ಅಗತ್ಯ ಇರೋರನ್ನ ಮಾತ್ರ ವರ್ಗಾವಣೆ ಮಾಡ್ತೀವಿ : ಹೆಚ್ಡಿಕೆಗೆ ಪರಮೇಶ್ವರ್ ಟಾಂಗ್

1 Min Read

 

 

ಬೆಂಗಳೂರು: ಮಾಜಿ ಸಿಎಂ ಕುಮಾರಸ್ವಾಮಿ ವರ್ಗಾವಣೆ ದಂಧೆ ಬಗ್ಗೆ ಸಾಕಷ್ಟು ಬಾರಿ ಆರೋಪ ಮಾಡಿದ್ದಾರೆ. ಮತ್ತೆ ವರ್ಗಾವಣೆ ದಂಧೆ ಬಗ್ಗೆ ಮಾತನಾಡಿದ್ದಾರೆ. ಇದಕ್ಕೆ ಗೃಹ ಸಚಿವ ಜಿ ಪರಮೇಶ್ವರ್ ಸರಿಯಾಗಿ ತಿರುಗೇಟು ನೀಡಿದ್ದಾರೆ. ಕುಮಾರಸ್ವಾಮಿ ಏನು ಬೇಕಾದರೂ ಕಮೆಂಟ್ ಮಾಡಲಿ. ಆದರೆ ಸರ್ಕಾರ ನಡೆಸುವವರು ನಾವೂ. ನಮಗೆ ಸರಿ ಕಾಣಿಸಿದ್ದನ್ನು ಮಾಡುತ್ತೇವೆ ಎಂದಿದ್ದಾರೆ.

ನಮ್ಮಲ್ಲಿ 1200 ಇನ್ಸ್‌ಪೆಕ್ಟರ್ಸ್ ಇದ್ದಾರೆ. ಆದ್ರೆ ನಾವೂ ಅಷ್ಡನ್ನು ವರ್ಗಾವಣೆ ಮಾಡುವುದಿಲ್ಲ. ಎಷ್ಟು ಮಂದಿ ಅಗತ್ಯವಿದೆಯೋ ಅಷ್ಟು ಮಂದಿಯನ್ನು ಮಾತ್ರ ಮಾಡುತ್ತೇವೆ. ಯಾವ ಏರಿಯಾದಲ್ಲಿ ಯಾರನ್ನು ಹಾಕಿದರೆ ಅಪರಾಧ ಪ್ರಕರಣಗಳು ಕಡಿಮೆಯಾಗುತ್ತವೆ ಎಂಬುದನ್ನು ಅಂದಾಜಿಸಿ, ಅವರನ್ನು ವರ್ಗಾವಣೆ ಮಾಡಿರುತ್ತೇವೆ. ಇವರು ಹೇಳಿದ ಹಾಗೇ ಮಾಡೋದಿಲ್ಲ.

ಕುಮಾರಸ್ವಾಮಿ ಕೂಡ ಮುಖ್ಯಮಂತ್ರಿಯಾಗಿದ್ದವರು. ಆ ಸಮಯದಲ್ಲೂ ನಾನೇ ಗೃಹ ಮಂತ್ರಿಯಾಗಿದ್ದೆ. ಇವರು ಮುಖ್ಯಮಂತ್ರಿಯಾಗಿದ್ದಾಗ ಯಾವ ರೀತಿಯ ಸಲಹೆ ಸೂಚನೆಗಳನ್ನು ನೀಡುತ್ತಿದ್ದರು ಎಂಬುದನ್ನು ನಾನು ಹೇಳುವುದಕ್ಕೆ ಆಗಲ್ಲ ಎಂದಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *