ವಿಜಯಪುರ: ಜಿಲ್ಲೆಯಲ್ಲಿ ಇಂದು ಕಾಂಗ್ರೆಸ್ ಪಕ್ಷದ ವತಿಯಿಂದ ಜಲಾಂದೋಲನ ಸಮಾವೇಶ ನಡೆಸಲಾಗಿತ್ತು. ಆದರೆ ಈ ಕಾರ್ಯಕ್ರಮದಲ್ಲಿ ಕುರ್ಚಿ ಮತ್ತು ಬ್ಯಾನರ್ ವಿಚಾರಕ್ಕೆ ಗಲಾಟೆ ನಡೆದಿದೆ. ಈ ವೇಳೆ ಕಾಂಗ್ರೆಸ್ ಮುಖಂಡ ಎಂ ಆರ್ ತಾಂಬೋಳಿ ಅವರ ಇಬ್ಬರು ಮಕ್ಕಳಿಗೆ ಚಾಕು ಇರಿಯಲಾಗಿತ್ತು. ಇದೀಗ ಆ ಇಬ್ಬರನ್ನು ಆಸ್ಪತ್ರೆಗೆ ಸೇರಿಸಿ, ಚಿಕಿತ್ಸೆ ಕೊಡಿಸಲಾಗಿದೆ.
ನಯುಮ್ ತಾಂಬೋಳಿ ಹಾಗೂ ನಿಹಾಲ್ ತಾಂಬೋಳಿಗೆ ಚಾಕು ಇರಿಯಲಾಗಿತ್ತು. ಜಲಾಂದೋಲನಾ ಸಮಾವೇಶಕ್ಕೂ ಮುನ್ನ ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿ ಇರ್ಫಾನ್ ಶೇಕ್ ಮತ್ತು ಎಂ ಆರ್ ತಾಂಬೋಳಿ ನಡುವೆ ಗಲಾಟೆ ನಡೆದಿತ್ತು. ಈ ಗಲಾಟೆಯ ನಡುವೆ ಮಕ್ಕಳಿಬ್ಬರಿಗೆ ಚಾಕು ಇರಿಯಲಾಗಿತ್ತು. ಇರ್ಫಾನ್ ಶೇಕ್, ಹನ್ನಾನ್ ಶೇಖ್, ಕನ್ನಾನ್ ಮುಶ್ರೀಫ್ ಅವರು ಚಾಕು ಇರಿದಿದ್ದಾರೆ. ಈ ಸಂಬಂಧ ಗೋಲ್ ಗುಂಬಜ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.