಾಥ್, ಶಫಿವುಲ್ಲಾ ಹೀಗೆ ಹಲವರ ಮೇಲೆ ಕೇಸಾಗಿದೆ. ಇವತ್ತು ಸಮನ್ಸ್ ಹಾಕಿದ್ದಾರೆ. ಉದ್ದೇಶ ಪೂರ್ವಕವಾಗಿ ನಮ್ಮ ಮೇಲೆ ಕೇಸ್ ಹಾಕಿದ್ದಾರೆ. ಕೋರ್ಟ್ ಹೋಗಿದ್ದೆ, ಬೇಲ್ ತಗೊಂಡಿದ್ದೆ ವಾಪಾಸ್ ಬಂದಿದ್ದೀನಿ ಎಂದು ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಹೇಳಿದ್ದಾರೆ.
ಬರೀ ನಮಗೆ ಮಾತ್ರ ಕೇಸ್ ಹಾಕುತ್ತಾರೆ. ಪಾದಯಾತ್ರೆ ಇರಬಹುದು. ಕನಕಪುರ, ಬೆಂಗಳೂರು ಇರಬಹುದು. ಬೇಕಿದ್ದವರನ್ನು ಹಾಕುವುದು, ಬೇಡದೆ ಇರುವವರನ್ನು ಬಿಡುವುದು. ಎಲ್ಲಾದರಲ್ಲೂ ನಂಗೆ ಕೇಸ್ ಮಾಡಿದ್ದಾರೆ. ಬರೀ ದ್ವೇಷದ ರಾಜಕಾರಣ. ಏನಾದರೂ ಮಾಡಿ ಕೋರ್ಟ್ ಗೆ ಅಲಿಬೇಕು. ತೊಂದರೆ ಮಾಡಬೇಕು ಅನ್ನೋದಷ್ಟೇ ಉದ್ದೇಶವಾಗಿರುತ್ತೆ. ಈಶ್ವರಪ್ಪ, ರಾಘವೇಂದ್ರ ಎಲ್ಲಾ ಶಿವಮೊಗ್ಗದಲ್ಲಿ ಮಾಡಿದ್ರಲ್ಲ. ಬಹಳ ಕೆಲಸ ಮಾಡುದ್ರಲ್ಲ. ಅಲ್ಲಿರಲಿಲ್ಲವ ಕೋರ್ಟ್ ಎಂದು ಪ್ರಶ್ನಿಸಿದ್ದಾರೆ.
ಪಿಎಸ್ಐ ಅಕ್ರಮದ ಬಗ್ಗೆ ಮಾತನಾಡಿದ್ದು, ಯಾರೇ ಆಗಿರಲಿ, ನಾವೇ ಆಗಿರಲಿ. ಇದನ್ನು ಬೆಳಕಿಗೆ ತಂದಿದ್ದು ಪ್ರಿಯಾಂಕ ಖರ್ಗೆಯವರೆ. ಯಾರು ಏನು ಮಾಡಿದರೋ, ಯಾರನ್ನು ಭೇಟಿ ಮಾಡಿದರೋ, ನೇರವಾಗಿ ಹೋಂಮಿನಿಸ್ಟರ್ ಜೊತೆಯಿದ್ದಂತ ಫೋಟೋಗ್ರಾಫ್ ಮತ್ತೊಂದು ಎಲ್ಲಾ ಬಂದಿದೆ. ಪೊಲೀಸರೆ ವಿಚಾರಣೆ ನಡೆಸುತ್ತಿದ್ದಾರೆ. ಇದು 52 ಸಾವಿರ ಜನ ಪರೀಕ್ಷೆ ಬರೆದಿದ್ದಾರಲ್ಲ ಅವರೆಲ್ಲರಿಗೂ ಅನ್ಯಾಯವಾಗಿದೆ. 50 ಲಕ್ಷ 70 ಲಕ್ಷ ಕೊಟ್ಟಿದ್ದಾರೆಂಬ ಆರೋಪವಿದೆ ಅದನ್ನು ಜಾಲಾಡ್ತಾ ಇದ್ದಾರೆ. ಇದೊಂದು ಭ್ರಷ್ಟ ಸರ್ಕಾರ. ಪ್ರತಿಯೊಂದರಲ್ಲೂ ಭ್ರಷ್ಟ ಸರ್ಕಾರ. ಕೋವಿಡ್, ನೇಮಕಾತಿ, ಮತ, ಪರ್ಸಂಟೇಜ್, ಬೆಂಗಳೂರು ಕಸದಿಂದಲೂ ಕಮಿಷನ್ ಕಮಿಷನ್ ಸರ್ಕಾರವಾಗಿದೆ.