ವರದಿ ಮತ್ತು ಫೋಟೋ : ಕೆ.ಎಂ.ಮುತ್ತುಸ್ವಾಮಿ ಕಣ್ಣನ್
ಮೊ : 78998 64552
ಚಿತ್ರದುರ್ಗ, (ಆ.14) : ದೇಶದ 75 ನೇ ಸ್ವಾತಂತ್ರ್ಯೋತ್ಸವ ಅಮೃತ ಮಹೋತ್ಸವವನ್ನು ಪ್ರತಿಯೊಬ್ಬರು ತಮ್ಮ ತಮ್ಮ ಮನೆಗಳ ಮೇಲೆ ತ್ರಿವರ್ಣ ಧ್ವಜ ಹಾರಿಸುವ ಮೂಲಕ ಎಲ್ಲಾ ಜಾತಿ ಧರ್ಮದವರು ಒಗ್ಗಟ್ಟಾಗಿದ್ದೇವೆನ್ನುವ ಸಂದೇಶವನ್ನು ಶತ್ರುದೇಶಗಳಿಗೆ ರವಾನಿಸಬೇಕಿದೆ ಎಂದು ಬಿಜೆಪಿ.ಯುವ ಮುಖಂಡ, ದಾವಣಗೆರೆ ಸಂಸದ ಜಿ.ಎಂ.ಸಿದ್ದೇಶ್ವರ್‍ರವರ ಪುತ್ರ ಜಿ.ಎಸ್.ಅನಿತ್ ಕರೆ ನೀಡಿದರು.
ರಾಷ್ಟ್ರೀಯ ಹೆದ್ದಾರಿ-13 ನಗರದ ಹೊರವಲಯದಲ್ಲಿರುವ ಪಿಳ್ಳೇಕೆರನಹಳ್ಳಿಯಲ್ಲಿ ಭಾನುವಾರ ರಾಷ್ಟøಧ್ವಜ ವಿತರಿಸಿ ಮಾತನಾಡಿದ ಜಿ.ಎಸ್.ಅನಿತ್ ಬ್ರಿಟೀಷರು ಇನ್ನೂರು ವರ್ಷಗಳ ಕಾಲ ನಮ್ಮ ದೇಶದಲ್ಲಿ ಆಡಳಿತ ನಡೆಸಿದ್ದಾರೆ. ಆಗ ದೇಶದ ಸ್ವಾತಂತ್ರ್ಯಕ್ಕಾಗಿ ಅನೇಕ ಹಿರಿಯರು ಹೋರಾಡಿ ಪ್ರಾಣ ತ್ಯಾಗ ಮಾಡಿದ್ದಾರೆ. ದೇಶಕ್ಕಾಗಿ ತ್ಯಾಗ ಬಲಿದಾನ ಮಾಡಿದ ಹುತಾತ್ಮರನ್ನು ಈ ಸಂದರ್ಭದಲ್ಲಿ ಎಲ್ಲರೂ ಸ್ಮರಿಸಿಕೊಳ್ಳಬೇಕು ಎಂದು ಹೇಳಿದರು.
ದೇಶದ ಪ್ರಧಾನಿ ನರೇಂದ್ರಮೋದಿರವರು ಹರ್‍ಘರ್ ತಿರಂಗಾ ಪ್ರತಿ ಮನೆಗಳ ಮೇಲೆ ರಾಷ್ಟ್ರಧ್ವಜ ಹಾರಾಡಬೇಕೆಂಬ ಸಂದೇಶ ನೀಡಿರುವುದನ್ನು ಗೌರವಿಸಿ ಎಲ್ಲರೂ ಮನೆಗಳ ಮೇಲೆ ಭಾವುಟ ಹಾರಿಸಿ ಗೌರವ ಸಲ್ಲಿಸಬೇಕು. ಭಾರತವನ್ನು ವಿಶ್ವಗುರುವನ್ನಾಗಿಸುವ ಕಡೆ ಶ್ರಮಿಸುತ್ತಿರುವ ಪ್ರಧಾನಿ ಮೋದಿರವರು ಸ್ವಚ್ಚಭಾರತ್ ಕನಸು ಕಂಡಿದ್ದಾರೆ. ಕೋವಿಡ್ ಸಂದರ್ಭದಲ್ಲಿ ಉಚಿತ ಲಸಿಕೆ, ಹೌಸಿಂಗ್ ಫಾರ್ ಆಲ್, ಶೌಚಾಲಯ ನಿರ್ಮಾಣ ಹೀಗೆ ಹತ್ತು ಹಲವಾರು ಕೊಡುಗೆಗಳನ್ನು ದೇಶದ ಜನರಿಗೆ ನೀಡಿದ್ದಾರೆ.
ನಮ್ಮವರ ಒಳಜಗಳದಿಂದಲೆ ಬ್ರಿಟೀಷರು ಭಾರತದೊಳಗೆ ನುಸುಳಲು ಕಾರಣವಾಯಿತು. ನಮ್ಮಲ್ಲಿಯೇ ಬೇರೆ ದೇಶದವರಿಗೆ ಜೈಕಾರ ಹಾಕುವವರು ಇದ್ದಾರೆ. ಹಾಗಾಗಿ ಶತ್ರುಗಳಿಗೆ ಒಗ್ಗಟ್ಟು ತೋರಿಸಬೇಕಾಗಿರುವುದರಿಂದ ಚಿತ್ರದುರ್ಗ ಹಾಗೂ ಹೊಳಲ್ಕೆರೆಯಲ್ಲಿ ಏಳುವರೆ ಸಾವಿರ ಭಾವುಟಗಳನ್ನು ನೀಡಿದ್ದೇವೆ. ಯಾವುದೇ ಜಾತಿ ಧರ್ಮದ ತಾರತಮ್ಯವಿಲ್ಲದೆ ಎಲ್ಲರೂ ತ್ರಿವರ್ಣ ಧ್ವಜ ಹಾರಿಸಿ ದೇಶಭಕ್ತಿ ಪ್ರದರ್ಶಿಸುವಂತೆ ಮನವಿ ಮಾಡಿದರು.
ಬೂತ್ ಅಧ್ಯಕ್ಷರುಗಳಾದ ಪಿ.ಎಂ.ಸಿದ್ದಪ್ಪ ಪಿಳ್ಳೆಕೆರನಹಳ್ಳಿ, ಪಿ.ಎಸ್.ಶಂಕರಪ್ಪ, ಬಿಜೆಪಿ.ಗ್ರಾಮಾಂತರ ಮಂಡಲ ಅಧ್ಯಕ್ಷ ನಂದಿ ನಾಗರಾಜ್, ಜಿಲ್ಲಾ ಉಪಾಧ್ಯಕ್ಷೆ ಚಂದ್ರಿಕಾ ಲೋಕನಾಥ್, ಜಿ.ಎ.ಶಿವಕುಮಾರ್, ಉಮಾಪತಿ, ಚಂದ್ರು, ಕುಮಾರ್ ಈ ಸಂದರ್ಭದಲ್ಲಿ ಹಾಜರಿದ್ದರು.