ಚಿತ್ರದುರ್ಗ,(ಮೇ.05) : ನಗರದ ಸಂತ ಜೋಸೆಫರ ಕಾನ್ವೆಂಟ್ ಕನ್ನಡ ಮಾಧ್ಯಮಿಕ ಶಾಲೆಯಲ್ಲಿ ಓದಿದ ಹಳೆಯ ವಿದ್ಯಾರ್ಥಿಗಳಿಂದ ಗುರುವಂದನಾ ಮತ್ತು ನಿವೃತ್ತ ಶಿಕ್ಷಕರಿಗೆ ಗೌರವಾರ್ಪಣೆ ಕಾರ್ಯಕ್ರಮವು ಮೇ.8 ರ ಭಾನುವಾರ ಬೆಳಿಗ್ಗೆ 10ಕ್ಕೆ ಕಾನ್ವೆಂಟ್ ಶಾಲಾ ಆವರಣದಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ಹಳೆಯ ವಿದ್ಯಾರ್ಥಿ ಬಳಗದ ಮುದ್ದು ಮಕ್ಕಳ ಸಂಚಾಲಕರಾದ ಗಿರೀಶ್ ಯು.ಸಿ. ತಿಳಿಸಿದ್ದಾರೆ.
ಕಾನ್ವೆಂಟ್ ಶಾಲೆಯ ಶಿಕ್ಷಕಿಯಾಗಿ ನಿವೃತ್ತಿ ಹೊಂದಿದ ನಂತರವೂ ಸಹಾ ಶಿಕ್ಷಕಿಯಾಗಿ ಸೇವೆಯನ್ನು ಮುಂದುವರೆಸಿ 50 ವರ್ಷ ಪೋರೈಸುತ್ತಾ ಬಂದಿರುವ ಶ್ರೀಮತಿ ಪೌಲಿನ್ ಫ್ಯ್ರಾಂಕ್ ರವರನ್ನು ಸೇರಿದಂತೆ ನಿವೃತ್ತ ಶಿಕ್ಷಕರಿಗೆ ಗೌರವಾರ್ಪಣೆ ಕಾರ್ಯಕ್ರಮ ನಡೆಯಲಿದೆ. ಸಮಾರಂಭಧ ಅಧ್ಯಕ್ಷತೆಯನ್ನು ಸಿಸ್ಟರ್ ರೋಸ್ಲಿನ್ ನೊರೋನ್ನ ವಹಿಸಲಿದ್ದಾರೆ.